ಸದ್ಯ ಭಾರತದಲ್ಲಿ ಸದ್ದು ಮಾಡ್ತಿರೋ ಸಿನಿಮಾ ನಿರ್ಮಾಣ ಸಂಸ್ಥೆ(Hombale Films) ಹೊಂಬಾಳೆ ಫಿಲ್ಮ್ಸ್. ಪುನೀತ್ ರಾಜ್‍ಕುಮಾರ್, ರಿಶಬ್ ಶೆಟ್ಟಿ, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಹಲವು ಸ್ಟಾರ್ ಗಳಿಗೆ ಸಿನಿಮಾ ನಿರ್ಮಿಸಿದ ಹೊಂಬಾಳೆ ಈಗ ಬಾದ್ ಶಾ ಕಿಚ್ಚ ಸುದೀಪ್(Kiccha Sudeep) ಗಾಗಿ ಸಿನಿಮಾ ನಿರ್ಮಿಸಲು ಮುಂದಾಗಿದೇ ಎನ್ನಲಾಗ್ತಿದ್ದು, ಹೊಂಬಾಳೆ ಸಹ ನಿರ್ಮಾಪಕ ಕಾರ್ತೀಕ್ ಈ ಬಗ್ಗೆ ಸುಳಿವು ನೀಡಿದ್ದಾರೆ.
ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡ್ತಿರೋ ಸಿನಿಮಾ ನಿರ್ಮಾಣ ಸಂಸ್ಥೆ (Hombale Films)ಹೊಂಬಾಳೆ ಫಿಲ್ಸ್ಮ್. ಕೆಜಿಎಫ್, ಕೆಜಿಎಫ್-೨ ದಂತಹ ಸಿನಿಮಾಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್, ರಾಘವೇಂದ್ರ್ ಸ್ಟೋರ್, ಕಾಂತಾರದಂತಹ ಸಿನಿಮಾಗಳ ಮೂಲಕ ಸಿನಿರಸಿಕರ ಮನ ಗೆಲ್ಲುತ್ತಿದೆ. ಈ ಮಧ್ಯೆ ಕನ್ನಡದ ಬಹುತೇಕ ನಟರ ಜೊತೆ ಸಿನಿಮಾ ನಿರ್ಮಿಸಿದ ಹೊಂಬಾಳೆ ಈಗ ಅಭಿನಯ ಚಕ್ರವರ್ತಿ, ಬಹುಭಾಷಾ ನಟ ಸುದೀಪ್ (Kiccha Sudeep)ಗಾಗಿ ಸಿನಿಮಾ ನಿರ್ಮಿಸಲಿದೆ ಎನ್ನಲಾಗ್ತಿದೆ.ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಕಾರ್ಯಕಾರಿ ನಿರ್ಮಾಪಕ ಕಾರ್ತೀಕ್ ಗೌಡ ಸುಳಿವು ನೀಡಿದ್ದಾರೆ.
ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ನಟ ಸುದೀಪ್ ಜೊತೆಗಿನ ಪೋಟೋ ಹಂಚಿಕೊಂಡ ಕಾರ್ತೀಕ್ ಗೌಡ್ ನ್ಯೂ ಬಿಗಿನಿಂಗ್ ಎಂದು ಕ್ಯಾಪ್ಸನ್ ನೀಡಿದ್ದಾರೆ.ಈ ಪೋಟೋ ನೋಡಿದ ಸಿನಿಮಾ ಮಂದಿ ಹಾಗೂ ಅಭಿಮಾನಿಗಳು ಸುದೀಪ್ ಮುಂದಿನ ಸಿನಿಮಾ ಹೊಂಬಾಳೆ ಫಿಲ್ಮ್ಸ್ ಜೊತೆ ಎಂದು ತಿಳಿದು ಖುಷಿಯಾಗಿದ್ದಾರೆ.
To new beginnings @KicchaSudeep Sir pic.twitter.com/IthUOilm9q
— Karthik Gowda (@Karthik1423) October 5, 2022
ವಿಕ್ರಾಂತ್ ರೋಣ ಸಿನಿಮಾದ ಬಳಿಕ ಸುದೀಪ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಆ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಬಿಲ್ಲ ರಂಗ ಭಾಷಾ ಸಿನಿಮಾ ಸುದೀಪ್ ಕೈಯಲ್ಲಿ ಇತ್ತಾದರೂ ಅದರ ಮಧ್ಯೆಯೇ ಈಗ ಸುದೀಪ್ ಹೊಂಬಾಳೆ ಸಿನಿಮಾ ಜೊತೆ ಸೇರೋದು ಖಚಿತವಾಗಿದೆ.
ಇದನ್ನೂ ಓದಿ : Dhruva Sarja : ಅಜ್ಜಿ,ಅಣ್ಣನ ಅಗಲಿಕೆ ಕಾಡ್ತಿದೆ: ಅದ್ದೂರಿ ಬರ್ತಡೇ ಬೇಡ ಎಂದ ಧ್ರುವ ಸರ್ಜಾ
ಇದನ್ನೂ ಓದಿ : Kanthara Movie : ದಾಖಲೆ ಮೊತ್ತಕ್ಕೆ ಕಾಂತಾರ ರೈಟ್ಸ್ ಸೇಲ್: ಓಟಿಟಿಯಲ್ಲೂ ಗೆದ್ದ ರಿಷಬ್ ಶೆಟ್ಟಿ
ಇದನ್ನೂ ಓದಿ : Kantara Movie leaks : ಕಾಂತಾರಕ್ಕೂ ಪೈರಸಿ ಕಾಟ: ಸೋಷಿಯಲ್ ಮೀಡಿಯಾದಲ್ಲಿ ಲಿಂಕ್ ವೈರಲ್
ಆದರೆ ಸಿನಿಮಾ ಯಾವುದು ಎಂಬುದರ ಬಗ್ಗೆ ಹೊಂಬಾಳೆ ಫಿಲ್ಮ್ಸ್(Hombale Films) ಯಾವುದೇ ಕ್ಲೂ ಬಿಟ್ಟು ಕೊಟ್ಟಿಲ್ಲ. ಕನ್ನಡ ಮಾತ್ರವಲ್ಲದೇ ಹಿಂದಿ,ತಮಿಳು,ತೆಲುಗು ಭಾಷೆಯಲ್ಲೂ ಸಿನಿಮಾ ನಿರ್ಮಿಸುತ್ತಿದೆ. ಮೊನ್ನೆ ಮೊನ್ನೆಯಷ್ಟೇ ಹೊಂಬಾಳೆ ಫಿಲ್ಮ್ಸ್ ಹೊಸ ಸಿನಿಮಾ ಅನೌನ್ಸ್ ಮಾಡಿದ್ದು, ಧೂಮ್ ಟೈಟಲ್ ಸಿನಿಮಾವನ್ನು ಲೂಸಿಯಾ ಖ್ಯಾತಿಯ ಪವನ್ ಕುಮಾರ್ ನಿರ್ದೇಶಿಸುತ್ತಿದ್ದು, ಫಹಾದ್ ಫಾಸಿಲ್ ಸಿನಿಮಾದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ.
Produced by “Hombale Films”, Sudeep Cinema: Karthik give Clue