Indira Canteen : ಇಂದಿರಾ ಕ್ಯಾಂಟೀನ್ ಗೆ ಅನುದಾನ ಕಟ್ : ಬಡವರ ಊಟಕ್ಕೂ ಕಲ್ಲು ಹಾಕಿದ ಸರ್ಕಾರ

ಬೆಂಗಳೂರು : ಒಂದು ಕಾಲದಲ್ಲಿ ಬೆಂಗಳೂರಿನ ಬಡವರ ಹಸಿವು ನೀಗಿಸುತ್ತಿದ್ದ ಇಂದಿರಾ ಕ್ಯಾಂಟೀನ್ (Indira Canteen) ಈಗ ಸಂಕಷ್ಟದ ಸ್ಥಿತಿಯಲ್ಲಿದೆ. ಈ ಕ್ಯಾಂಟೀನ್ ಗೆ ಸರ್ಕಾರ ನೀಡಬೇಕಿದ್ದ ಅನುದಾನವನ್ನು ನಿಲ್ಲಿಸಿದ್ದು, ಇಂದಿರಾ ಕ್ಯಾಂಟೀನ್ ಕೂಡ ಬಡವಾಗಿದೆ. ಅನುದಾನದ ಕೊರತೆಯಿಂದ ಆಹಾರದ ಗುಣಮಟ್ಟವೂ ತಗ್ಗಿದ್ದು ಜನರ ಭೇಟಿ ಪ್ರಮಾಣವೂ ಕುಗ್ಗಲಾರಂಭಿಸಿದೆ.

ಸದಾಕಾಲ ಅನ್ನದ ಮಹತ್ವವನ್ನು ನಾನು ಅರಿತಿದ್ದೇನೆ ಅದಕ್ಕಾಗಿ ಕಾರ್ಮಿಕರಿಗೆ ಅನ್ನ ಸಿಗಬೇಕೆಂದು ಯೋಜನೆಗಳನ್ನು ರೂಪಿಸುತ್ತೇನೆ ಎನ್ನುವ ಮಾಜಿಸಿಎಂ ಸಿದ್ಧರಾಮಯ್ಯ ತಾವು ಸಿಎಂ ಆಗಿದ್ದಾಗ ಘೋಷಿಸಿದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್. ಬಡವರು ಹಾಗೂ ಕಾರ್ಮಿಕರಿಗಾಗಿ ಸಿದ್ಧರಾಮಯ್ಯ ರಿಯಾಯ್ತಿ ದರದಲ್ಲಿ ಊಟ ಹಾಗೂ ತಿಂಡಿ ನೀಡುವ ಉದ್ದೇಶದಿಂದ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದರು. ಸ್ವತಃ ರಾಹುಲ್ ಗಾಂಧಿ ಕೂಡಾ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ನಲ್ಲಿ ಊಟ ಸವಿದು ಸಂಭ್ರಮಿಸಿದ್ದರು.

ಆದರೆ ಈಗ ಇದೇ ಇಂದಿರಾ ಕ್ಯಾಂಟೀನ್ (Indira Canteen) ಅನುದಾನ ಕೊರತೆಯಿಂದ ನರಳುತ್ತಿದ್ದು, ಇಂದಿರಾ ಕ್ಯಾಂಟೀನ್ ಊಟ ತಿಂಡಿಯೂ ರುಚಿ ಹಾಗೂ ಗುಣಮಟ್ಟ ಕಳೆದು ಕೊಂಡಿದೆ ಎಂಬ ಆರೋಪ ಕೇಳಿಬಂದಿದೆ. ಮೊದಲು ಇಂದಿರಾ ಕ್ಯಾಂಟೀನ್ ಗೆ ಪ್ರತಿನಿತ್ಯ ಸಾವಿರಾರು ಜನರು ಭೇಟಿ ನೀಡಿ ಊಟ ತಿಂಡಿ ಸವಿಯುತ್ತಿದ್ಧರು. ಆದರೆ ಕೊರೋನಾ ಬಳಿಕ ಈ ಸಂಖ್ಯೆ ನೂರಕ್ಕೆ ಇಳಿಮುಖವಾಗಿದ್ದು, ಗುಣಮಟ್ಟದ ಕೊರತೆಯೇ ಕಾರಣ ಎನ್ನಲಾಗುತ್ತಿದೆ.

ಇನ್ನೊಂದೆಡೆ ಇಂದಿರಾ ಕ್ಯಾಂಟೀನ್ ಮಾಲೀಕರ ಸಂಕಷ್ಟವೂ ದೊಡ್ಡದಿದ್ದು, ಇಂದಿರಾ ಕ್ಯಾಂಟೀನ್ ಗೆ ಸರ್ಕಾರ ಅನುದಾನ ನಿಲ್ಲಿಸಿದೆ. ಹೀಗಾಗಿ ಈಗ ಬೆಂಗಳೂರಿನ 174 ಇಂದಿರಾ ಕ್ಯಾಂಟೀನ್ (Indira Canteen) ಹಾಗೂ 24 ಮೊಬೈಲ್ ಕ್ಯಾಂಟೀನ್ ಗಳ ಹೊಣೆಗಾರಿಕೆ ಬಿಬಿಎಂಪಿ ಮೇಲೆ ಬಿದ್ದಂತಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ರಾಜ್ಯದಾದ್ಯಂತವೂ ಇಂದಿರಾ ಕ್ಯಾಂಟಿನ್ ಗೆ ಸರ್ಕಾರ ಕೋಟ್ಯಾಂತರ ರೂಪಾಯಿ ಅನುದಾನ ಬಾಕಿ ಉಳಿಸಿಕೊಂಡಿದೆ. ಬೆಂಗಳೂರು ಒಂದರಲ್ಲೇ ಇಂದಿರಾ ಕ್ಯಾಂಟೀನ್ (Indira Canteen) ಗೆ ಒಟ್ಟು 70 ಕೋಟಿ ರೂಪಾಯಿ ಅನುದಾನ ಬಾಕಿ ಇದೆ. ಈ ಮಧ್ಯೆ ನಗರದಲ್ಲಿರೋ ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಬಿಬಿಎಂಪಿ ಮಾರ್ಷಲ್‌ಗಳನ್ನು ನೇಮಕ ಮಾಡಿದ್ದಾರೆ. ಆದರೆ ಈಗ ಇಂದಿರಾ ಕ್ಯಾಂಟೀನ್ ಗೆ ಅಗತ್ಯ ಅನುದಾನ ನೀಡೋದು ಬಿಬಿಎಂಪಿ ಪಾಲಿಗೂ ತಲೆನೋವಾಗಿ ಪರಿಣಮಿಸಿದೆ .

ಈ ಹಿಂದೆಯೇ ಮಾಜಿ ಸಿಎಂ ಸಿದ್ಧರಾಮಯ್ಯನವರು ಬಡವರಿಗಾಗಿ ತಂದ ಈ ಯೋಜನೆ ಯಾವ ಕಾರಣಕ್ಕೂ ನಿಲ್ಲಬಾರದು ಎಂದು ಒತ್ತಾಯಿಸಿ ಸಿಎಂಗೆ ಪತ್ರ ಬರೆದಿದ್ದರು. ಹೀಗಿದ್ದರೂ ಈಗ ಬಡವರ ಹಸಿವು ನೀಗಿಸುತ್ತಿದ್ದ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳು (Indira Canteen) ಬಾಗಿಲು ಮುಚ್ಚುವ ಸ್ಥಿತಿಯಲ್ಲಿದೆ.

ಇದನ್ನೂ ಓದಿ : ಬಿಎಂಟಿಸಿ ಪ್ರಯಾಣಕ್ಕೆ ಪಾಸ್ ಬೇಡ, ಟಿಕೇಟ್ ಬೇಡ : ಮೊಬೈಲ್ ಜೊತೆಗಿದ್ದರೆ ಸಾಕು

ಇದನ್ನೂ ಓದಿ : 245 ದಿನ 29 ರಾಜ್ಯ, 24 ಸಾವಿರ ಕಿ.ಮೀ : ಲಿಮ್ಕಾ ದಾಖಲೆ ಸೇರಿದೆ ಯುವಕರ ಸೈಕಲ್‌ ಜಾಥಾ

( government cut the grant for Indira Canteen meals of poor people)

Comments are closed.