Priyanka Chopra-Nick Jonas : ಅಂತಾರಾಷ್ಟ್ರೀಯ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ ನಿಕ್ ಜೋನಾಸ್ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ತಮ್ಮ ಕುಟುಂಬಕ್ಕೆ ಬರಮಾಡಿಕೊಂಡಿದ್ದಾರೆ. ಇಂದು ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಈ ಗುಡ್ ನ್ಯೂಸ್ನ್ನು ಅಭಿಮಾನಿಗಳ ಎದುರು ಹಂಚಿಕೊಂಡಿದ್ದಾರೆ.
‘ಬಾಡಿಗೆ ತಾಯ್ತನದ ಮೂಲಕ ಮಗುವನ್ನು ನಮ್ಮ ಜೀವನಕ್ಕೆ ಬರ ಮಾಡಿಕೊಂಡಿದ್ದೇವೆ ಎಂದು ಹೇಳಲು ಸಂತೋಷವಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ನೀವು ನಮ್ಮ ಖಾಸಗಿತನಕ್ಕೆ ಬೆಲೆ ನೀಡುತ್ತೀರಿ ಎಂಬ ನಂಬಿಕೆಯಿದೆ. ನಾವು ಈಗ ಕುಟುಂಬದ ಕಡೆಗೆ ಹೆಚ್ಚು ಗಮನ ನೀಡಬೇಕು . ಎಲ್ಲರಿಗೂ ಧನ್ಯವಾದಗಳು ಎಂದು ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ಬರೆದುಕೊಂಡಿದ್ದಾರೆ. ಅಂದಹಾಗೆ ಇದು ಗಂಡು ಮಗುವೋ ಅಥವಾ ಹೆಣ್ಣು ಮಗುವೋ ಎಂಬುದರ ಬಗ್ಗೆ ಈ ದಂಪತಿ ಯಾವುದೇ ಮಾಹಿತಿಯನ್ನು ಇಲ್ಲಿಯವರೆಗೆ ಬಹಿರಂಗಪಡಿಸಿಲ್ಲ.
ನಿಕ್ ಜೋನಾಸ್ ದಂಪತಿ ತಾವು ಪೋಷಕರಾಗುವ ಸುದ್ದಿಯನ್ನು ಘೋಷಿಸುತ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ನಟಿ ಲಾರಾ ದತ್ತಾ ದಂಪತಿ ಸೇರಿದಂತೆ ಅನೇಕರು ಕಮೆಂಟ್ ಮೂಲಕ ಶುಭ ಹಾರೈಸಿದ್ದಾರೆ.
2019ರಲ್ಲಿ ಪ್ರಿಯಾಂಕಾ ತಮಗೆ ಮಗುವನ್ನು ಪಡೆಯಬೇಕು ಎಂಬ ಆಸೆ ಇದೆ ಎಂದು ಹೇಳಿಕೊಂಡಿದ್ದರು. ಮನೆಯನ್ನು ಖರೀದಿಸುವುದು ಹಾಗೂ ಮಗುವನ್ನು ಪಡೆಯುವುದು ನನ್ನ ಬೇಡಿಕೆಯ ಪಟ್ಟಿಯಲ್ಲಿದೆ ಎಂದು ಹೇಳಿಕೊಂಡಿದ್ದರು.
ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಾಸ್ ದಂಪತಿ ಜೋಧಪುರದ ಉಮೈದ್ ಭವನದಲ್ಲಿ 2018ರ ಡಿಸೆಂಬರ್ ಒಂದು ಹಾಗೂ ಎರಡರಂದು ಕ್ರಿಶ್ಚಿಯನ್ ಮತ್ತು ಹಿಂದೂ ಸಂಪ್ರದಾಯಗಳೆರಡರ ಪ್ರಕಾರವೂ ಮದುವೆಯಾಗಿದ್ದರು. ಇದಾದ ಬಳಿಕ ದೆಹಲಿ ಹಾಗೂ ಮುಂಬೈನಲ್ಲಿ ದಂಪತಿ ಎರಡು ರಿಸೆಪ್ಶನ್ ಕಾರ್ಯಕ್ರಮವನ್ನು ಆಯೋಜಿಸಿತ್ತು.
Priyanka Chopra-Nick Jonas welcome baby via surrogacy: ‘We are overjoyed’
ಇದನ್ನು ಓದಿ : water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ
ಇದನ್ನೂ ಓದಿ : police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು