Mangaluru Dussehra:ಮಂಗಳೂರು ದಸರಾ ಮಹೋತ್ಸವ ಸಂಪನ್ನ: ಶಾರದಾ ಮಾತೆಗೆ ಅದ್ಧೂರಿ ವಿದಾಯ

ಮಂಗಳೂರು : Mangaluru Dussehra : ಮಂಗಳೂರು ದಸರಾ ಮಹೋತ್ಸವಕ್ಕೆ ಇಂದು ಅದ್ದೂರಿ ತೆರೆಬಿದ್ದಿದೆ. ನಿನ್ನೆ ಸಂಜೆ ಆರಂಭಗೊಂಡ ದಸರಾ ಮೆರವಣಿಗೆ ಇಂದು‌ ಮುಂಜಾನೆ ಸಂಪನ್ನಗೊಂಡಿತು. 80 ಕ್ಕೂ‌ಅಧಿಕ ವಿವಿಧ ಟ್ಯಾಬ್ಲೋಗಳ ಮೆರವಣಿಗೆಯೊಂದಿಗೆ ಸಾಗಿ ಬಂದ ಶಾರದಾ ಮಾತೆಯ ವಿಗ್ರಹವನ್ನು ಕ್ಷೇತ್ರದ ಪುಷ್ಕರಣಿಯಲ್ಲಿ ಜಲಸ್ತಂಭನ ಮಾಡುವುದರೊಂದಿಗೆ ಈ ಬಾರಿಯ ದಸರಾಕ್ಕೆ ತೆರೆ ಎಳೆಯಲಾಯಿತು.

ಚಿತ್ರಕೃಪೆ :ದಯ ಕುಕ್ಕಾಜೆ

ಜಗತ್ ಪ್ರಸಿದ್ಧ ಮಂಗಳೂರು ದಸರಾಕ್ಕೆ ಇಂದು ಅದ್ದೂರಿ ತೆರೆಬಿತ್ತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಕಳೆದ 10 ದಿನಗಳಿಂದ ಅದ್ದೂರಿಯಾಗಿ ನಡೆದ ನವರಾತ್ರಿ ಮಹೋತ್ಸವ ದಸರಾ ಮೆರವಣಿಗೆಯೊಂದಿಗೆ ಸಂಪನ್ನಗೊಂಡಿತು.ಕೇಂದ್ರದ ಮಾಜಿ ಸಚಿವ, ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಿನ್ನೆ ಸಂಜೆ 4.30ಕ್ಕೆ ಕುದ್ರೋಳಿ ಕ್ಷೇತ್ರದಿಂದ ಹೊರಟ ಈ ಬೃಹತ್ ದಸರಾ ಮೆರವಣಿಗೆಯಲ್ಲಿ ವಿಘ್ನನಿವಾರಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯರ ಮೂರ್ತಿಗಳನ್ನು ಸ್ಥಬ್ದ ಚಿತ್ರದೊಂದಿಗೆ ಕೊಂಡೊಯ್ಯಲಾಯಿತು.ದೇಶದ ಇತಿಹಾಸವನ್ನು ಸಾರುವ ,ಧಾರ್ಮಿಕ, ಜಾನಪದ ,ಹುಲಿವೇಷ ಸೇರಿದಂತೆ 80ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳೊಂದಿಗೆ ವಿವಿಧ ಜಾನಪದ ನೃತ್ಯಗಳು,ವಿವಿಧ ವಾದ್ಯಗೋಷ್ಟಿಗಳೂ,ಚೆಂಡೆವಾದನಗಳು ಈ ಅದ್ದೂರಿ ದಸರಾ ಮೆರವಣಿಗೆಗೆ ಮೆರಗು ನೀಡಿತು. ಕೊರೋನಾದ ಎರಡು ವರ್ಷದ ಬಳಿಕ ನಡೆದ ಈ ಅದ್ದೂರಿ ದಸರಾ ನೋಡಿದ ಜನ ಈ ಬಾರಿಯ ದಸರಾವನ್ನು ಹಾಡಿಹೊಗಳಿದರು.

ಚಿತ್ರಕೃಪೆ:ಸ್ಪಾಟ್​ಲೈಟ್ ಪ್ರೊಡಕ್ಷನ್ಸ್​

ನಗರದ 7 ಕಿಲೋಮೀಟರ್ ರಾಜ ರಸ್ತೆಯಲ್ಲಿ ಸಾಗಿದ ಈ ದಸರಾ ಮೆರವಣಿಗೆ ಇಂದು ಮುಂಜಾನೆ ಮತ್ತೆ ಶ್ರೀ ಕ್ಷೇತ್ರಕ್ಕೆ ಆಗಮಿಸಿತು.ಕ್ಷೇತ್ರದ ಪುಷ್ಕರಣಿಯಲ್ಲಿ ಎಲ್ಲಾ ಮೂರ್ತಿಗಳ ಜೊತೆ ಮುಂಜಾನೆ 9.10 ಗಂಟೆಗೆ ಶಾರದಾ ಮಾತೆಯ ವಿಗ್ರಹ ವಿಸರ್ಜನೆಯೊಂದಿಗೆ ಮಂಗಳೂರು ದಸರಾಕ್ಕೆ ಅದ್ದೂರಿ ತೆರೆಬಿದ್ದಿತು.ಈ ಸಂದರ್ಭ ಲಕ್ಷಾಂತರ ಮಂದಿ ಮೆರವಣಿಗೆಯುದ್ದಕ್ಕೂ ಸಾಗಿ ದಸರಾ ಮೆರವಣಿಗೆಗೆ ಸಾಕ್ಷಿಯಾದರು.ಹಿಂದೆಲ್ಲ ದಸರಾ ಅಂದ್ರೆ ಮೈಸೂರು ಮಾತ್ರ ಇತ್ತು,ಆದ್ರೆ ಈಗ ಮಂಗಳೂರು ದಸರಾವೂ ಅಷ್ಟೇ ಅದ್ದೂರಿಯಾಗಿ ನಡೆಯುತ್ತೆ.ಇದನ್ನು ನೋಡೋದೇ ಕಣ್ಣಿಗೆ ಹಬ್ಬ ಎಂದು ಜನ ಖುಷಿಪಟ್ಟರು

ಚಿತ್ರಕೃಪೆ : ಸ್ಪಾಟ್​ಲೈಟ್​ ಪ್ರೊಡಕ್ಷನ್ಸ್​​

ದಸರಾ ಮೆರವಣಿಗೆ ನಿನ್ನೆ ಸಂಜೆಯಿಂದ ಇಂದು ಮುಂಜಾನೆಯವರೆಗೆ ನಿರಂತರ 16 ಗಂಟೆಗಳ ಕಾಲ‌ ಸಾಗಿ ಬಂದು ಕ್ಷೇತ್ರಕ್ಕೆ ತಲುಪಿದೆ.ಬಳಿಕ ಕ್ಷೇತ್ರದ ಪುಷ್ಕರಣಿಯಲ್ಲಿ ಗಣಪತಿ, ಆದಿಶಕ್ತಿ, ನವದುರ್ಗೆಯರ ಮಣ್ಣಿನ ವಿಗ್ರಹಗಳನ್ನು ವಿಸರ್ಜಿಸಿದ ಬಳಿಕ ಬೆಳಿಗ್ಗೆ 9.10ಕ್ಕೆ ಶಾರದಾ ಮಾತೆಯ ಜಲಸ್ತಂಭನ‌ ನಡೆಯಿತು.ಈ ಮೂಲಕ‌ ಈ ಬಾರಿಯ ದಸರಾ ಮಹೋತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ.ಇಂತಹ ಅದ್ಬುತ ಕ್ಷಣಗಳಿಗೆ ದೇಶ ವಿದೇಶದಿಂದ ಬಂದ ಲಕ್ಷಾಂತರ ಮಂದಿ‌ ಸಾಕ್ಷಿಯಾದರು.

ಇದನ್ನು ಓದಿ : Bharat Jodo Yatra :ಎರಡು ದಿನಗಳ ವಿರಾಮದ ಬಳಿಕ ಮತ್ತೆ ಆರಂಭಗೊಂಡ ಭಾರತ್​ ಜೋಡೋ ಯಾತ್ರೆ : ರಾಹುಲ್​ ಗಾಂಧಿಗೆ ಸೋನಿಯಾ ಸಾಥ್​​

ಇದನ್ನೂ ಓದಿ : Kiccha Sudeep : “ಹೊಂಬಾಳೆ ಫಿಲ್ಮ್ಸ್‌” ನಿರ್ಮಾಣದಲ್ಲಿ ಸುದೀಪ್ ಸಿನಿಮಾ: ಕಾರ್ತೀಕ್ ಕೊಟ್ರು ಕ್ಲೂ

Mangaluru Dussehra celebrations end

Comments are closed.