ಸಿನಿಮಾಗಳನ್ನು ಥಿಯೇಟರ್, ಮಲ್ಟಿಫ್ಲೆಕ್ಸ್ ಗಳಲ್ಲಿ ರಿಲೀಸ್ ಮಾಡೋದು ಮಾಮೂಲು. ಆದ್ರೆ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಒಡೆತನದ ಪಿಆರ್ ಕೆ ಪ್ರೊಡಕ್ಷನ್ ಹೊಸ ದಾಖಲೆ ಸೃಷ್ಟಿಸಲು ಹೊರಟಿದೆ. ಪಿಆರ್ ಕೆ ಪ್ರೊಡಕ್ಷನ್ ಸಂಸ್ಥೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಎರಡು ಚಲನಚಿತ್ರಗಳು ನೇರವಾಗಿ ಒಟಿಟಿ ಪ್ಲಾಟ್ ಫಾರಂಗಳಲ್ಲಿ ಬಿಡುಗಡೆಗೆ ಸಿದ್ದತೆ ಮಾಡಿಕೊಂಡಿದೆ.
ಪಿಆರ್ ಕೆ ಪ್ರೋಡಕ್ಷನ್ಸ್ ಫ್ರೆಂಚ್ ಬಿರಿಯಾನಿ ಹಾಗೂ ಲಾ ಚಿತ್ರಗಳನ್ನು ನಿರ್ಮಾಣ ಮಾಡಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಥಿಯೇಟರ್, ಮಲ್ಟಿಫ್ಲೆಕ್ಸ್ ಗಳು ಆರಂಭವಾಗೋದು ಕಷ್ಟ. ಹೀಗಾಗಿ ಸಿನಿಮಾಗಳನ್ನು ಜನರಿಗೆ ತಲುಪಿಸೋದಕ್ಕೆ ಹೊಸ ಮಾರ್ಗವನ್ನು ಕೈಗೊಂಡಿದೆ.

ಅದ್ರಲ್ಲೂ ಪಿಆರ್ ಕೆ ಪ್ರೋಡಕ್ಷನ್ಸ್ ಹೊಸ ಸಾಹಸವೊಂದಕ್ಕೆ ಕೈ ಹಾಕಿದೆ. ಡ್ಯಾನೀಶ್ ಸೇಥ್ ಅಭಿನಯದ ‘ಫ್ರೆಂಚ್ ಬಿರಿಯಾನಿ’ ಹಾಗೂ ನಟ ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ಅಭಿನಯದ ‘ಲಾ’ಚಿತ್ರಗಳು ನೇರವಾಗಿ ಅಮೇಜಾನ್ ಪ್ರೈಮ್ ವಿಡಿಯೋಸ್ ನಲ್ಲಿ ಬಿಡುಗಡೆಯಾಗಲಿದೆ. ಜೂನ್ 24 ರಂದು ಫ್ರೆಂಚ್ ಬಿರಿಯಾನಿ ರಿಲೀಸ್ ಆದ್ರೆ, ಜೂನ್ 26 ಕ್ಕೆ ‘ಲಾ’ಸಿನಿಮಾಗಳು ರಿಲೀಸ್ ಆಗಲಿವೆ.
ತಮಿಳು, ಹಿಂದಿ ಸೇರಿ ಎಲ್ಲಾ ಭಾಷೆಗಳಲ್ಲಿಯೂ ಚಿತ್ರಗಳು ನೇರವಾಗಿ ಒಟಿಟಿ ಪ್ಲಾಟ್ಫಾರ್ಮ್ಗಳಲ್ಲಿ ತೆರೆ ಕಾಣಲು ಸಿದ್ದತೆ ನಡೆದಿದೆ. ಅಂತೆಯೇ ಕನ್ನಡದಲ್ಲಿ ಪಿಆರ್ಕೆ ಸಂಸ್ಥೆ ಈ ಸಾಹಸಕ್ಕೆ ಕೈಹಾಕಿದ್ದು, ಕನ್ನಡದ ಮೊಟ್ಟ ಮೊದಲ ಬಾರಿಗೆ ಆನ್ಲೈನ್ ವೇದಿಕೆಯ ಮುಖಾಂತರ ಚಿತ್ರ ಬಿಡುಗಡೆ ನಡೆಯುತ್ತಿದೆ. ಇನ್ನು ಅಮೇಜಾಜ್ ಪ್ರೈಮ್ ನಲ್ಲಿ 7 ಸಿನಿಮಾಗಳು ರಿಲೀಸ್ ಆಗ್ತಿದ್ದು, ಮೇ 29 ರಂದು ಪೊನ್ ಮಗಳ್ ವಂದಾಳ್ (ತಮಿಳು), ಜೂನ್ 12ರಂದು ಗುಲಾಬೋ ಸಿತಾಬಿ (ಹಿಂದಿ), ಜುಲೈ 17ರಂದು ಪೆಂಗ್ವಿನ್ (ತಮಿಳು ಮತ್ತು ತೆಲುಗು), ಶಕುಂತಲಾ ದೇವಿ ( ಹಿಂದಿ) ಹಾಗೂ ಸೂಫಿಯುಮ್ ಸುಜಾತೆಯಮ್ (ಮಲಯಾಲಂ) ಸಿನಿಮಾಗಳು ತೆರೆಗೆ ಬರ್ತಿವೆ.