ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ PRKಪ್ರೊಡಕ್ಷನ್ ನಲ್ಲಿ ಹೊಸತನದ ಹೊಸಪ್ರತಿಭೆಗಳಿಗೆ ವೇದಿಕೆ ಕಲ್ಪಿಸೋ ಮೂಲಕ ಚಿತ್ರರಂಗದಲ್ಲಿ ಎಲ್ಲರಿಗೂ ಮಾದರಿಯಾಗುತ್ತಿದೆ. ಈಗಾಗಲೇ PRKಪ್ರೊಡಕ್ಷನ್ ಕವಲುದಾರಿ, ಮಾಯಾ ಬಜಾರ್ ಅಲ್ಲದೇ ಪ್ರೀ ಪ್ರೊಡಕ್ಷನ್ ಹಂತದಲ್ಲಿರೋ ರಾಮ ರಾಮ ರೇ ಖ್ಯಾತಿಯ ಸತ್ಯಪ್ರಕಾಶ್ ಆಕ್ಷನ್ ಕಟ್ ಹೇಳ್ತಿರೋ ಸಿನಿಮಾ ನಂತರ ಫ್ಯಾಮಿಲಿ ಫ್ಯಾಕ್ ಅನ್ನೋ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದೆ.

ನಿರ್ದೇಶಕ ಅರ್ಜುನ್ ಕುಮಾರ್ ಆಕ್ಷನ್ ಕಟ್ ಹೇಳ್ತಿರೋ ಕಾಮಿಡಿ ಸಿನಿಮಾಕ್ಕೆ ಫ್ಯಾಮಿಲಿ ಪ್ಯಾಕ್ ಅಂತ ಹೆಸರಿಟ್ಟಿದ್ದಾರೆ.

ಸಂಕಷ್ಟಕರ ಗಣಪತಿ ಖ್ಯಾತಿಯ ಲಿಖಿತ್ ಶೆಟ್ಟಿ ಮತ್ತು ಅಮೃತಾ ಅಯ್ಯಂಗಾರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಲಿದ್ದು, ಹೊಸತನದ ಸಿನಿಮಾ ನಿರೀಕ್ಷೆ ಮಾಡಬಹುದು.

ಸಂಕಷ್ಟಕರ ಗಣಪತಿ ಸಿನಿಮಾ ಮೂಲಕ ತನ್ನ ಪ್ರತಿಭೆಯ ಮೂಲಕ ಗುರುತಿಸಿಕೊಂಡಿದ್ದ ಲಿಖಿತ್ ಶೆಟ್ಟಿ ಈ ಸಿನಿಮಾದಲ್ಲಿ ಲೀಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇವರಿಗೆ ಜೋಡಿಯಾಗಿ ಚಂದನವನದಲ್ಲಿ ಇತ್ತೀಚಿಗೆ ಪಾಪ್ ಕಾರ್ನ್ ಮಂಕಿ ಟೈಗರ್, ಲವ್ ಮಾಕ್ಟೈಲ್ ಸಿನಿಮಾಗಳ ಮೂಲಕ ತನ್ನ ನ್ಯಾಚುರಲ್ ಆಕ್ಟಿಂಗ್ ನಿಂದ ಮನೆಮಾತಾಗಿರೋ ಅಮೃತಾ ಅಯ್ಯಂಗಾರ್ ನಟಿಸಲಿದ್ದಾರೆ.

ಈಗಾಗಲೇ ಸಿನಿಮಾ ಫೋಟೊ ಶೂಟ್ ನಡೆದಿದ್ದು, ಜೋಡಿ ಸಖತ್ ಕ್ಯೂಟ್ ಆಗಿ ಕಾಣ್ತಾರೆ. ಅದ್ರಲ್ಲೂ ಪ್ರತಿಭಾವಂತ ಕಲಾವಿದರಿಂದಲೇ ಕೂಡಿರೋ ಫ್ಯಾಮಿಲಿ ಫ್ಯಾಕ್ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.