ಸ್ಯಾಂಡಲ್‌ವುಡ್ ನಿರ್ದೇಶಕ ಪ್ರೇಮ್ ಯಾವ ಸಿನಿಮಾ ಮಾಡಿದರೂ ಹೊಸ ಕ್ರೇಜ್ ಸೃಷ್ಟಿ ಮಾಡುವುದರಲ್ಲಿ ಸದಾ ಮುಂದೆ ಇರುತ್ತಾರೆ. ನಿರ್ದೇಶಕ ಪ್ರೇಮ್ ಅವರ ಮೊದಲ ಸಿನಿಮಾವಾದ ಕರಿಯದಿಂದ ಹಿಡಿದು ಇತ್ತೀಚಿನ ಏಕ್ ಲವ್ ಯಾವರೆಗೆ ಅದನ್ನು ಸಾಬೀತು ಮಾಡಿದ್ದಾರೆ. ಅಷ್ಟೆ ಅಲ್ಲದೇ ಈ ಸಿನಿಮಾದಲ್ಲಿ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಈಗಾಗಲೇ ಪ್ರೇಮ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Prem – action prince Dhruva Sarja) ಜೊತೆ ಮಾಡುತ್ತಿರುವ “ಕೆಡಿ” ಸಿನಿಮಾದಲ್ಲಿ ಕ್ರೇಜ್ ಸೃಷ್ಟಿ ಹೆಚ್ಚಿಸಲು ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿಸಿಕೊಂಡಿದ್ದಾರೆ. ಇದೀಗ ಮತ್ತೆ ಈ ಸಿನಿಮಾಕ್ಕೆ ಇನ್ನಷ್ಟು ಹೈಪ್ ಹೆಚ್ಚಿಸಲು ಸತ್ಯಾವತಿ ಎಂಟ್ರಿ ಕೊಡಲಿದ್ದಾರೆ. ಇನ್ನು ಈ ಸತ್ಯಾವತಿ ಯಾರು ಎನ್ನುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಹೌದು ನಿರ್ದೇಶಕ ಪ್ರೇಮ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ರಾಜ್ಯಗಳ ನಡುವೆ ಯುದ್ಧವಾಗಿದೆ ಮತ್ತು ರಾಜ್ಯಗಳಿಗೆ ಶಕ್ತಿಯುತವಾದ ‘ಸತ್ಯಾವತಿ’ ಬೇಕು. ಮಾರ್ಚ್ 22 ರಂದು ಬೆಳಿಗ್ಗೆ 11.31 ಕ್ಕೆ ಸತ್ಯವತಿಯನ್ನು ಸ್ವಾಗತಿಸಲು ಸಿದ್ಧರಾಗಿ! ಒಬ್ಬ ಧೀಮಂತ ವ್ಯಕ್ತಿ ಕೆಡಿಯ ಯುದ್ಧಭೂಮಿಯನ್ನು ಪ್ರವೇಶಿಸುತ್ತಾನೆ” ಎಂದು ಪೋಸ್ಟ್ ಮಾಡಿದ್ದಾರೆ.
A war is between kingdoms. And kingdoms need a powerful 'Satyavati'. Get ready to welcome Satyavati on 22nd Mar at 11:31AM! A stalwart enters KD's battlefield.🔥@DhruvaSarja @KvnProductions @ArjunJanyaMusic #Ravichandran #KDTheDevil #Sandalwood #Bollywood #Tollywood #Kollywood pic.twitter.com/2IeYj8ptLN
— PREM❣️S (@directorprems) March 18, 2023
ಕೆಡಿ ಸಿನಿಮಾ 70ರ ದಶಕದ ನಟೋರಿಯಸ್ ರೌಡಿಯೊಬ್ಬನ ಕಥಾಹಂದರವನ್ನು ಒಳಗೊಂಡಿದೆ. ಇತ್ತೀಚೆಗೆ ರಿಲೀಸ್ ಮಾಡಿದ್ದ ಟೈಟಲ್ ಹಾಗೂ ಟೀಸರ್ ಎರಡು ಸಿನಿಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಈ ಸಿನಿಮಾದ ಟೈಟಲ್ ಹಾಗೂ ಟೀಸರ್‌ನಲ್ಲಿ ವ್ಯಕ್ತಿಯೊಬ್ಬನನ್ನು ಮೂಟೆ ಕಟ್ಟಿಕೊಂಡು ಬರುತ್ತಿದ್ದ ಧ್ರುವ ಸರ್ಜಾರನ್ನು ತೋರಿಸಲಾಗಿತ್ತು. ಈ ಸಿನಿಮಾದಲ್ಲಿ ಈಗಾಗಲೇ ಬಾಲಿವುಡ್‌ನ ಖ್ಯಾತ ನಟ ಸಂಜಯ್ ದತ್ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾಗೆ 75ರಲ್ಲಿ ನಡೆದಿದ್ದ ಕೆಲವು ನೈಜ ಘಟನೆಗಳೇ ಸ್ಫೂರ್ತಿಯಾಗಿದ್ದು, ಅದಕ್ಕೆ ಕಮರ್ಷಿಯಲ್ ಟಚ ಕೊಟ್ಟಿದ್ದೇವೆ.
ಇದನ್ನೂ ಓದಿ : ಮೊದಲ ದಿನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಸನ್ ಕಂಡ “ಕಬ್ಜ” ಸಿನಿಮಾ
ಇದನ್ನೂ ಓದಿ : ಕಿರುತೆರೆ ಜನಪ್ರಿಯ ಶೋ ವಿಕೇಂಡ್ ವಿತ್ ರಮೇಶ್ ಸೀಸನ್ 5 ಡೇಟ್ ಫಿಕ್ಸ್
ಇದನ್ನೂ ಓದಿ : ನಟ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ : ಶಿವರಾಜ್‌ಕುಮಾರ್ ಭಾವುಕ ಸಾಲುಗಳು ಆಯ್ತು ವೈರಲ್
ಆಗಿನ ಕಾಲದ ಮಾತಿನ ಸ್ಟೈಲ್ ಕೂಡಾ ಹಾಗೇ ಇರುತ್ತದೆ. ಈ ಸಿನಿಮಾದಲ್ಲಿ ಸೆನ್ಸಾರ್ ಇರಲ್ಲ. ಆ ಕಾಲದ ಕೆಲವು ನೈಜ ಹೆಸರುಗಳೂ ಹಾಗೆಯೇ ಇರುತ್ತವೆ. ಇದು ಬೆಂಗಳೂರಿನಲ್ಲಿಯೇ ನಡೆದಿದ್ದ ಕಥೆಯಾಗಿದ್ದು, ಈ ಸಿನಿಮಾದ ಕಥೆ ರೋಚಕವಾಗಿರೋ ಕಾರಣದಿಂದಲೇ ಯುದ್ಧದ ಮುನ್ನುಡಿ ಎಂದು ಟ್ಯಾಗ್‍ಲೈನ್ ಇಟ್ಟೆವು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ಈಗ ಯುದ್ಧದ ಸೈನ್ಯಕ್ಕೆ ಧ್ರುವ, ಸಂಜಯ್ ದತ್ ಜೊತೆ ರವಿಚಂದ್ರನ್ ಕೂಡಾ ಸೇರಿದ್ದಾರೆ ಎಂದು ಹೇಳಿದರು. ಇನ್ನು ಈ ಹೊಸ ಪಾತ್ರದಲ್ಲಿ ಯಾರು ಕಾಣಿಕೊಳ್ಳಲಿದ್ದಾರೆ. ಅವರ ಪಾತ್ರವೇನು ? ಎನ್ನುವುದರ ಬಗ್ಗೆ ಸಿನಿತಂಡ ಹೇಳಬೇಕಾಗಿದೆ.
Prem – action prince Dhruva Sarja: Satyavati entry for director Prem, action prince Dhruva Sarja starrer “KD”.
.