ಭಾನುವಾರ, ಏಪ್ರಿಲ್ 27, 2025
HomeCinemaPrashanth Neel - Prabhas : ಕುಂದಾಪುರದ ಬಸ್ರೂರಿಗೆ ಬಂದಿಳಿದ ತೆಲುಗು ನಟ ಪ್ರಭಾಸ್‌, ನಿರ್ದೇಶಕ...

Prashanth Neel – Prabhas : ಕುಂದಾಪುರದ ಬಸ್ರೂರಿಗೆ ಬಂದಿಳಿದ ತೆಲುಗು ನಟ ಪ್ರಭಾಸ್‌, ನಿರ್ದೇಶಕ ಪ್ರಶಾಂತ್‌ ನೀಲ್‌

- Advertisement -

ತೆಲುಗು ನಟ ಪ್ರಭಾಸ್‌ ಅಭಿನಯದ ಬಾಹುಬಲಿ ಸಿನಿಮಾ ನಂತರ ತೆರೆಕಂಡ ಯಾವ ಸಿನಿಮಾವು ಸದ್ದು ಮಾಡಿಲ್ಲ. ಹೀಗಾಗಿ ಪ್ರಭಾಸ್‌ ಅಭಿಮಾನಿಗಳು ಮುಂದಿನ (Prashanth Neel – Prabhas) ಸಲಾರ್‌ ಹಾಗೂ ಪ್ರಾಜೆಕ್ಟ್‌ ಕೆ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ನಡುವೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುಟ್ಟ ಗ್ರಾಮ ಬಸ್ರೂರಿಗೆ ಹೈದ್ರಾಬಾದ್‌ನಿಂದ ಬಂದಿಳಿದ್ದಾರೆ. ನಟ ಪ್ರಭಾಸ್‌ ಇಲ್ಲಿಗೆ ಬರುವುದಕ್ಕೆ ಪ್ರಶಾಂತ್‌ ನೀಲ್‌ ಒಪ್ಪಿಸಿದರಂತೆ ಎನ್ನುವ ಮಾತು ಕೇಳಿ ಬರುತ್ತಿದೆ. ಯಾವ ಉದ್ದೇಶಕ್ಕೆ ಕರ್ನಾಟಕದ ಈ ಚಿಕ್ಕ ಗ್ರಾಮಕ್ಕೆ ಬಂದಿದ್ದಾರೆ ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಸದ್ಯ ನಿರ್ದೇಶಕ ಪ್ರಶಾಂತ್‌ ನೀಲ್‌ ಬಸ್ರೂರಿನಲ್ಲಿ ಒಂದಷ್ಟು ದಿನ ಉಳಿಯಲಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಲಾರ್‌ ಸಿನಿಮಾ ಬಿಡುಗಡೆಯಾಗಲಿರುವುದು ಎಲ್ಲರಿಗೂ ತಿಳಿದಿರುವುದೇ. ಅದಕ್ಕಾಗಿ ಒಂದಷ್ಟು ಕೆಲಸ ಬಾಕಿ ಇರುವುದರಿಂದ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸ್ಟುಡಿಯೋದಲ್ಲಿ ಬಿಡಾರ ಬಿಟ್ಟಿದ್ದಾರೆ.

ಕುಂದಾಪುರ ಕನ್ನಡವನ್ನು ಸಿನಿಮಾ ಮೂಲಕ ಎಲ್ಲರ ಮನಸ್ಸಿಗೆ ಮುಟ್ಟಿಸಿರುವ ಖ್ಯಾತಿ ರವಿ ಬಸ್ರೂರ್‌ ಅವರಿಗೆ ಸಲ್ಲುತ್ತದೆ. ದೂರದ ನಗರ ಜೀವನದ ಸಹವಾಸಕ್ಕಿಂದ ಹುಟ್ಟೂರೇ ಲೇಸು ಎಂದು ಬಸ್ರೂರಿನಲ್ಲಿ ಸ್ಟುಡಿಯೋ ಮಾಡಿಕೊಂಡಿದ್ದಾರೆ. ಇದರಲ್ಲಿ ರೀ-ರೆಕಾರ್ಡಿಂಗ್‌, ಡಬ್ಬಿಂಗ್‌ ಕಾರ್ಯ ನಡೆಯುತ್ತಿದೆ. ಹೀಗಾಗಿ ಸಲಾರ್‌ ಸಿನಿಮಾದ ಡಬ್ಬಿಂಗ್‌ ಕೆಲಸಕ್ಕಾಗಿ ಪ್ರಭಾಸ್‌ ಬಂದಿದ್ದಾರೆ.

ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿದ್ದರೂ ಮೊಟ್ಟ ಮೊದಲ ಬಾರೀಗೆ ಸಣ್ಣ ಹಳ್ಳಿಗೆ ಬಂದು ಡಬ್ಬಿಂಗ್‌ ಮಾಡುತ್ತಿದ್ದಾರೆ. ಹೀಗಾಗಿ ಸಲಾರ್‌ ಸಿನಿಮಾದ ಅಂತಿಮ ಹಂತದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ನಗರದಲ್ಲಿ ಡಬ್ಬಿಂಗ್‌ ಮಾಡಿದರೆ, ಅದರ ವಿಶುವಲ್ಸ್‌ ಅಥವಾ ವಿಡಿಯೋ ಲೀಕ್‌ ಆಗುವ ಸಾಧ್ಯತೆ ಹೆಚ್ಚಿರುದರಿಂದ ನಿರ್ದೇಶಕ ಪ್ರಶಾಂತ್‌ ನೀಲ್‌ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಇದನ್ನೂ ಓದಿ : Harshika Poonacha – Bhuvan Ponnannaa Wedding : ಭುವನ್ ಹರ್ಷಿಕಾ ಕಲ್ಯಾಣ: ಕೊಡವ ಶೈಲಿಯಲ್ಲಿ ಅದ್ದೂರಿ ಮದುವೆ

ಮುಂದಿನ ತಿಂಗಳ (ಸೆಪ್ಟೆಂಬರ್‌ 28) ಕೊನೆಯಲ್ಲಿ ಈ ಸಿನಿಮಾ ಬಿಡುಗಡೆ ದಿನ ನಿಗದಿಯಾಗಿದೆ. ಹಾಗಾಗಿ ಕೆಲವು ದಿನಗಳಲ್ಲಿ ಸಿನಿಮಾ ಟ್ರೈಲರ್‌ ಬಿಡುಗಡೆಯಾಗಲಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಹೊಂಬಾಳೆ ಸಂಸ್ಥೆಯವರು ಕಾಂತಾರ ಸಿನಿಮಾ ಬಿಡುಗಡೆ ಮಾಡಿದ್ದು ವಿಶ್ವ ವಿಖ್ಯಾತಿ ಪಡೆದಿದೆ. ಇದೀಗ ಈ ವರ್ಷ ಅದೇ ಸಮಯದಲ್ಲಿ ಸಲಾರ್‌ ಸಿನಿಮಾ ಬಿಡುಗಡೆ ಮಾಡಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆ ಇದೆ.

Prashanth Neel – Prabhas : Telugu actor Prabhas, director Prashanth Neel landed in Basrur, Kundapur.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular