ಸ್ಯಾಂಡಲ್ ವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಯಾವುದೇ ಚಿತ್ರರಂಗವಿದ್ದರೂ ನಟಿಮಣಿಯರಿಗೆ ಒಳ್ಳೆಯ ಸಂಭಾವನೆ ಕೊಡೋದಿಲ್ಲ ಅನ್ನೋದು ಹಳೆಯ ಅಸಮಧಾನ. ಇದೇ ಕಾರಣಕ್ಕೆ ಎಷ್ಟೋ ನಟಿಯರು ಮೂಲೆಗುಂಪಾಗಿದ್ದಾರೆ. ಆದರೆ ಬಹುಭಾಷಾ ಬೆಡಗಿ ಹಾಗೂ ಮೊಹೆಂಜೋದಾರೋ ಸುಂದರಿ ಪೂಜಾ ಹೆಗ್ಡೆ (Pooja Hegde remuneration) ಮಾತ್ರ ಸಂಭಾವನೆ ಕಡಿಮೆ ಮಾಡಿ ಅವಕಾಶ ಗಿಟ್ಟಿಸಿಕೊಳ್ಳೋ ಮೂಲಕ ಸುದ್ದಿಯಾಗಿದ್ದಾರೆ.
ನಟಿ ಪೂಜಾ ಹೆಗ್ಡೆ ಬಾಲಿವುಡ್ ನಿಂದ ಕೆರಿಯರ್ ಆರಂಭಿಸಿದ್ದರೂ ಹೆಚ್ಚಿನ ಅಭಿಮಾನಿಗಳು ಹಾಗೂ ಸಿನಿಮಾಗಳನ್ನು ನೀಡಿದ್ದು ಸೌತ್ ಇಂಡಸ್ಟ್ರಿಗೆ. ಸೌತ್ ಸಿನಿರಂಗದಲ್ಲಿ ಬಹು ಬೇಡಿಕೆಯ ನಟಿ ಹಾಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಅನ್ನೋ ದಾಖಲೆಯೂ ಪೂಜಾ ಹೆಗ್ಡೆ ಹೆಸರಿನಲ್ಲೇ ಇದೆ. ಆದರೆ ಇತ್ತೀಚಿಗೆ ಪೂಜಾ ಹೆಗ್ಡೆಗೆ ಅಷ್ಟೊಂದು ಅವಕಾಶ ಸಿಗುತ್ತಿಲ್ಲ ಅನ್ನೋ ಸಂಗತಿ ಬಹಿರಂಗವಾಗಿತ್ತು. ಮಾತ್ರವಲ್ಲ ಇದಕ್ಕೆ ಕಾರಣ ಪೂಜಾ ಹೆಗ್ಡೆ (Pooja Hegde) ದುಬಾರಿ ಗೌರವಧನ ಅನ್ನೋದು ಗುಟ್ಟಾಗಿ ಉಳಿದಿರಲಿಲ್ಲ ಬಿಡಿ.
ಆದರೆ ಈಗ ಈ ಗುಸು ಗುಸುಗಳಿಗೆ ಬ್ರೇಕ್ ಬಿದ್ದಿದ್ದು ತೆಲುಗಿನ ಬಿಗ್ ಬಜೆಟ್ ಸಿನಿಮಾ ವೊಂದರಲ್ಲಿ ಪೂಜಾ (Pooja Hegde ) ನಾಯಕಿಯಾಗಿದ್ದಾರೆ. ಸಂಭಾವನೆ ಕಡಿಮೆ ಮಾಡಿ ಕೊಂಡಿರೋ ಕಾರಣಕ್ಕೆ ನಿರ್ಮಾಪಕರು ಪೂಜಾ ಹೆಗ್ಡೆ ಹಿಂದೆ ಬಿದ್ದು ಆಕೆಯನ್ನು ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋದು ಸಧ್ಯದ ಅಪ್ಡೇಟ್.
ತೆಲುಗಿನಲ್ಲಿ ಪೂಜಾಗೆ ಸಖತ್ ಹೆಸರು ತಂದುಕೊಡುವ ನೀರಿಕ್ಷೆಯಿರೋ ರಾಧೆ ಶ್ಯಾಮ್ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದರಲ್ಲಿ ಪೂಜಾ ಹೆಗ್ಡೆ ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂಬ ಸಂಗತಿ ಸಿನಿ ರಂಗದಲ್ಲಿ ಸಂಚಲನ ಮೂಡಿಸಿತ್ತು. ಆದರೆ ಈಗ ಪೂಜಾ ( Pooja Hegde remuneration) ಹೆಚ್ಚು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದು, ಇದೇ ಕಾರಣಕ್ಕೆ ಸಂಭಾವನೆ ಕಡಿಮೆ ಮಾಡಿದ್ದಾರಂತೆ
ಸದ್ಯ ಪೂಜಾ ಬಾಲಿವುಡ್ ನ ಸರ್ಕಸ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದಲ್ಲದೇ ತೆಲುಗಿನ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಇದಲ್ಲದೇ ಮಹೇಶ್ ಬಾಬು ನಟನೆಯ 28 ನೇ ಸಿನಿಮಾವೂ ಪೂಜಾ ಹೆಗ್ಡೆ ಕೈಯಲ್ಲಿದೆ. ಇನ್ನು ತಮಿಳಿನಬೀಸ್ಟ್ ಸಿನಿಮಾ ರಿಲೀಸ್ ಗೆ ಸಿದ್ಧವಾಗಿದೆ. ಇದರ ಜೊತೆಗೆ ಈಗ ಪೂಜಾ ಸಂಭಾವನೆ ಇಳಿಸಿ ಪವನ್ ಕಲ್ಯಾಣ್ ಗೆ ಜೋಡಿಯಾಗೋ ಅವಕಾಶ ಪಡೆದುಕೊಂಡಿದ್ದು, ಪೂಜಾ ಹೆಗ್ಡೆ ಅಭಿಮಾನಿಗಳು ಈ ಸುದ್ದಿ ಓದಿ ಫುಲ್ ಖುಷಿಯಿಂದ ಕುಣಿದಾಡಲಿರೋದಂತು ಖಚಿತ.
ಇದನ್ನೂ ಓದಿ : ಸಂಭಾವನೆ ತಾರತಮ್ಯದ ವಿರುದ್ಧ ಸ್ಯಾಂಡಲ್ ವುಡ್ ನಟಿಮಣಿಯರ ಸಮರ
ಇದನ್ನೂ ಓದಿ : Box Office : 100 ಕೋಟಿ ಮೂಲಕ ದಾಖಲೆ ಬರೆದ ಗಂಗೂಬಾಯಿ ಕಾಠಿಯಾವಾಡಿ
( Pooja Hegde is a hard hitting voice on remuneration )