Supriya Lifescience IPO: ಸುಪ್ರಿಯಾ ಲೈಫ್​ಸೈನ್ಸ್​ ಐಪಿಓಗೆ ಭರ್ಜರಿ ರೆಸ್ಪಾನ್ಸ್​; ಚಂದಾದಾರಿಕೆ ಸಂಖ್ಯೆಯಲ್ಲಿ ಭಾರೀ ಏರಿಕೆ

ಸುಪ್ರಿಯಾ ಲೈಫ್​ ಸೈನ್ಸ್​ ಲಿಮಿಟೆಡ್​​ನ (Supriya Lifescience IPO) ಸಕ್ರಿಯ ಔಷಧೀಯ ಪದಾರ್ಥಗಳನ್ನು ತಯಾರಿಸುವ ಕಂಪನಿಯ ಐಪಿಒ ಹೂಡಿಕೆದಾರರಿಂದ ಉತ್ತಮ ಪ್ರತಿಕ್ರಿಯೆಯನ್ನು ಸ್ವೀಕರಿಸಿದೆ. ಇಶ್ಯೂವಿನ ಕೊನೆಯ ದಿನವಾದ ಸೋಮವಾರ ಮಧ್ಯಾಹ್ನ 3:30ರ ಸುಮಾರಿಗೆ ಚಂದಾದಾರರ ಸಂಖ್ಯೆಯು 63 ಪಟ್ಟು ಹೆಚ್ಚಾಗಿದೆ. ಕ್ಯೂಐಬಿ, ಎನ್​ಐಐನಿಂದ ಚಿಲ್ಲರೆ ಹೂಡಿಕೆದಾರರು ಐಪಿಓಗೆ ಪ್ರಚಂಡ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ಚಿಲ್ಲರೆ ಹೂಡಿಕೆದಾರರಿಗೆ ಮೀಸಲಾದ ಭಾಗವು 53 ಪಟ್ಟು ಹೆಚ್ಚಾಗಿದೆ. ಇದರಲ್ಲಿ ಹೂಡಿಕೆ ಮಾಡಲು ಸೋಮವಾರ ಕೊನೆಯ ದಿನವಾಗಿತ್ತು. ಸುಪ್ರಿಯಾ ಲೈಫ್​ ಸೈನ್ಸ್​ ಐಪಿಓ ಡಿಸೆಂಬರ್​ 16ರಂದು ತೆರೆದಿತ್ತು. ಹಾಗೂ ಸೋಮವಾರದಂದು ಕೊನೆಗೊಂಡಿದೆ. ಕಂಪನಿಯು ಐಪಿಒಗೆ 265-274 ರೂ.ಗೆ ಪ್ರೈಸ್ ಬಾಂಡ್​ ನಿಗದಿಪಡಿಸಿದೆ. ಲಾಟ್ ಸೈಜ್​ 54 ಷೇರುಗಳನ್ನು ಹೊಂದಿದೆ, ಅಂದರೆ ಪ್ರೈಸ್​ ಬ್ಯಾಂಡ್‌ನ ಮೇಲಿನ ಬೆಲೆಗೆ ಅನುಗುಣವಾಗಿ, ಹೂಡಿಕೆದಾರರು ಕನಿಷ್ಠ 14,796 ರೂಪಾಯಿಗಳನ್ನು ಹೂಡಿಕೆ ಮಾಡಬೇಕಾಗುತ್ತದೆ.

ಸುಪ್ರಿಯಾ ಲೈಫ್​ ಸೈನ್ಸ್​​ನ ಐಪಿಓ ತನ್ನ ಕೊನೆಯ ಚಂದಾದಾರಿಕೆ ದಿನದಂದು ಅಂದರೆ ಸೋಮವಾರ ಮಧ್ಯಾಹ್ನ 3:30ರ ವೇಳೆಗೆ 63 ಬಾರಿ ಚಂದಾದಾರಿಕೆಯಾಗಿದೆ. ಇಶ್ಯೂಚಿನ 75ರಷ್ಟು ಸಂಚಿಕೆಯನ್ನು ಅರ್ಹ ಸಾಂಸ್ಥಿಯ ಖರೀದಿದಾರರಿಗೆ ಕಾಯ್ದಿರಿಸಲಾಗಿದೆ. ಹಾಗೂ ಇದುವರೆಗೆ 27 ಬಾರಿ ಭರ್ತಿ ಮಾಡಲಾಗಿದೆ. 15 ರಷ್ಟು ಸಾಂಸ್ಥಿಕೇತರ ಹೂಡಿಕೆದಾರರಿಗೆ ಮೀಸಲಿಡಲಾಗಿದೆ. ಇದುವರೆಗೆ ಅದು 140 ಬಾರಿ ಭರ್ತಿಯಾಗಿದೆ. 10 ಪ್ರತಿಶತದಷ್ಟು ಷೇರುಗಳನ್ನು ಚಿಲ್ಲರೆ ಹೂಡಿಕೆದಾರರಿಗೆ ಕಾಯ್ದಿರಿಸಲಾಗಿದೆ. ಹಾಗೂ ಇದು 53 ಬಾರಿ ತುಂಬಿದೆ.

ಇದನ್ನು ಓದಿ : Omicron Coronavirus : ದೇಶದಲ್ಲಿ ಸದ್ದಿಲ್ಲದೇ ಏರಿಕೆ ಕಂಡ ಒಮಿಕ್ರಾನ್​ ಪ್ರಕರಣ: ದೇಶಾದ್ಯಂತ 200 ಪ್ರಕರಣ ವರದಿ

ಇದನ್ನೂ ಓದಿ : Panama Papers : ಏನಿದು ಪನಾಮ ಪೇಪರ್ಸ್ ಲೀಕ್​? ಇದರಲ್ಲಿ ಐಶ್ವರ್ಯಾ ರೈ ಹೆಸರು ಸಿಲುಕಿದ್ದೇಗೆ? ಇಲ್ಲಿದೆ ಮಾಹಿತಿ

ಇದನ್ನೂ ಓದಿ : Debit Credit Card Rules : ರಿಸರ್ವ್ ಬ್ಯಾಂಕ್‌ನಿಂದ ಹೊಸ ನಿಯಮ; ಡೆಬಿಟ್, ಕ್ರೆಡಿಟ್ ಕಾರ್ಡ್‌ ನಿಯಮಗಳಲ್ಲಿ ಮಹತ್ವದ ಬದಲಾವಣೆ

ಇದನ್ನೂ ಓದಿ : PAN card is fake or not : ಪಾನ್​ ಕಾರ್ಡ್​ ನಕಲಿಯೋ ಅಥವಾ ಅಸಲಿಯೋ ಎಂದು ಪರಿಶೀಲಿಸುವುದು ಹೇಗೆ..? ಇಲ್ಲಿದೆ ಮಾಹಿತಿ

Supriya Lifescience IPO Subscribed 71.47 Times On Day 3

Comments are closed.