Fire At Mumbai High-Rise : ಮುಂಬೈನ ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ : 6 ಮಂದಿ ಸಾವು

ಮುಂಬೈ : Fire At Mumbai High-Rise : ಮುಂಬೈನ 20 ಅಂತಸ್ತಿನ ವಸತಿ ಕಟ್ಟಡದಲ್ಲಿ ಇಂದು ಬೆಳಗ್ಗೆ ಬಹುದೊಡ್ಡ ಅಗ್ನಿ ಅವಘಡ ಸಂಭವಿಸಿದ್ದು ಈ ದುರಂತದಲ್ಲಿ ಕನಿಷ್ಟ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.


ಮುಂಬೈನ ತಾರ್ಡಿಯೋ ಪ್ರದೇಶದ ಗೋವಾಲಿಯಾ ಟ್ಯಾಂಕ್​​ನಲ್ಲಿರುವ ಗಾಂಧಿ ಆಸ್ಪತ್ರೆ ಎದುರಿರುವ ಕಮಲಾ ಕಟ್ಟಡದ 18ನೇ ಮಹಡಿಯಲ್ಲಿ ಬೆಳಗ್ಗೆ 7 ಗಂಟೆ ಸುಮಾರಿಗೆ ಉಂಟಾದ ಅಗ್ನಿ ಅವಘಡದಲ್ಲಿ ಆರು ಮಂದಿ ಸಾವನ್ನಪ್ಪಿದ್ದು ಒಂದೆಡೆಯಾದರೆ ಕನಿಷ್ಟ 15 ಮಂದಿ ಈ ದುರಂತದಲ್ಲಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.


ಈ ದುರ್ಘಟನೆಯ ಸಾಕಷ್ಟು ವಿಡಿಯೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು ಕಟ್ಟಡದಿಂದ ಹೊರಬಂದ ಹೊಗೆಯು ಮುಗಿಲೆತ್ತರಕ್ಕೆ ವ್ಯಾಪಿಸಿರೋದನ್ನು ಕಾಣಬಹುದಾಗಿದೆ. ಇನ್ನು ಈ ವಿಚಾರವಾಗಿ ಮಾತನಾಡಿದ ಮುಂಬೈನ ಮೇಯರ್​ ಕಿಶೋರಿ ಪೆಡ್ನೇಕರ್​ ಅವಘಡದಲ್ಲಿ ಗಾಯಗೊಂಡ ಆರು ಮಂದಿ ವೃದ್ಧರಿಗೆ ಕೃತಕ ಆಮ್ಲಜನಕದ ಅವಶ್ಯಕತೆ ಇದೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದರು. ಅಲ್ಲದೇ ಅಗ್ನಿಯ ಜ್ವಾಲೆಯು ನಿಯಂತ್ರಣಕ್ಕೆ ಬಂದಿದ್ದು ದಟ್ಟವಾದ ಹೊಗೆ ಎಲ್ಲೆಡೆ ಆವರಿಸಿದೆ . ವಸತಿ ಕಟ್ಟಡದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.
ರಿಲಯನ್ಸ್​ ಹಾಗೂ ವೊಕಾರ್ಡ್​ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸಿದರು ಎಂಬ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಶೀಘ್ರದಲ್ಲಿಯೇ ತನಿಖೆ ನಡೆಯಲಿದೆ ಎಂದು ಮುಂಬೈ ಮೇಯರ್​ ಕಿಶೋರಿ ಪೆಡ್ನೇಕರ್​ ಹೇಳಿದರು.


ಅಗ್ನಿ ಅವಘಡದ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. 13 ಅಗ್ನಿಶಾಮಕದಳ ಇಂಜಿನ್​ಗಳು ಹಾಗೂ ಏಳು ವಾಟರ್​ ಜೆಟ್ಟೀಸ್​​ನ್ನು ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

6 Dead, 15 Injured In Huge Fire At Mumbai High-Rise

ಇದನ್ನು ಓದಿ : water price hike : ಬೆಂಗಳೂರಲ್ಲಿ ನೀರಿನ ದರ ಏರಿಕೆ ಶಾಕ್‌ : ಸರಕಾರಕ್ಕೆ ದರ ಏರಿಕೆ ಪ್ರಸ್ತಾಪ ಸಲ್ಲಿಸಿದ ಜಲಮಂಡಳಿ

ಇದನ್ನೂ ಓದಿ : police corona positive : ಕೊರೋನಾ ಮೂರನೇ ಅಲೆಗೆ ನಲುಗಿದ ಖಾಕಿ ಪಡೆ : ಸಿಲಿಕಾನ್ ಸಿಟಿಯಲ್ಲಿ 1234 ಪೊಲೀಸರಿಗೆ ಸೋಂಕು

Comments are closed.