ಜನಪ್ರಿಯ ತಮಿಳು ಹಾಸ್ಯ ಆರ್ ಮೈಲ್ ಸಾಮಿ (Mayil Samy passed away) ಫೆಬ್ರವರಿ 19 ರಂದು ಭಾನುವಾರ ಮುಂಜಾನೆ ಇಹಲೋಕ ತ್ಯಜಿಸಿದ್ದಾರೆ. ಅವರು ಹಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕುಟುಂಬದವರು ಅವರನ್ನು ಆಸ್ಪತ್ರೆಗೆ ದಾಖಲಿದ್ದಾರೆ. ಆದರೆ ನಟ ಆರ್ ಮೈಲ್ ಸ್ವಾಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಹಾಸ್ಯನಟ ಮೈಲ್ ಸ್ವಾಮಿ ಅವರಿಗೆ 57 ವರ್ಷ ವಯಸ್ಸಾಗಿದೆ. ಚಲನಚಿತ್ರ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅವರು ಹಾಸ್ಯ ನಟನ ಸಾವಿನ ಸುದ್ದಿಯನ್ನು ಖಚಿತಪಡಿಸಿದ್ದಾರೆ. ಮೈಲ್ ಸಾಮಿ ಶನಿವಾರ ಅಸ್ಥವ್ಯಸ್ಥರಾಗಿದ್ದು, ಕುಟುಂಬದವರು ಅವರನ್ನು ಪೋರೂರು ರಾಮಚಂದ್ರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ನಟ ದಾರಿ ಮಧ್ಯೆ ಬಾರದ ಲೋಕಕ್ಕೆ ತೆರಳಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ವೈದ್ಯರು ಇವರ ಸಾವಿನ ಬಗ್ಗೆ ಕುಟುಂಬದವರಿಗೆ ತಿಳಿಸಿದ್ದಾರೆ.
Popular Tamil Comedy Actor #MayilSamy passed away earlier this morning..
— Ramesh Bala (@rameshlaus) February 19, 2023
He was 57.. Shocking and sad news..
Condolences to friends and family..
May his soul RIP! pic.twitter.com/Yc7MsBSMjX
ಇದನ್ನೂ ಓದಿ : ನಂದಮೂರಿ ವಂಶದ ಯುವ ನಾಯಕ ತಾರಕರತ್ನ ಇನ್ನಿಲ್ಲ : ಕಂಬನಿ ಮಿಡಿದ ಫ್ಯಾನ್ಸ್
ಇದನ್ನೂ ಓದಿ : ಧ್ರುವ ಸರ್ಜಾ ಅಭಿಮಾನಿ ಬೈಕ್ ಅಪಘಾತದಿಂದ ವಿಧಿವಶ : ಆಸ್ಪತ್ರೆಗೆ ಭೇಟಿ ಪೋಷಕರಿಗೆ 5 ಲಕ್ಷ ನೀಡಿ ಆಸರೆಯಾದ ನಟ
ಇದನ್ನೂ ಓದಿ : ಮೇಘಾ ಶೆಟ್ಟಿ ಮೇಲೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಗರಂ ಆಗಿದ್ದು ಯಾಕೆ ?
ಮೈಲ್ ಸಾಮಿ ಹಲವಾರು ತಮಿಳು ಸಿನಿಮಾಗಳಲ್ಲಿ ಹಾಸ್ಯ ಹಾಗೂ ಇತರೆ ಪಾತ್ರಗಳಲಿ ನಟಿಸಿದ್ದಾರೆ. ಅವರು ಮೆಚ್ಚುಗೆ ಪಡೆದ ವೇದಿಕೆ ಪ್ರದರ್ಶಕ, ಸ್ಟ್ಯಾಂಡ್ ಅಪ್ ಹಾಸ್ಯನಟ, ಟಿವಿ ನಿರೂಪಕ ಮತ್ತು ರಂಗಭೂಮಿ ಕಲಾವಿದರಾಗಿದ್ದರು. ಅವರು ಜನಪ್ರಿಯ ಹಾಸ್ಯ ಕಾರ್ಯಕ್ರಮದ ನಿರೂಪಕ ಮತ್ತು ತೀರ್ಪುಗಾರರಾಗಿ ಕೂಡ ತಮಿಳು ಟಿವಿ ಕಾರ್ಯಕ್ರಮದಲ್ಲಿ ತಮ್ಮ ಚೊಚ್ಚಲ ಪ್ರವೇಶ ಮಾಡಿದರು. 1984ರಲ್ಲಿ ಬಿಡುಗಡೆಯಾದ ಹಿರಿಯ ಚಲನಚಿತ್ರ ನಿರ್ಮಾಪಕ ನಟ ಕೆ ಭಾಗ್ಯರಾಜ್ ಅವರ “ಧವನಿ ಕನವುಗಲ್”ನಲ್ಲಿ ಮೊದಲ ಬಾರಿಗೆ ಅಭಿನಯಿಸಿದ್ದಾರೆ.
ಇದನ್ನೂ ಓದಿ : Project K Movie Release Date : ಮಹಾಶಿವರಾತ್ರಿಯಂದು ನಟ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ ಕೆ’ ರಿಲೀಸ್ ಡೇಟ್ ಅನೌನ್ಸ್
ಇದನ್ನೂ ಓದಿ : ಮಹಾಶಿವರಾತ್ರಿಯಂದು ನಟ ಶಿವ ರಾಜ್‌ಕುಮಾರ್ ಅಭಿನಯದ ‘ಭೈರತಿ ರಣಗಲ್’ ಪ್ರೀಕ್ವೆಲ್ ಅನೌನ್ಸ್
Popular Tamil comedian Mayil Samy passed away