ಆ ಪ್ರಶ್ನೆಗೆ ಉತ್ತರ ಕೊಡ್ತೀನಿ : ಕುತೂಹಲ ಕೆರಳಿಸಿದ ಮೇಘನಾ ರಾಜ್ ಪೋಸ್ಟ್

ಪತಿ ಚಿರು ಅಗಲಿಕೆಯ ನೋವಿನಿಂದ ಹೊರ ಬಂದಿರುವ ನಟಿ ಮೇಘನಾ ರಾಜ್ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮಗನ ಲಾಲನೆ ಪಾಲನೆ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮ್ಮದೇ ಯೂಟ್ಯೂಬ್ ಚಾನಲ್‌ನಲ್ಲಿ ಸಾಕಷ್ಟು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ಮೇಘನಾ ರಾಜ್ ಮಾಡಿರುವ ಪೋಸ್ಟ್‌ವೊಂದು ಭಾರೀ ಕುತೂಹಲ ಕೆರಳಿಸಿದೆ. ಹೌದು ನಟಿ ಮೇಘನಾ ರಾಜ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್‌ (Meghana Raj Post) ಬಗ್ಗೆ ಅಭಿಮಾನಿಗಳಲ್ಲಿ ಬಾರೀ ಕುತೂಹಲ ಕೆರಳಿಸಿದೆ.

ನಟಿ ಮೇಘನಾ ತಮ್ಮ ಪೋಸ್ಟ್‌ನಲ್ಲಿ, ‘2020, ಒಂದು ಭಾನುವಾರ. ನನ್ನ ಬದುಕು ಸಂಪೂರ್ಣವಾಗಿ ಬದಲಾದ ದಿನ. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಫೆಬ್ರವರಿ 19ರ ಭಾನುವಾರ (ಇಂದು) ನಾನು ಆ ಪ್ರಶ್ನೆಗೆ ಉತ್ತರ ಕೊಡ್ತೀನಿ. 2023ರ ಫೆಬ್ರವರಿ 19ರ ಬೆಳಗ್ಗೆ 10.35ಕ್ಕೆ’ ಎಂದು ಮೇಘನಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟಕ್ಕೂ ಆ ಪ್ರಶ್ನೆ ಏನು? ಮೇಘನಾ ಕೊಡುವ ಉತ್ತರ ಏನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಇನ್ನು ಅಭಿಮಾನಿಗಳು ತಮ್ಮದೇ ಕಲ್ಪನೆಯಲ್ಲಿ ಸಾಕಷ್ಟು ಊಹೆ ಮಾಡುತ್ತಿದ್ದಾರೆ. ಏನಪ್ಪಾ ಆ ಪ್ರಶ್ನೆ, ಏನಿರಬಹುದು ಉತ್ತರ? ಎಂದು ಗೆಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ : Mayil Samy passed away : ಜನಪ್ರಿಯ ತಮಿಳು ಹಾಸ್ಯನಟ ಮೈಲ್‌ ಸಾಮಿ ವಿಧಿವಶ

ಇದನ್ನೂ ಓದಿ : ನಂದಮೂರಿ ವಂಶದ ಯುವ ನಾಯಕ ತಾರಕರತ್ನ ಇನ್ನಿಲ್ಲ : ಕಂಬನಿ ಮಿಡಿದ ಫ್ಯಾನ್ಸ್

ಇದನ್ನೂ ಓದಿ : ಧ್ರುವ ಸರ್ಜಾ ಅಭಿಮಾನಿ ಬೈಕ್‌ ಅಪಘಾತದಿಂದ ವಿಧಿವಶ : ಆಸ್ಪತ್ರೆಗೆ ಭೇಟಿ ಪೋಷಕರಿಗೆ 5 ಲಕ್ಷ ನೀಡಿ ಆಸರೆಯಾದ ನಟ

ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ‘ಆಟಗಾರ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದರು. ಬಹಳ ವರ್ಷಗಳ ಕಾಲ ಪ್ರೀತಿಸಿ, ಪೋಷಕರು ಒಪ್ಪಿಗೆ ಪಡೆದು ಅದ್ಧೂರಿಯಾಗಿ ಮದುವೆ ಆಗಿದ್ದರು. ಆದರೆ 2020, ಜೂನ್ 7ರಂದು ಚಿರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಅದಾಗಿ ಕೆಲವೇ ತಿಂಗಳಲ್ಲಿ ಮೇಘನಾ ಪುತ್ರ ರಾಯನ್ ಸರ್ಜಾಗೆ ಜನ್ಮ ನೀಡಿದ್ದರು. ಮಗನನ್ನು ನೋಡುತ್ತಾ ನೋವನ್ನು ಮರೆತ್ತಿದ್ದರು. ಇದೀಗ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದಾರೆ. ಸದ್ಯ ಮೇಘನಾ ಸರ್ಜಾ ಮಾಡಿರುವ ಪೋಸ್ಟರ್ ಕುತೂಹಲ ಕೆರಳಿಸಿದ್ದು, ಆ ಪ್ರಶ್ನೆ ಹಾಗೂ ಆಕೆಯ ಉತ್ತರ ಏನು? ಎನ್ನುವುದಕ್ಕೆ ಕೆಲವೇ ಕ್ಷಣಗಳಲ್ಲಿ ಉತ್ತರ ಸಿಗಲಿದೆ.

ಇದನ್ನೂ ಓದಿ : ಮೇಘಾ ಶೆಟ್ಟಿ ಮೇಲೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಗರಂ ಆಗಿದ್ದು ಯಾಕೆ ?

ಇದನ್ನೂ ಓದಿ : Project K Movie Release Date : ಮಹಾಶಿವರಾತ್ರಿಯಂದು ನಟ ಪ್ರಭಾಸ್‌ ನಟನೆಯ ‘ಪ್ರಾಜೆಕ್ಟ್ ಕೆ’ ರಿಲೀಸ್‌ ಡೇಟ್ ಅನೌನ್ಸ್

Answer that question : Meghana Raj post that aroused curiosity

Comments are closed.