Vijay’s Beast movie : ಕುವೈತ್​​ನಂತೆಯೇ ತಮಿಳುನಾಡಿನಲ್ಲಿಯೂ ‘ಬೀಸ್ಟ್​’ಗೆ ಬ್ಯಾನ್​ ಸಂಕಷ್ಟ

Vijay’s Beast movie :ಕಾಲಿವುಡ್​ ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್​ ವಿಜಯ್​​ರ ( Vijay’s Beast movie) ಬಹುನಿರೀಕ್ಷಿತ ಸಿನಿಮಾ ಬೀಸ್ಟ್​ ಇದೇ ತಿಂಗಳ 13ರಂದು ತೆರೆ ಕಾಣಲಿದೆ. ಟ್ರೇಲರ್​​ ಮೂಲಕ ಅಭಿಮಾನಿಗಳಲ್ಲಿ ಕ್ರೇಜ್​ ಹೆಚ್ಚಿಸಿದ್ದ ಈ ಸಿನಿಮಾ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ.

ಈ ಸಿನಿಮಾದಲ್ಲಿ ಇಸ್ಲಾಮಿಕ್​ ಭಯೋತ್ಪಾದನೆಯನ್ನು ತೋರಿಸಲಾಗಿದೆ ಎಂದಿರುವ ಕುವೈತ್​ ತಮ್ಮ ದೇಶದಲ್ಲಿ ಈ ಸಿನಿಮಾವನ್ನು ರಿಲೀಸ್​ ಮಾಡಲು ನಿಷೇಧವನ್ನು ಹೇರಿದೆ. ಕುವೈತ್​ ಹಿತಾಸಕ್ತಿಗೆ ವಿರೋಧವಾದ ಸಿನಿಮಾಗಳಿಗೆ ಜಾಗವಿಲ್ಲ ಎಂದಿದ್ದ ಅಲ್ಲಿನ ಸರ್ಕಾರ ಈ ಸಿನಿಮಾ ರಿಲೀಸ್​ ತಡೆ ನೀಡಿದ್ದು ಚಿತ್ರರಂಗಕ್ಕೆ ಆಘಾತವನ್ನು ನೀಡಿತ್ತು .

ವಿದೇಶದಲ್ಲಿ ನಿಷೇಧವನ್ನು ಎದುರಿಸುತ್ತಿರುವ ಬೀಸ್ಟ್​ ಸಿನಿಮಾಗೆ (Vijay’s Beast movie) ಇದೀಗ ತಮಿಳುನಾಡಿನಲ್ಲಿಯೂ ಅಪಸ್ವರ ಕೇಳಿ ಬರುತ್ತಿದೆ. ತಮಿಳುನಾಡಿನಲ್ಲಿಯೂ ನಟ ವಿಜಯ್​ ಅಭಿನಯದ ಬೀಸ್ಟ್​ ಸಿನಿಮಾವನ್ನು ಬ್ಯಾನ್​ ಮಾಡಬೇಕೆಂದು ಆಗ್ರಹಿಸಿ ತಮಿಳುನಾಡು ಮುಸ್ಲಿಂ ಲೀಗ್​ ಅಧ್ಯಕ್ಷ ಮುಸ್ತಾಫ ಧ್ವನಿ ಎತ್ತಿದ್ದಾರೆ. ಈ ಸಂಬಂಧ ತಮಿಳುನಾಡು ಗೃಹ ಇಲಾಖೆಗೆ ಪತ್ರ ಬರೆಯುವ ಮೂಲಕ ಬೀಸ್ಟ್​ ಸಿನಿಮಾವನ್ನು ಬ್ಯಾನ್​ ಮಾಡುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.

ಕಲಾನಿಧಿ ಮಾರನ್​ ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ನಟ ವಿಜಯ್​ ವಿಜಯವೀರ ರಾಘವನ್​ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬೀಸ್ಟ್​ ಸಿನಿಮಾದಲ್ಲಿ ವಿಜಯ್​​ರದ್ದು ರಾ ಏಜೆಂಟ್​ ಕೆಲಸ. ನಟ ವಿಜಯ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು ಇವರಿಬ್ಬರ ಕೆಮಿಸ್ಟ್ರಿ ಹೇಗಿರುತ್ತೆ ಎಂಬುದನ್ನು ಸಿನಿಮಾ ಮಂದಿರಗಳಲ್ಲಿಯೇ ನೋಡಬೇಕಿದೆ. ನೆಲ್ಸನ್​ ದಿಲೀಪ್​ ಕುಮಾರ್​ ಆ್ಯಕ್ಷನ್​ ಕಟ್​ ಹೇಳಿರುವ ಈ ಸಿನಿಮಾಗೆ ಅನಿರುದ್ಧ ರವಿಚಂದರ್​ ಸಂಗೀತವಿದೆ.

ಇದನ್ನು ಓದಿ : Poonam Pandey : ನುಡಿದಂತೆ ನಡೆದ ನೀಲಿತಾರೆ : ಕ್ಯಾಮರಾ ಎದುರೇ ಟೀ ಶರ್ಟ್ ಬಿಚ್ಚಿದ ಪೂನಂ : viral Video

ಇದನ್ನೂ ಓದಿ : ಬಾಯ್ ಫ್ರೆಂಡ್ ಜೊತೆಗೆ ಜಾಲಿ ರೈಡ್ : ಬಾಲಿವುಡ್ ನಟಿ ಪೂನಂ ಪಾಂಡೆ ವಿರುದ್ದ ಎಫೆ್ಐಆರ್

vijay’s beast reportedly banned in kuwait lands in trouble in tamil nadu too

Comments are closed.