ಭಾನುವಾರ, ಏಪ್ರಿಲ್ 27, 2025
HomeCinemaPuneeth Birthday : ನವಜಾತ ಶಿಶುಗಳಿಗೆ ಪುನೀತ್ ಹೆಸರು : ವಿಭಿನ್ನವಾಗಿ ನಗರದಲ್ಲಿ ಅಪ್ಪು ಬರ್ತಡೇ...

Puneeth Birthday : ನವಜಾತ ಶಿಶುಗಳಿಗೆ ಪುನೀತ್ ಹೆಸರು : ವಿಭಿನ್ನವಾಗಿ ನಗರದಲ್ಲಿ ಅಪ್ಪು ಬರ್ತಡೇ ಆಚರಣೆ

- Advertisement -

ಕೇವಲ‌ ನಟನೆ ಮಾತ್ರವಲ್ಲ ಮನುಷ್ಯತ್ವದಿಂದಲೂ ಸ್ಟಾರ್ ಎನ್ನಿಸಿಕೊಂಡವರು ನಟ ಪುನೀತ್ ರಾಜ್ ಕುಮಾರ್. ಸಮಾಜಸೇವೆ,ಬಡವರಿಗೆ ಆರ್ಥೀಕ ಸಬಲತೆ ಸೇರಿದಂತೆ ನಾನಾ ಕಾರಣಕ್ಕೆ ಮಾದರಿ ಎಬ್ಬಿಸಿದ ನಟ ನಿಧನದ ಬಳಿಕವೂ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಹೀಗಾಗಿ ಅಪ್ಪು ಜನ್ಮದಿನವನ್ನು (Puneeth Birthday) ಅಭಿಮಾನಿಗಳು ವಿಭಿನ್ನವಾಗಿ, ಸ್ಮರಣೀಯವಾಗಿ ಆಚರಿಸಿದ್ದಾರೆ.‌ಮಾತ್ರವಲ್ಲ ಐವರು ಮಕ್ಕಳು ಪುನೀತ್ ಹೆಸರನ್ನು ನಾಮಕರಣ ಮಾಡಿ ಸಂಭ್ರಮಿಸಿದ್ದಾರೆ.

ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Puneeth Birthday) ಹುಟ್ಟುಹಬ್ಬವಿದೆ. ಆದರೆ ರಾಜ್ಯದಲ್ಲಿ ಇಂದಿನಿಂದಲೇ ಸಂಭ್ರಮಾಚರಣೆ ಕಳೆಗಟ್ಟಿದೆ‌. ಪುಟ್ಟ ಪುಟ್ಟ ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅಪ್ಪು ನೆನಪಿಗಾಗಿ ಈಗ ಐವರು ಪುಟ್ಟ ಪುಟ್ಟ ಕಂದಮ್ಮಗಳು ಅದರಲ್ಲೂ ನವಜಾತ ಶಿಶುಗಳಿಗೆ ಪುನೀತ್ ಹೆಸರು ನಾಮಕರಣ ಮಾಡಲಾಗಿದೆ. ಭಾರತಿ ನಗರ ನಾಗರೀಕರ ವೇದಿಕೆ ಇಂತಹದೊಂದು ವಿಭಿನ್ನ ಆಚರಣೆಯೊಂದಿಗೆ ಪುನೀತ್ ಬರ್ತಡೇ ಸೆಲಿಬ್ರೇಟ್ ಮಾಡಿ ಅಗಲಿದೆ ಚೇತನಕ್ಕೆ ಗೌರವ ಸಲ್ಲಿಸಿದೆ.

ಸರ್ವಜ್ಞ ನಗರದಲ್ಲಿನ ಕಾಕ್ಸ್‌ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ಜನಿಸಿದ ಐದು ನವಜಾತ ಶಿಶುಗಳಿಗೆ ಪುನೀತ್ ಹೆಸರು ನಾಮಕರಣ ಮಾಡಲಾಗಿದೆ. 5 ಗಂಡು ಮಕ್ಕಳಿಗೆ ಪುನೀತ್ ರಾಜ್‍ (Punit Rajkumar ) ಕುಮಾರ್ ಹೆಸರು ನಾಮಕರಣ ಮಾಡಲಾಗಿದ್ದು ಪೋಷಕರು ತಮ್ಮ ಮಗನಿಗೆ ಪವರ್ ಸ್ಟಾರ್ ಹೆಸರಿಟ್ಟು ಸಂಭ್ರಮಿಸಿದ್ದಾರೆ. ಈ ಸಮಾರಂಭದಲ್ಲಿ ಪುನೀತ್ ರಾಜ್‍ಕುಮಾರ್ ಸೋದರಿ ಪೂರ್ಣಿಮಾ, ಹಿರಿಯನಟಿ ತಾರಾ‌ ಅನುರಾಧ ಹಾಗು ಸ್ಥಳೀಯ ಮುಖಂಡ ರವಿ ಪಾಲ್ಗೊಂಡಿದ್ದಾರೆ.

ಇನ್ನು ಅಪ್ಪು ಇನ್ನಿಲ್ಲ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಅಭಿಮಾನಿಗಳು ಅಪ್ಪು ತಮ್ಮೊಂದಿಗೆ ಇದ್ದಾರೆ ಎಂದೇ ನಂಬುತ್ತಿದ್ದಾರೆ. ಅದಕ್ಕಾಗಿ ಜೇಮ್ಸ್ ಸಿನಿಮಾವನ್ನು ಪುನೀತ್ ರಾಜ್ ಕುಮಾರ್ ಫ್ಯಾನ್ಸ್ ಜೊತೆ ನೋಡಲು ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ಅಭಿಮಾನಿಗಳು ಅಪ್ಪು ಗೆ ಟಿಕೆಟ್ ಬುಕ್ ಮಾಡ್ತಿದ್ದಾರೆ. ವೀರೇಶ್, ವೀರಭದ್ರೇಶ್ವರ, ರಾಕ್ ಲೈ‌ನ್ ಚಿತ್ರಮಂದಿರಗಳಲ್ಲಿ A ರೋ ನ 17 ಸೀಟ್ ಬುಕ್17 ನೇ ಸೀಟ್ ಖಾಲಿ ಬಿಡೋ ಮೂಲಕ ಅಪ್ಪು ನಮ್ಮ ಜೊತೆ ಭಾವನಾತ್ಮಕವಾಗಿ ಕೂತು ಸಿನಿಮಾ ನೋಡ್ತಾರೆ ಅಂತಿರೋ ಫ್ಯಾನ್ಸ್ ಅಪ್ಪುಗೆ ವಿಶಿಷ್ಟವಾಗಿ ಗೌರವ ಸಲ್ಲಿಸುತ್ತಿದ್ದಾರೆ.

ಇದಲ್ಲದೇ ಪುನೀತ್ (Punit Rajkumar ) ಹುಟ್ಟುಹಬ್ಬಕ್ಕೆ ಒಂದು ದಿನ ಬಾಕಿ ಇರುವಾಗಲೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ನವರಂಗ್ ಚಿತ್ರಮಂದಿರದ ಬಳಿ ಸಮಾಜ ಸೇವೆ ಮೂಲಕ ಅಪ್ಪು ಬರ್ತ್ಡೇ ಸೆಲೆಬ್ರೇಶನ್ ಮಾಡಲಾಗ್ತಿದೆ. ಆಟೋ ಡ್ರೈವರ್ ಗಳಿಗೆ ಯೂನಿಫಾರ್ಮ್, ಮಹಿಳೆಯರಿಗೆ ಸೀರೆ ವಿತರಣೆ ಮಾಡಿ ಅಪ್ಪು‌ಸ್ಮರಣೆ ನಡೆದಿದೆ. ಕಾರ್ಯಕ್ರಮದಲ್ಲಿ ಸಚಿವ ಗೋಪಾಲಯ್ಯ ಪಾಲ್ಗೊಂಡಿದ್ದಾರೆ. ಅಪ್ಪು ಹುಟ್ಟಿದ ಹಬ್ಬದ ಹಿನ್ನೆಲೆ  46 ನಕ್ಷತ್ರಗಳ ಅಪರೂಪದ ಝಲಕ್ ಕೂಡ ಹಾಕಲಾಗಿದ್ದು, ಅಪ್ಪು ಹೆಸರಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಅರೋಗ್ಯ ತಪಾಸಣೆ ಶಿಬಿರ ಕೂಡ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ಪವರ್ ಸ್ಟಾರ್ ಇಲ್ಲದ ಮೊದಲ ಹುಟ್ಟುಹಬ್ಬವನ್ನು ಅಭಿಮಾನಿಗಳು ಇನ್ನಿಲ್ಲದ ಶೃದ್ಧೆಯಿಂದ ಆಚರಿಸಿ ರಾಜಕುಮಾರ್ ನಿಗೆ ನಮಿಸುತ್ತಿದ್ದಾರೆ.

ಇದನ್ನೂ ಓದಿ : ರಾಕಿಂಗ್ ಸ್ಟಾರ್ ಯಶ್ ಗೆ ಎದುರಾಳಿಯಾದ ನಟ ವಿಜಯ್ : ಕೆಜಿಎಫ್-2 ಗೆ ಟಕ್ಕರ್ ಕೊಡುತ್ತಾ ಬೀಸ್ಟ್

ಇದನ್ನೂ ಓದಿ : RRR ಸಿನಿಮಾಗಿರೋ ಬೆಲೆ ಪುನೀತ್ ಗಿಲ್ವಾ ? ಸರಕಾರದ ವಿರುದ್ದ ಅಪ್ಪು ಫ್ಯಾನ್ಸ್‌ ಗರಂ

( Puneeth Birthday : Punith Rajkumar name for newborns Baby’s)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular