ಮಂಗಳವಾರ, ಏಪ್ರಿಲ್ 29, 2025
HomeCinemaSanjjanaa Galrani Adam Bidapa : ಮಾನಸಿಕ ಕಿರುಕುಳದ ಆರೋಪ‌ : ಪೊಲೀಸ್ ಠಾಣೆ ಮೆಟ್ಟಿಲೇರಿದ...

Sanjjanaa Galrani Adam Bidapa : ಮಾನಸಿಕ ಕಿರುಕುಳದ ಆರೋಪ‌ : ಪೊಲೀಸ್ ಠಾಣೆ ಮೆಟ್ಟಿಲೇರಿದ ನಟಿ ಸಂಜನಾ

- Advertisement -

ಸದಾ ಒಂದಿಲ್ಲೊಂದು ಕಾರಣಕ್ಕೆ ವಿವಾದಕ್ಕೆ ಗುರಿಯಾಗೋ ನಟಿ ಸಂಜನಾ ಗರ್ಲಾನಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಆದರೆ ಈ ಭಾರಿ ಸಂಜನಾ ಯಾವುದೇ ಎಡವಟ್ಟು ಮಾಡಿಕೊಂಡಿಲ್ಲ ಬದಲಾಗಿ ತಮಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪ್ರಸಿದ್ಧ ವಸ್ತ್ರವಿನ್ಯಾಸಕ, ಕೊರಿಯೋ ಗ್ರಾಫರ್ ಹಾಗೂ ಸೆಲೆಬ್ರೆಟಿ ಪ್ರಸಾದ್ ಬಿದ್ದಪ್ಪ ಪುತ್ರನ ವಿರುದ್ದ ಸಂಜನಾ ಕಿರುಕುಳದ ದೂರು ದಾಖಲಿಸಿದ್ದಾರೆ. ಸಂಜನಾ ಗಲ್ರಾನಿ (Sanjjanaa Galrani) ಕಿರುಕುಳ ನೀಡಿದಕ್ಕೆ ಪ್ರಕರಣ ದಾಖಲಿಸಿ ಕೊಂಡು ಪ್ರಸಾದ್ ಬಿದ್ದಪ್ಪ ಪುತ್ರನನ್ನು (Adam Bidapa) ವಶಕ್ಕೆ ಪಡೆದಿರುವ ಬೆಂಗಳೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಪ್ರಸಾದ್ ಬಿದ್ದಪ್ಪ ಪುತ್ರ ಆ್ಯಡಂ ಬಿದ್ದಪ್ಪನನ್ನು ಇಂದಿರಾನಗರ ಪೊಲೀಸರು ಮಡಿಕೇರಿಯ ರೆಸಾರ್ಟ್ ವೊಂದರಿಂದ ವಶಕ್ಕೆ ಪಡೆದಿದ್ದಾರೆ. ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ನ್ಯಾಯಾಧೀಶರ ಮುಂದೇ ಹಾಜರುಪಡಿಸಲಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ಆ್ಯಡಂ ಬಿದ್ದಪ್ಪ ತಮ್ಮ ಮೊಬೈಲ್ ನಿಂದ ಸಂಜನಾ ಗಲ್ರಾನಿ ಮೊಬೈಲ್ ಗೆ Hi ಎಂದು ಮೆಸೆಜ್ ಕಳುಹಿಸಿದ್ದಾರೆ. ಈ ವೇಳೆ ಸಂಜನಾ ಮೊಬೈಲ್ ನಿಂದ ಅಟೋ ರಿಪ್ಲ್ಯೆ ಆಫ್ಸನ್ ನಿಂದ ಮೆಸೆಜ್ ಬಂದಿದೆ.

ಸಂಜನಾ ಗಲ್ರಾನಿ ಫೌಂಡೇಶನ್ ಇರೋದರಿಂದ ನಾನು ನಿಮಗೆ ಹೇಗೆ ಸಹಾಯ ಮಾಡಬಲ್ಲೇ ಎಂಬರ್ಥದಲ್ಲಿ ಮೆಸೆಜ್ ಹೋಗಿದೆ ಎನ್ನಲಾಗ್ತಿದೆ. ಇದಕ್ಕೆ ಅವಾಚ್ಯ ಶಬ್ದಗಳಿಂದ ರಿಪ್ಲೈ ಮಾಡಿದ ಆ್ಯಂಡ್ ನೀನೇ ದೊಡ್ಡ ಡ್ರಗ್ ಡೀಲರ್ ನೀನು ನನಗೇನು ಸಹಾಯ ಮಾಡಬಲ್ಲೇ ಎಂದು ನಿಂದಿಸಿದ್ದಾರಂತೆ. ಇದಾದ ಮೇಲೆ ಇಬ್ಬರ ನಡುವೆ ಹಲವು ಮೆಸೆಜ್ ಗಳು ವಿನಿಮಯವಾಗಿದೆ. ಆದರೆ ಆ್ಯಡಂ ಸಂಜನಾಗೆ ಸುಮಾರು ಹತ್ತಾರು ಮೆಸೆಜ್ ಗಳನ್ನು ಅಸಹ್ಯವಾಗಿ ನಿಂದಿಸಿ ಕಳುಹಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ಸಂಜನಾ ವಾಟ್ಸ್ ಅಪ್ ಚಾಟ್ ಹಿಸ್ಟರಿ ಜೊತೆ ಇಂದಿರಾ ನಗರ ಪೊಲೀಸರಿಗೆ ದೂರು ನೀಡಿದ್ದಾರೆ.

ಸಂಜನಾ ಗಲ್ರಾನಿ ದೂರು ಆಧರಿಸಿ ಕ್ರಮ ಕೈಗೊಂಡ ಪೊಲೀಸರು ಆ್ಯಡಂನನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಸಂಜನಾ ಆ್ಯಡಂ ತಂದೆ ಪ್ರಸಾದ್ ಬಿದ್ದಪ್ಪ ಜೊತೆ ಕೆಲಸ ಮಾಡಿದ್ದು ಮಾಡೆಲ್ ಆಗಿಯೂ ಕೆಲಸ ಮಾಡಿದ್ದರು. ಈ ವೇಳೆ ಆ್ಯಡಂ ಮತ್ತು ಸಂಜನಾ ಪರಿಚಯವಾಗಿತ್ತು. ಸದ್ಯ ತಾಯ್ತನದ ಸಂಭ್ರಮದಲ್ಲಿರೋ ಸಂಜನಾ ಈ ಹಿಂಸೆ ಸಹಿಸಲಾರದೇ ಪೊಲೀಸರ ಮೊರೆ ಹೋಗಿದ್ದರು ಎನ್ನಲಾಗಿದೆ.‌

ಇದನ್ನೂ ಓದಿ : ಇಂಗ್ಲೀಷ್ ನಲ್ಲೂ ಅಬ್ಬರಿಸಿದ ಕಿಚ್ಚ ಸುದೀಪ್ : ವಿಕ್ರಾಂತ್ ರೋಣ ಟೀಂನಿಂದ ಬಂತು ಅಪ್ಡೇಟ್

ಇದನ್ನೂ ಓದಿ : Disha Madan : ಹೆರಿಗೆ ನೋವಿನಲ್ಲೂ ಕಾರ್ ಡ್ರೈವ್ ಮಾಡಿ ಆಸ್ಪತ್ರೆ‌ ಸೇರಿದ ನಟಿ ದಿಶಾ ಮದನ್

(Indiranagar police arrests Adam Bidapa for allegedly sending vulgar message to Sanjjanaa Galrani)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular