ಭಾನುವಾರ, ಏಪ್ರಿಲ್ 27, 2025
HomeCinemaJames movie Release date : ಬರ್ತಡೇಗೆ ಬರ್ತಾರೆ ಪುನೀತ್ ರಾಜ್ ಕುಮಾರ್ : ಜೇಮ್ಸ್...

James movie Release date : ಬರ್ತಡೇಗೆ ಬರ್ತಾರೆ ಪುನೀತ್ ರಾಜ್ ಕುಮಾರ್ : ಜೇಮ್ಸ್ ರಿಲೀಸ್ ಗೆ ಕೊನೆಗೂ ಫಿಕ್ಸ್ ಅಯ್ತು ಮುಹೂರ್ತ

- Advertisement -

ಗಣರಾಜ್ಯೋತ್ಸವದ ಸಂಭ್ರಮದಲ್ಲಿದ್ದ ಕರುನಾಡಿಗರಿಗೆ ಜೇಮ್ಸ್ ಚಿತ್ರತಂಡ (James movie Release date) ಭರ್ಜರಿ ಗಿಫ್ಟ್ ನೀಡಿದೆ. ಕನ್ನಡದ ಮನೆಮಗ,ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರವಾಗಿರೋ ಜೇಮ್ಸ್ ನಲ್ಲಿ ಪುನೀತ್ ವಿಭಿನ್ನ ರೋಲ್ ನ ಪೋಸ್ಟರ್ ಇಂದು ರಿಲೀಸ್ ಆಗಿದ್ದು ಪುನೀತ್ ಕಳೆದುಕೊಂಡ ನೋವಿನ ನಡುವೆಯೂ ಅಭಿಮಾನಿಗಳು ಅಪ್ಪು ಹೊಸ ಅವತಾರಕ್ಕೆ ಮನಸೋತಿದ್ದಾರೆ. ಪೋಸ್ಟರ್ ರಿಲೀಸ್ ಜೊತೆಗೆ ಸಿನಿಮಾ ರಿಲೀಸ್ ಯಾವಾಗ ಎಂಬ ಅಭಿಮಾನಿಗಳ ಪ್ರಶ್ನೆಗೂ ಉತ್ತರ ಸಿಕ್ಕಿದ್ದು, ಸಿನಿಮಾವನ್ನು ಬಹುತೇಕ ಅಪ್ಪು ಹುಟ್ಟುಹಬ್ಬದ ಗಿಫ್ಟ್ ರೂಪದಲ್ಲಿ ಅಭಿಮಾನಿಗಳ ಎದುರು ತರೋಕೆ ನಿರ್ಮಾಪಕರು ಸಿದ್ಧವಾಗಿದ್ದಾರೆ.

ಜೇಮ್ಸ್ ಸಿನಿಮಾದ ಅಪ್ಪು ಗೆಟಪ್ ಪೋಸ್ಟರ್ ರಿಲೀಸ್ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ವೇಗವಾಗಿ ನಡೆದಿದೆ. ಪುನೀತ್ ಹುಟ್ಟಿದ ಹಬ್ಬವಾಗಿರೋ ಮಾರ್ಚ್17 ರಂದು ಸಿನಿಮಾವನ್ನು ರಿಲೀಸ್ ಮಾಡಲು ನಾವು ಮಾನಸಿಕವಾಗಿ ಸಿದ್ಧವಾಗಿದ್ದೇವೆ ಎಂದಿದ್ದಾರೆ.
ಅಭಿಮಾನಿಗಳಿಗಾಗಿ ಈ ಸಿನಿಮಾವನ್ನು ಅಪ್ಪು ಧ್ವನಿಯಲ್ಲೇ ತೆರೆಗೆ ತರೋದು ನಮ್ಮ ಆಶಯ. ಹೀಗಾಗಿ ತಾಂತ್ರಿಕವಾಗಿ ಅತ್ಯಂತ ಮೇಲ್ಹಂತದವರೆಗೂ ಪ್ರಯತ್ನ ನಡೆಸಿದ್ದೇವೆ. ಈಗಾಗಲೇ ಚೈನೈ ಸೇರಿದಂತೆ ಹಲವೆಡೆ ತಂತ್ರಜ್ಞರು ಈ ಪ್ರಯತ್ನದಲ್ಲಿದ್ದಾರೆ.

ಶೂಟಿಂಗ್ ವೇಳೆ ಇರೋ ಪುನೀತ್ ಅಡಿಯೋ ಬಳಸಿಕೊಳ್ಳೋ ಪ್ರಯತ್ನ ನಮ್ಮದು. ಅದಾಗದೇ ಇದ್ದರೇ ಮುಂದಿನ ಸಾಧ್ಯತೆ ಆಯ್ಕೆ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ. ಇನ್ನು ಸಿನಿಮಾವನ್ನು ಅಪ್ಪು ಬರ್ತಡೇಗೆ ರಿಲೀಸ್ ಮಾಡಬೇಕೆಂಬ ತೀರ್ಮಾನ ಈ ಕೈಗೊಂಡಿದ್ದಲ್ಲ. ಪುನೀತ್ ಇದ್ದಾಗಲೇ ಸಿನಿಮಾವನ್ನು ಅವರ ಹುಟ್ಟುಹಬ್ಬಕ್ಕೆ ತರುವ ಪ್ಲ್ಯಾನ್ ಮಾಡಿದ್ದೇವು. ಹೀಗಾಗಿ ದೇವರ ದಯದಿಂದ ಕೊರೋನಾ ಪ್ರಭಾವ ಕಡಿಮೆಯಾದರೇ ಮಾರ್ಚ್17 ರಂದು ಪುನೀತ್ ಸಿನಿಮಾವನ್ನು ನೀವು ಕಣ್ತುಂಬಿಕೊಳ್ಳಬಹುದು ಎಂದಿದ್ದಾರೆ.

ಇನ್ನೊಂದೆಡೆ ನಿರ್ಮಾಪಕ ಕಿಶೋರ್, ಥಿಯೇಟರ್ ಗಳಲ್ಲಿ 50 ರಷ್ಟು ಅವಕಾಶ ನೀಡಿದರೂ ನಾವು ರಿಲೀಸ್ ಗೆ ಸಿದ್ಧರಿದ್ದೇವೆ. ಆದರೆ ವಿತರಕರು 100 ಕ್ಕೆ 100 ಅವಕಾಶವಿದ್ದಾಗಲೇ ಜನರನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಇನ್ನು 50 ರಷ್ಟಿದ್ದಾಗ ಸಿನಿಮಾ ರಿಲೀಸ್ ಮಾಡಿದರೇ ಕಷ್ಟ ಎನ್ನುತ್ತಿದ್ದಾರೆ. ಅದೊಂದು ವಿಚಾರಕ್ಕೆ ಯೋಚನೆ ಮಾಡುತ್ತಿದ್ದೇವೆ. ಒಂದೊಮ್ಮೆ ಅಲ್ಲಿಯವರೆಗೆ ನಿಯಮಗಳು ಸಡಿಲಗೊಂಡು ನೂರಕ್ಕೆ ನೂರು ಅವಕಾಶ ಸಿಕ್ಕರೇ ನಮಗೆ ಸಹಾಯವಾಗಲಿದೆ ಎಂದಿದ್ದಾರೆ. ಒಟ್ಟಿನಲ್ಲಿ ಪುನೀತ್ ಇಲ್ಲದೇ ಅವರ ನೆನಪಿನೊಂದಿಗೆ ಬರ್ತಡೇ ಆವರಿಸಬೇಕಾದ ದುಃಖದಲ್ಲಿರೋ ಅಭಿಮಾನಿಗಳಿಗೆ ಜೇಮ್ಸ್ ಬರ್ತಡೇ ಗಿಫ್ಟ್ ರೂಪದಲ್ಲಿ ತೆರೆಗೆ ಬರೋದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ : ಶಿವಣ್ಣ ಅಭಿಮಾನಿಗಳಿಗೆ ಸಿಹಿಸುದ್ದಿ: ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಡಾ.ಶಿವರಾಜ್ ಕುಮಾರ್

ಇದನ್ನೂ ಓದಿ : ಸೋಲ್ಡ್ಜರ್ ಅವತಾರದಲ್ಲಿ ಪವರ್ : ಪುನೀತ್ ರಾಜ್ ಕುಮಾರ್ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ

( Puneeth Raj Kumar entry in birthday, finally James movie Release date fix)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular