ಅಮೃತ್ ಸರ್ ಬಳಿ ಸ್ಫೋಟಕ ಅಳವಡಿಸಿದ ಟಿಫಿನ್ ಬಾಕ್ಸ್ ಪತ್ತೆ

  • ಸುಶ್ಮಿತಾ ಸುಬ್ರಹ್ಮಣ್ಯ

ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಗೆ ಇನ್ನೇನು ಕೆಲ ದಿನಗಳು ಇರುವಾಗಲೇ ಪಂಜಾಬ್ ನ ಅಮೃತ್ ಸರ್ ಬಳಿಯ ಹಳ್ಳಿಯೊಂದರಲ್ಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ಅಳವಡಿಸಲಾದ ಟಿಫಿನ್ ಬಾಕ್ಸ್ ಗಳು ಪತ್ತೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಮಹಾನಿರ್ದೇಶಕ ದಿನಕರ್ ಗುಪ್ತಾ, ಈ ಟಿಫಿನ್ ಬಾಕ್ಸ್ ಗಳನ್ನು ಡ್ರೋನ್ ಮೂಲಕ ಇರಿಸಲಾಗಿದೆ. ಟಿಫಿನ್ ಬಾಕ್ಸ್ ಹೊಂದಿರುವ ಬ್ಯಾಗಿನಿಂದ ಇತರ ಕೆಲವು ಸ್ಫೋಟಕಗಳು ಕೂಡ ಪತ್ತೆಯಾಗಿವೆ ಎಂದು ಹೇಳಿದ್ದಾರೆ. ನಿನ್ನೆ (ಭಾನುವಾರ) ಅಮೃತಸರ ಗ್ರಾಮಾಂತರ ಜಿಲ್ಲೆಯಲ್ಲಿ ಕೆಲವು ಪತ್ತೆ ಕಾರ್ಯಾಚರಣೆ ಮಾಡಿದ್ದೇವೆ. ಕೆಲವು ಹ್ಯಾಂಡ್ ಗ್ರೆನೇಡ್‌ಗಳು ಮತ್ತು ಕಾರ್ಟ್ರಿಡ್ಜ್‌ ಗಳನ್ನು ವಶಪಡಿಸಿಕೊಂಡಿದ್ದೇವೆ ಎಂದಿದ್ದಾರೆ.

NSG ತಂಡ ಈ ಟಿಫಿನ್ ಬಾಕ್ಸ್ ಗಳನ್ನು ಪರಿಶೀಲಿಸಿದ್ದು, ಸ್ಫೋಟಕ ಸಾಧನಗಳನ್ನು ಪತ್ತೆ ಮಾಡಲಾಗಿದ್ದು, 2-3 ಕಿ. ಜಿ ಆಗುವಷ್ಟು ಆರ್ ಡಿ ಎಕ್ಸ್ ಸ್ಫೋಟಕ ಗಳನ್ನು ಹೊಂದಿದ್ದವರು ಎಂದು ವರದಿ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ. ಏತನ್ಮಧ್ಯೆ, ಕೆಲವು ತಿಂಗಳ ಹಿಂದೆ, ಪಂಜಾಬ್‌ ನ ಗುರುದಾಸಪುರ ಜಿಲ್ಲೆಯ ಅಂತರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದ ಮೂಲದ ಡ್ರೋನ್‌ ನಿಂದ ಇರಿಸಲಾಗಿದ್ದ 11 ಹ್ಯಾಂಡ್ ಗ್ರೆನೇಡ್‌ ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಪಾಕಿಸ್ತಾನದಿಂದ ಡ್ರೋನ್‌ ಗಳ ಮೂಲಕ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ಇರಿಸಿದ ಮೊದಲ ಘಟನೆ 2019 ರ ಸೆಪ್ಟೆಂಬರ್‌ ನಲ್ಲಿ ಪಂಜಾಬಿನಲ್ಲಿ ಬೆಳಕಿಗೆ ಬಂದಿತ್ತು. ಪೋಲಿಸ್ ಎಕೆ -47 ರೈಫಲ್‌ ಗಳು, ಮದ್ದುಗುಂಡುಗಳು, ಹ್ಯಾಂಡ್ ಗ್ರೆನೇಡ್‌ ಗಳು, ನಕಲಿ ಕರೆನ್ಸಿ ಮತ್ತು ಇತರ ವಸ್ತುಗಳನ್ನು ತರ್ನ್ ತರನ್ ಜಿಲ್ಲೆಯಲ್ಲಿ ಪತ್ತೆ ಹಚ್ಚಲಾಗಿತ್ತು. ಸ್ವಾತಂತ್ರ್ಯ ದಿನಾಚರಣೆ ಯ ಸಮಯದಲ್ಲಿ ಈ ರೀತಿ ಘಟನೆ ನಡೆದಿದ್ದು ಎಲ್ಲರಲ್ಲು ಆತಂಕ ಮನೆ ಮಾಡಿದೆ. ಮೊದಲೇ ಕೊರೋನಾದಿಂದ ಆತಂಕಗೊಂಡ ಜನಕ್ಕೆ ಈಗ ಸ್ಫೋಟಕ ಅಳವಡಿಸಿದ ಟಿಫಿನ್ ಬಾಕ್ಸ್ ಹೆಚ್ಚು ನಡುಕ ಹುಟ್ಟಿಸಿದೆ.

Comments are closed.