ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಮ್ಮನ್ನೆಲ್ಲ ಅಗಲಿ ಕೆಲ ಸಮಯಗಳೇ ಕಳೆದರೂ ಸಹ ಇನ್ನೂ ಕೂಡ ಅಭಿಮಾನಿಗಳ ಎದೆಯಲ್ಲಿ ಜೀವಂತವಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಬೇಕಿದ್ದ ಕರುನಾಡಿನ ಪ್ರೀತಿಯ ಅಪ್ಪು ಬಾರದ ಲೋಕಕ್ಕೆ ತೆರಳಿದ್ದಾರೆ. ನಟ ಪುನೀತ್ ಕೇವಲ ಅಭಿನಯ ಮಾತ್ರವಲ್ಲದೇ ಸಿನಿಮಾ ನಿರ್ಮಾಣವನ್ನೂ ಮಾಡುತ್ತಿದ್ದರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅಪ್ಪು ಕನಸಿನ ಕೂಸು ಪಿಆರ್ಕೆ ಸಂಸ್ಥೆಗೆ ವಿಶೇಷ ಗೌರವ ಸಲ್ಲಿಸುವ ಸಲುವಾಗಿ ಅಮೆಜಾನ್ ಪ್ರೈಮ್ (PRK Week in Amazon Prime) ಹೊಸದೊಂದು ಪ್ರಯತ್ನವನ್ನು ಮಾಡಿದೆ
ಪುನೀತ್ ರಾಜ್ಕುಮಾರ್ ಹುಟ್ಟು ಹಾಕಿರುವ ಸಂಸ್ಥೆ ಪಿಆರ್ಕೆ ಪ್ರೊಡಕ್ಷನ್ನಲ್ಲಿ ನಾಲ್ಕು ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿದೆ. ಮೂರು ಸಿನಿಮಾಗಳು ಸದ್ಯ ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗುತ್ತಿದೆ. ವಾರಕ್ಕೆ ಒಂದರಂತೆ ಮೂರು ವಾರಗಳ ಕಾಲ ಪಿಆರ್ಕೆ ಪ್ರೊಡಕ್ಷನ್ನ ಒಂದೊಂದೇ ಸಿನಿಮಾಗಳು ಅಮೆಜಾನ್ ಪ್ರೈಮ್ನಲ್ಲಿ ರಿಲೀಸ್ ಆಗಲಿದೆ. ಇದಕ್ಕೆ ಪಿಆರ್ಕೆ ವಾರ ಎಂದು ಹೆಸರಿಡಲಾಗಿದೆ.
ಪಿಆರ್ಕೆ ವಾರ ಎಂಬ ಹೆಸರನ್ನು ಕೇಳುತ್ತಿದ್ದಂತೆಯೇ ಅಭಿಮಾನಿಗಳು ಸಖತ್ ಖುಷ್ ಆಗಿದ್ದು ಸಿನಿಮಾಗಳ ರಿಲೀಸ್ಗೆ ಕಾತುರರಾಗಿದ್ದಾರೆ. ಪುನೀತ್ ರಾಜ್ಕುಮಾರ್ಗೆ ವಿಶೇಷ ನಮನ ಸಲ್ಲಿಸಲು ಮುಂದಾಗಿರುವ ಅಮೆಜಾನ್ ಪ್ರೈಮ್ ಪ್ರಯತ್ನಕ್ಕೆ ಕರುನಾಡು ಯಾವ ರೀತಿಯಲ್ಲಿ ರೆಸ್ಪಾನ್ಸ್ ನೀಡುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.
ಪಿಆರ್ಕೆ ಪ್ರೊಡಕ್ಷನ್ನಲ್ಲಿ ಫ್ಯಾಮಿಲಿ ಪ್ಯಾಕ್, ಮ್ಯಾನ್ ಆಫ್ ದಿ ಮ್ಯಾಚ್ , ಓ2 ಸಿನಿಮಾಗಳು ನಿರ್ಮಾಣ ಹಂತದ್ದಲಿವೆ. ಈ ಸಿನಿಮಾಗಳು ಒಂದೇ ತಿಂಗಳಲ್ಲಿ ರಿಲೀಸ್ ಆಗಲಿವೆ ಎಂಬುದು ವಿಶೇಷ. ಈ ಹಿಂದೆ ಪಿಆರ್ಕೆ ಪ್ರೊಡಕ್ಷನ್ನ ಕವಲುದಾರಿ, ಮಾಯಾಬಜಾರ್ 2016, ಲಾ ಮತ್ತ ಫ್ರೆಂಚ್ ಬಿರಿಯಾನಿ ಕೂಡ ಅಮೆಜಾನ್ ಪ್ರೈಮ್ನಲ್ಲಿಯೇ ರಿಲೀಸ್ ಆಗಿತ್ತು. ಪಿಆರ್ಕೆ ಬ್ಯಾನರ್ನಡಿಯಲ್ಲಿ ನಿರ್ಮಾಣವಾದ ಗಂಧದ ಗುಡಿ ಮಾತ್ರ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.
ಇದನ್ನು ಓದಿ : Bharajarangi-2 : ಪ್ರೀತಿಯ ಅಪ್ಪುಗೆ ‘ಭರ್ಜರಂಗಿ-2’ ಅರ್ಪಿಸಿದ ಶಿವಣ್ಣ
ಇದನ್ನೂ ಓದಿ : Athiya Shetty : ಬಾಡಿ ಶೇಮಿಂಗ್ ಮಾಡುವವರ ವಿರುದ್ಧ ಖಡಕ್ ಹೇಳಿಕೆ ಕೊಟ್ಟ ನಟಿ ಆಥಿಯಾ ಶೆಟ್ಟಿ
prk productions movies family pack man of the match o2 movie will be releasing in amazon prime video