ಬೆಂಗಳೂರು : ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ಸಿನಿಮಾ ಐಲವ್ ಯೂ ರಚ್ಚು ಸಿನಿಮಾದ ಚಿತ್ರೀಕರಣ ವೇಳೆಯಲ್ಲಿ ದುರಂತ ಸಂಭವಿಸಿದ್ದು, ಸಹಾಯಕ ಫೈಟರ್ ವಿವೇಕ್ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದ. ಘಟನೆಯ ಬೆನ್ನಲ್ಲೇ ಚಿತ್ರ ತಂಡ ಸಂಕಷ್ಟಕ್ಕೆ ಸಿಲುಕಿದ್ದು, ನಾಲ್ವರನ್ನು ಬಂಧಿಸಲಾಗಿದೆ.
ರಾಮನಗರದ ಜಿಲ್ಲೆಯ ಬಿಡಿದಿಯಲ್ಲಿರುವ ಈಗಲ್ ಟನ್ ರೆಸಾರ್ಟ್ ಸಮೀಪದಲ್ಲಿ ಐಲವ್‌ಯೂ ರಚ್ಚು ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅಜಯ್ ರಾವ್ ಹಾಗೂ ರಚಿತಾ ರಾಮ್ ನಟನೆಯ ಐಲವ್ ಯೂ ರಚ್ಚು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಸಿನಿಮಾದ ಬಹುತೇಕ ಚಿತ್ರೀಕರಣ ಈಗಾಗಲೇ ಮುಕ್ತಾಯವನ್ನು ಕಂಡಿತ್ತು. ಇದೀಗ ರಾಮನಗರದ ಬಳಿ ಚಿತ್ರೀಕರಣ ಭರದಿಂದ ಸಾಗುತ್ತಿತ್ತು. ಈ ವೇಳೆಯಲ್ಲಿ ಫೈಟಿಂಗ್ ದೃಶ್ಯದ ವೇಳೆ ಸಹಾಯಕ ಫೈಟರ್‌ಗೆ ವಿದ್ಯುತ್ ಸ್ಪರ್ಶ ಉಂಟಾಗಿದೆ. ಇದರಿಂದಾಗಿ 28 ವರ್ಷ ವಿವೇಕ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ರಂಜಿತ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇತ್ತ ಮೃತ ಫೈಟರ್ ವಿವೇಕ್ ಕುಟುಂಬಸ್ಥರು ನೀಡಿದ ದೂರಿನನ್ವಯ ನಿರ್ದೇಶಕ ಶಂಕರ್ ರಾಜ್, ಸ್ಟಂಟ್ ಮಾಸ್ಟರ್ ವಿನೋದ್, ಜಮೀನು ಮಾಲೀಕ ಪುಟ್ಟರಾಮು ಹಾಗೂ ಕ್ರೇನ್ ಡ್ರೈವರ್ ನನ್ನು ವಶಕ್ಕೆ ಪಡೆದು, ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಪೊಲೀಸರು ಬಂಧಿಸುವ ಸಾಧ್ಯತೆಯಿದೆ.
ಘಟನೆ ನಡೆಯುತ್ತಿದ್ದಂತೆ ಶೂಟಿಂಗ್ ನಿಲ್ಲಿಸಿ ಚಿತ್ರತಂಡ ಪ್ಯಾಕಪ್ ಮಾಡಿಕೊಂಡು ಸ್ಥಳದಿಂದ ಪರಾರಿಯಾಗಿದೆ. ಚಿತ್ರೀಕರಣಕ್ಕೆ ಸಿನಿಮಾ ತಂಡ ಸ್ಥಳೀಯ ಪೊಲೀಸರ ಅನುಮತಿ ಸಹ ಪಡೆದುಕೊಂಡಿರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ಬಿಡದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ :
ಸ್ಯಾಂಡಲ್ ವುಡ್ ಗುಳಿಕೆನ್ನೆ ಬೆಡಗಿಯ ಹಾಟ್ ಪೋಟೋಸ್ ವೈರಲ್…!