ಕನ್ನಡ ಕಿರುತೆರೆಯಲ್ಲಿ ಎಲ್ಲರೂ ಅಂದಚೆಂದ ಸೌಂದರ್ಯದಿಂದಲೇ ಹೆಸರು ಮಾಡಿದ್ರೇ ಆ ನಟಿ ಮಾತ್ರ ತಮ್ಮ ದೇಹಗಾತ್ರದಿಂದಲೇ ಸದ್ದು ಮಾಡಿದ್ರು. ಕೇವಲ ಸೀರಿಯಲ್ ಮಾತ್ರವಲ್ಲ ಸಿನಿಮಾದಲ್ಲೂ ಗುರುತಿಸಿಕೊಂಡ ನಟಿ ಭಾರತೀ ಭಟ್ ಈ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದ್ದಾರೆ. ಕಾಸ್ಮೆಟಿಕ್ ಸರ್ಜರಿ ಕಾರಣಕ್ಕೆ ನಡಿ ಚೇತನಾ ರಾಜ್ ಸಾವನ್ನಪ್ಪುತ್ತಿದ್ದಂತೆ ಎಲ್ಲರ ಗಮನವೂ ನಟಿ ಬ್ರಹ್ಮಗಂಟು ಖ್ಯಾತಿಯ ಭಾರತಿ ಭಟ್ ಕಡೆ ತಿರುಗಿದ್ದು ಆಕೆಯ ಸಕಾರಾತ್ಮಕ ವೇಟ್ ಲಾಸ್ ಜರ್ನಿ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಕೇವಲ ತೆಳ್ಳಗೆ ಬೆಳ್ಳಗೆ ಇದ್ದವರಿಗೆ ಮಾತ್ರ ಬಣ್ಣದ ಲೋಕ ಅಂತಿದ್ದ ಕಾಲದಲ್ಲಿ ತಮ್ಮ ಧಡೂತಿ ದೇಹದ ಜೊತೆಗೆ ಮೋಡಿ ಮಾಡಿದ ನಟಿ ಭಾರತಿ ಭಟ್. ಕೇವಲ ಸೀರಿಯಲ್ ಮಾತ್ರವಲ್ಲ ಸಿನಿಮಾ ದಲ್ಲೂ ನಟಿಸಿ ಸೈ ಎನ್ನಿಸಿಕೊಂಡ ಗಟ್ಟಿಗಿತ್ತಿ ಭಾರತಿ ಬಿಗ್ ಬಾಸ್ ಸೀಸನ್ ೮ ರಲ್ಲೂಮಿಂಚಿದ್ದರು. ಹಲವು ಡ್ಯಾನ್ಸ್ ಶೋ, ರಿಯಾಲಿಟಿ ಶೋದಲ್ಲಿ ಗಮನ ಸೆಳೆದ ಭಾರತಿ ಭಟ್ ಕೇವಲ ತಮ್ಮ ದೇಹದ ಕಾರಣಕ್ಕೆ ನೊರೆಂಟು ಭಾರಿ ಅವಮಾನ ಎನಿಸಿದ ನಟಿ ಭಾರತಿ ಪ್ರಯತ್ನ ಪಟ್ಟು ಸಣ್ಣಗಾಗಲು ಹೊರಟಿದ್ದಾರೆ.

ಆದರೆ ಈ ಜರ್ನಿಗಾಗಿ ಭಾರತಿ ಯಾವುದೇ ಶಾರ್ಟ್ ಕಟ್ ಬಳಸಿಲ್ಲ ಅನ್ನೋದು ಗಮನಿಸಬೇಕಾದ ಸಂಗತಿ. ತಮ್ಮನ್ನು ಸ್ಲಿಮ್ ಮಾಡೋ ಪಣತೊಟ್ಟ ಜಿಮ್ ಟ್ರೇನರ್ ಜೊತೆ ಸೇರಿ ದಿವಸಕ್ಕೆ ಬಹುತೇಕ ನಾಲ್ಕು ಗಂಟೆ ವರ್ಕೌಟ್ ಮಾಡ್ತಿರೋ ಬ್ರಹ್ಮಗಂಟು ಭಾರತೀ ಈಗಾಗಲೇ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡಿದ್ದಾರಂತೆ.
ಪ್ರತಿ ನಿತ್ಯ ಭಾರತಿ ಟ್ರೇನರ್ ಮಾರ್ಗದರ್ಶನದಂತೆ ಬೆವರು ಹರಿಸಿ ಡ್ಯಾನ್ಸ್ ಸೇರಿದಂತೆ ಬೇರೆ ಬೇರೆ ರೀತಿಯ ವ್ಯಾಯಾಮದಲ್ಲಿ ತೊಡಗಿಕೊಂಡಿದ್ದು, ಜೊತೆಗೆ ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡೇ ಅಂದಾಜು 25ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರಂತೆ.
ಚೇತನಾ ರಾಜ್ ಸಾವಿನ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಭಾರತಿ, ಯಾವುದೇ ಕಾರಣಕ್ಕೂ ದೇಹ ತೂಕ ಕರಗಿಸಲು ಶಾರ್ಟ್ ಕಟ್ ಬಳಸಬೇಡಿ. ಕಷ್ಟಪಟ್ಟು ವ್ಯಾಯಾಮ ಮಾಡಿದ್ರೇ ಫಿಟನೆಸ್ ಗಳಿಸಬಹುದು ಮತ್ತು ತೂಕ ಕೂಡ ಇಳಿಸಿಕೊಳ್ಳಬಹುದು. ಹೀಗಾಗಿ ಈ ರೀತಿಯ ದಾರಿ ಬಳಸಿ ಅಮೂಲ್ಯವಾದ ಬದುಕನ್ನು ಹಾಳು ಮಾಡಿಕೊಳ್ಳಬೇಡಿ ಎಂದಿದ್ದಾರೆ. ಸದ್ಯ ಚೇತನಾ ರಾಜ್ ಸಾವಿನ ಬಳಿಕ ಎಲ್ಲರೂ ಭಾರತಿ ಕತೆಯನ್ನು ಆದರ್ಶವಾಗಿ ಪರಿಗಣಿಸುವಂತೆ ಹೈಲೈಟ್ ಮಾಡ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಬ್ರಹ್ಮಗಂಟು ಖ್ಯಾತಿಯ ಭಾರತಿ ಭಟ್ ವೇಟ್ ಲಾಸ್ ಜರ್ನಿ ಸದ್ಯ ಸಖತ್ ಸದ್ದು ಮಾಡ್ತಿದೆ.
ಇದನ್ನೂ ಓದಿ : Cosmetic Surgery : ಸೌಂದರ್ಯ ವರ್ಧಕ ಸರ್ಜರಿ : ಇದುವರೆಗೂ ಬಲಿಯಾದ ನಟ, ನಟಿಯರೆಷ್ಟು ? ಇಲ್ಲಿದೆ ಡಿಟೇಲ್ಸ್
ಇದನ್ನೂ ಓದಿ : ನಟಿ Chethana Raj ಸಾವಿಗೆ ರಮ್ಯ ವಿಷಾದ : ಸ್ಯಾಂಡಲ್ ವುಡ್ ನಲ್ಲಿ ನಣಿಮಣಿಯರಿಗೆ ಮಾತ್ರ ಬ್ಯೂಟಿಪ್ರೆಶರ್
Positive Wight Loss for Actress Geetha Bharathi after death Chethana raj