Mega Textile Park: ಕಲಬುರಗಿಯಲ್ಲಿ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆ: ಪ್ರಧಾನಿ ಮೋದಿ ಘೋಷಣೆ

ಕಲಬುರಗಿ: (Mega Textile Park) ಡಬಲ್‌ ಇಂಜಿನ್‌ ಸರಕಾರದ ಲಾಭವನ್ನು ರಾಜ್ಯದ ಜನರಿಗೆ ಪರಿಚಯಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್‌ ಅನ್ನು ಘೋಷಿಸಿದೆ. ಇದು ಮೇಕ್‌ ಇನ್‌ ಇಂಡಿಯಾ, ಹಾಗೂ ಮೇಕ್‌ ಫಾರ್‌ ದಿ ವರ್ಲ್ಡ್‌ ಗೆ ಉತ್ತಮ ಉದಾಹರಣೆಯಾಗಿದ್ದು, ಪಿಎಂ ಮಿತ್ರಾ ಮೆಗಾ ಟೆಕ್ಸ್‌ ಟೈಲ್‌ ಪಾರ್ಕ್‌ ಜವಳಿ ವಲಯವನ್ನು ಉತ್ತೇಜಿಸುವುದರ ಜೊತೆಗೆ ಲಕ್ಷಾಂತರ ಉದ್ಯೋಗವನ್ನು ಸೃಷ್ಟಿಸುತ್ತದೆ.

ಜವಳಿ ಕ್ಷೇತ್ರದ ಬೆಳವಣಿಗೆಗೆ ಇರುವ ಅವಕಾಶ ಬಳಸಿಕೊಳ್ಳುವ ಉದ್ದೇಶದಿಂದ ದೇಶ ಏಳು ಕಡೆಗಳಲ್ಲಿ ಪ್ರಧಾನ ಮಂತ್ರಿ ಮೆಗಾ ಇಂಟಿಗ್ರೇಟೆಡ್‌ ಟೆಕ್ಸ್‌ ಟೈಲ್‌ ರೀಜನ್‌ ಆಂಡ್‌ ಅಪೇರಲ್‌ ಸ್ಥಾಪಿಸಲು ಉದ್ದೇಶಿಸಿದ್ದು, ರಾಜ್ಯ ಸರಕಾರಗಳ ಸಹಯೋಗದಲ್ಲಿ ಕೇಂದ್ರ ಯೋಜನೆಯನ್ನು ಅನುಷ್ಠಾನ ಮಾಡಲಿದೆ. ಕರ್ನಾಟಕದೊಂದಿಗೆ, ತೆಲಂಗಾಣ, ಗುಜರಾತ್‌, ಮಧ್ಯಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಮಹಾರಾಷ್ಟ್ರವನ್ನು ಈ ಯೋಜನೆಗೆ ಗುರುತಿಸಲಾಗಿದೆ.

ದೇಶದ ಏಳು ಕಡೆಗಳಲ್ಲಿ, ಎಪ್ಪತ್ತು ಸಾವಿರ ಕೋಟಿ ಬಂಡವಾಳದೊಂದಿದೆ ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌ ಸ್ಥಾಪನೆಯಾಗಲಿದ್ದು, ಇಪ್ಪತ್ತು ಲಕ್ಷಕ್ಕೂ ಹೆಚ್ಚು ಮಂದಿಗೆ ಇದರಿಂದ ಉದ್ಯೋಗಾವಕಾಶ ಸಿಗಲಿದೆ. ಇರದಲ್ಲಿ ವಿಶ್ವದರ್ಜೆಯ ಮೂಲ ಸೌಕರ್ಯ, ಐದು ವರ್ಷ ಕಡಿಮೆ ದರದಲ್ಲಿ ವಿದ್ಯುತ್‌ ಲಭಿಸಲಿದೆ. ಇನ್ನೂ ಕೇಂದ್ರದಿಂದ ಈ ಯೋಜನೆಗೆ ಐನೂರು ಕೋಟಿ ರೂ ಸಿಗಲಿದ್ದು, ಒಂದೊಂದು ಘಟಕಗಳಿಗೆ ಮುನ್ನೂರು ಕೋಟಿ ರೂ ಇನ್ಸೆಂಟಿವ್‌ ಸಿಗಲಿದೆ. ಪಿಎಂ ಮಿತ್ರಾ ಮೆಗಾ ಟೆಕ್ಸ್​ಟೈಲ್ ಪಾರ್ಕ್​ಗಳು ಜವಳಿ ವಲಯಕ್ಕೆ ಬೇಕಾದ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುತ್ತವೆ. ಕೋಟಿಗಟ್ಟಲೆ ಬಂಡವಾಳ ಹರಿದುಬರುವಂತೆ ಮಾಡುತ್ತದೆ. ಲಕ್ಷಾಂತರ ಉದ್ಯೋಗ ಸೃಷ್ಟಿಯಾಗುತ್ತದೆ. ಮೇಕ್ ಇನ್ ಇಂಡಿಯಾ ಮತ್ತು ಮೇಕ್ ಫಾರ್ ದಿ ವರ್ಲ್ಡ್ ಗುರಿ ಸಾಧನೆಗೆ ಇದು ಒಳ್ಳೆಯ ನಿದರ್ಶನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Cooker bomb blast case: ಚಾರ್ಜ್‌ ಶೀಟ್‌ ನಲ್ಲಿ ಬಯಲಾಯ್ತು ಉಗ್ರರ ಹುನ್ನಾರ

ಪಿಎಂ ಮಿತ್ರಾ ಜವಳಿ ಪಾರ್ಕ್​ಗಳು ಸಾಕಷ್ಟು ಹೂಡಿಕೆಗಳನ್ನು ಆಕರ್ಷಿಸುವ ನಿರೀಕ್ಷೆ ಇದೆ. ಒಂದು ಸಾವಿರ ಎಕರೆಗೂ ಹೆಚ್ಚು ವಿಸ್ತೀರ್ಣ ಜಾಗದಲ್ಲಿ ನಿರ್ಮಾಣವಾಗಲಿರುವ ಪ್ರತಿಯೊಂದು ಪಾರ್ಕ್​ನಿಂದಲೂ 2ಲಕ್ಷದವರೆಗೆ ನೇರ ಉದ್ಯೋಗ ಸಿಗುವ ಸಾಧ್ಯತೆ ಇದೆ. ಒಂದು ಪಾರ್ಕ್ ಸ್ಥಾಪನೆಯಿಂದ ಆ ಸುತ್ತಲಿನ ಪ್ರದೇಶಗಳಲ್ಲಿ ಜವಳಿ ಉದ್ಯಮ ವಿಫುಲವಾಗಿ ಬೆಳೆಯುವ ಅವಕಾಶ ಇರಲಿದೆ. ಸ್ಪಿನ್ನಿಂಗ್, ನೇಯ್ಗೆಯಿಂದ ಹಿಡಿದು ಪ್ರಿಂಟಿಂಗ್ ಮತ್ತು ಉಡುಗೆ ತಯಾರಿಕೆಯವರೆಗೂ ಪ್ರತಿಯೊಂದು ವಿಭಾಗಗಳಿಗೆ ಉತ್ತೇಜನ ಸಿಕ್ಕು ಪ್ರಬಲ ಜವಳಿ ಸರಪಳಿ ರೂಪುಗೊಳ್ಳುವ ನಿರೀಕ್ಷೆ ಇದೆ.

Mega Textile Park: Establishment of Mega Textile Park at Kalaburagi: PM Modi’s announcement

Comments are closed.