ಲಾಕ್ ಡೌನ್ ಹಿನ್ನೆಲೆ ಡ್ರೋನ್ ಬಳಕೆ : ವಿಟ್ಲ ಪೊಲೀಸರ ವಿನೂತನ ಪ್ರಯತ್ನ

0

ವಿಟ್ಲ : ಕೊರೊನಾ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಅದ್ರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.

ಆದರೂ ಜನ ಪೊಲೀಸರ ಕಣ್ಣುತಪ್ಪಿಸಿ ಮನೆಯಿಂದ ಹೊರಬರುತ್ತಿದ್ದಾರೆ. ಹೀಗಾಗಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸೋ ಸಲುವಾಗಿ ವಿಟ್ಲ ಪೊಲೀಸರು ಡ್ರೋನ್ ಕ್ಯಾಮರಾ ಬಳಕೆಗೆ ಮುಂದಾಗಿದ್ದಾರೆ.

ನಿತ್ಯವೂ ವಿಟ್ಲದಾದ್ಯಂತ ಡ್ರೋನ್ ಕ್ಯಾಮರಾ ಹಾರಿಸೋ ಮೂಲಕ ಯಾರೂ ಕೂಡ ಮನೆಯಿಂದ ಹೊರ ಬಾರದಂತೆ ಹದ್ದಿನಕಣ್ಣಿಟ್ಟಿದ್ದಾರೆ.

ಪೊಲೀಸರ ಕಣ್ಣು ತಪ್ಪಿಸಿ ಯಾರಾದ್ರೂ ಮನೆಯಿಂದ ಹೊರ ಬಂದ್ರೆ ಅವರ ಮೇಲೆ ನಿರ್ಧಾಕ್ಷಿಣ್ಯವಾಗಿ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.

ಜಿಲ್ಲಾಡಳಿತ ನೀಡಿರೋ ಅವಧಿಯಲ್ಲಷ್ಟೇ ಜನರು ಮನೆಯಿಂದ ಹೊರ ಬಂದು ಅಗತ್ಯವಸ್ತುಗಳನ್ನು ಖರೀದಿ ಮಾಡಬಹುದಾಗಿದೆ.

ಇದೀಗ ಪೊಲೀಸರು ಡ್ರೋನ್ ಕ್ಯಾಮರಾ ಬಳಕೆಗೆ ಮುಂದಾಗುತ್ತಲೇ ಜನರು ಕೂಡ ಮನೆಯಿಂದ ಹೊರಗೆ ಬರಲು ಹಿಂಜರಿಯುತ್ತಿದ್ದಾರೆ.

Leave A Reply

Your email address will not be published.