ಮಂಗಳವಾರ, ಜೂನ್ 17, 2025
HomeCinemaPoonam Pandey : ನುಡಿದಂತೆ ನಡೆದ ನೀಲಿತಾರೆ : ಕ್ಯಾಮರಾ ಎದುರೇ ಟೀ ಶರ್ಟ್ ಬಿಚ್ಚಿದ...

Poonam Pandey : ನುಡಿದಂತೆ ನಡೆದ ನೀಲಿತಾರೆ : ಕ್ಯಾಮರಾ ಎದುರೇ ಟೀ ಶರ್ಟ್ ಬಿಚ್ಚಿದ ಪೂನಂ : viral Video

- Advertisement -

ಹೇಳಿದಂತೆ ನಡೆದುಕೊಳ್ಳೋ ಸೆಲೆಬ್ರೆಟಿಗಳು ಅಪರೂಪ.‌ ಆದರೆ ತಮ್ಮ‌ಮಾದಕ ಸೌಂದರ್ಯ ಹಾಗೂ ಬೋಲ್ಡ್ ನಡೆಯಿಂದಲೇ ಫೇಮಸ್ ಆಗಿರೋ ನಟಿಮಣಿ ಪೂನಂ ಪಾಂಡೆ ಮಾತ್ರ ಮಾತಿನಂತೆ ನಡೆದುಕೊಂಡಿದ್ದಾರೆ. ಪ್ರಸ್ತುತ ಲಾಕಪ್ ಶೋದಲ್ಲಿ ಸ್ಪರ್ಧಿಯಾಗಿರೋ ಪೂನಂ (Poonam Pandey ) ತಮ್ಮನ್ನು ಚಾರ್ಜಶೀಟ್ ನಿಂದ ಬಚಾವ್ ಮಾಡಿದ್ದಕ್ಕೆ ಕ್ಯಾಮರಾ ಮುಂದೆನೇ ಟೀ ಶರ್ಟ್ ಬಿಚ್ಚಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ.

ಸದ್ಯ ನಟಿ ಪೂನಂ ಪಾಂಡೆ (Poonam Pandey ) ಬಾಲಿವುಡ್ ನಟಿ ಕಂಗನಾ ರನಾವುತ್ ನಡೆಸುತ್ತಿರೋ ಲಾಕಪ್ ಶೋದಲ್ಲಿ ಸ್ಪರ್ಧಿಯಾಗಿದ್ದಾರೆ. ಈ ಶೋದಲ್ಲಿ ಯಾರು ಎಲಿಮಿನೇಶನ್ ಹಂತ ತಲುಪುತ್ತಾರೋ ಅವರು ತಮ್ಮ ನ್ನು ತಾವು ಶೋದಲ್ಲಿ ಉಳಿದುಕೊಳ್ಳೋದಿಕ್ಕೆ ತಮ್ಮ ಬದುಕಿನ ಬಗೆಗಿನ ಯಾವುದಾದರೂ ಒಂದು ಮುಚ್ಚಿಟ್ಟ ಸತ್ಯವನ್ನು ಬಿಚ್ಚಿಡಬಹುದು. ಅಥವಾ ತಮ್ಮನ್ನು ತಾವು ಉಳಿಸಿಕೊಳ್ಳಲು ಏನಾದ್ರು ಪ್ರಯತ್ನ ಮಾಡಬಹುದು.

Poonam Pandey Remove her t Shirt in lock Upp tv Show
ಬಾಲಿವುಡ್‌ ನಟಿ ಪೂನಂ ಪಾಂಡೆ

ಈ ಹಂತವನ್ನು ಶೋದಲ್ಲಿ ಚಾರ್ಜಶೀಟ್ ಎಂದು ಕರೆಯಲಾಗುತ್ತದೆ. ಇದೇ ಹಂತದಲ್ಲಿ ಪ್ರೇಕ್ಷಕರ ಮೊರೆ ಹೋಗಿದ್ದ ಪೂನಂ ಪಾಂಡೇ ನೀವು ನನ್ನ ಪರವಾಗಿ ನಿಂತು ನನಗೆ ಓಟ್ ಮಾಡಿದರೇ ಕ್ಯಾಮರಾ ಎದುರೇ ಬೆತ್ತಲಾಗುವುದಾಗಿ ಮೊನ್ನೆ ಹೇಳಿದ್ದರು. ಪೂನಂ ಪಾಂಡೆ ಕೊಟ್ಟ ಈ ಹೇಳಿಕೆ ನೋಡಿ ಅಭಿಮಾನಿಗಳು ಮಾತ್ರವಲ್ಲ ಶೋದಲ್ಲಿರೋ ಸ್ಪರ್ಧಿಗಳು ಅಚ್ಚರಿಗೊಂಡಿದ್ದರು. ಆದರೆ ಈಗ ಚಾರ್ಜಶೀಟ್ ಹಂತ ಮುಗಿದಿದ್ದು ನಟಿ ಪೂನಂಪಾಂಡೆ ಎಲಿಮಿನೇಶನ್ ನಿಂದ ಬಚಾವಾಗಿದ್ದಾರೆ.

Poonam Pandey Remove her t Shirt in lock Upp tv Show

ಹೀಗಾಗಿ ಕೊಟ್ಟ ಮಾತು ಉಳಿಸಿಕೊಳ್ಳಲು ಮುಂದಾದ ಪೂನಂ ಪಾಂಡೇ (Poonam Pandey ) ಕ್ಯಾಮರಾ ಎದುರೇ ತಮ್ಮ ಟೀ ಶರ್ಟ್ ಬಿಚ್ಚಿದ್ದಾರೆ. ಅಷ್ಟೇ ಕ್ಷಣಮಾತ್ರದಲ್ಲಿ ಮತ್ತೆ ಟೀ ಶರ್ಟ್ ಧರಿಸಿ ಕ್ಯಾಮರಾ ಎದುರಿನಿಂದ ದೂರ ಸರಿದಿದ್ದಾರೆ. ಕ್ಷಣಮಾತ್ರದಲ್ಲಿ ಲೈವ್ ಕ್ಯಾಮರಾ ಎದುರು ನಡೆದ ಈ ಘಟನೆ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

Poonam Pandey Remove her t Shirt in lock Upp tv Show

ಶೋದಲ್ಲೂ ಪೂನಂಪಾಂಡೇ ಸಹ ಸ್ಪರ್ಧಿಗಳ ಬಳಿ ನಾನು ಶೋದಲ್ಲಿ ಉಳಿದರೇ ನನ್ನನ್ನು ಉಳಿಸಿದ ಅಭಿಮಾನಿಗಳಿಗೆ ಸ್ಪೆಶಲ್ ಗಿಫ್ಟ್ ನೀಡುವುದಾಗಿ ಹೇಳಿಕೊಂಡಿದ್ದರು. ಈಗ ಅದನ್ನೇ ಮಾಡಿತೋರಿಸಿದ್ದಾರೆ. ಈ ಹಿಂದೆಯೂ ಪೂನಂಪಾಂಡೆ ಪಾಕ್ ವಿರುದ್ಧ ಕ್ರಿಕೆಟ್ ಮ್ಯಾಚ್ ನಲ್ಲಿ ಗೆದ್ದರೆ ತಾವು ಬೆತ್ತಲಾಗೋದಾಗಿ ಹೇಳಿಕೊಂಡಿದ್ದರು. ಈಗ ಲಾಕಪ್ ಶೋದಲ್ಲಿ ಪೂನಂ ಪಾಂಡೆ ತೋರಿರೋ ಈ ಅವತಾರ ಸಖತ್ ವೈರಲ್ ಆಗಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡ್ತಿದೆ.

ಇದನ್ನೂ ಓದಿ : ಬಾಯ್ ಫ್ರೆಂಡ್ ಜೊತೆಗೆ ಜಾಲಿ ರೈಡ್ : ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ದ ಎಫ್‌ಐಆರ್

ಇದನ್ನೂ ಓದಿ : ನಾನು ನಿಮಗಾಗಿ ಬೆತ್ತಲಾಗ್ತೇನೆ : ಅಭಿಮಾನಿಗಳಿಗೆ ಬಾಲಿವುಡ್ ನಟಿ ಪೂನಂಪಾಂಡೆ ಆಫರ್

Poonam Pandey Remove her t Shirt in lock Upp tv Show

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular