ಭಾನುವಾರ, ಜೂನ್ 15, 2025
HomeCinemaPuneeth Rajkumar army officer : ಸೋಲ್ಡ್ಜರ್ ಅವತಾರದಲ್ಲಿ ಪವರ್ : ಪುನೀತ್ ರಾಜ್ ಕುಮಾರ್...

Puneeth Rajkumar army officer : ಸೋಲ್ಡ್ಜರ್ ಅವತಾರದಲ್ಲಿ ಪವರ್ : ಪುನೀತ್ ರಾಜ್ ಕುಮಾರ್ ಹೊಸ ಲುಕ್ ಗೆ ಅಭಿಮಾನಿಗಳು ಫಿದಾ

- Advertisement -

ಕಳೆದ ಮೂರು ತಿಂಗಳಿನಿಂದ ಶೋಕಸಾಗರದಲ್ಲೇ ಇದ್ದ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಗಣರಾಜ್ಯೋತ್ಸವ ಪುಟ್ಟ ಸಮಾಧಾನವೊಂದನ್ನು ತಂದಿದ್ದು, ಪುನೀತ್ ಕೊನೆಯ ಸಿನಿಮಾ ಜೇಮ್ಸ್ ನ ವಿಶೇಷ ಪೋಸ್ಟರ್ ವೊಂದನ್ನು ಚಿತ್ರತಂಡ ರಿಲೀಸ್ ಮಾಡಿದೆ. ಪ್ಯಾರಾಮಿಲಿಟರಿ ಆಫೀಸರ್ ಪಾತ್ರದಲ್ಲಿ ಪುನೀತ್ ರಾಜ್ ಕುಮಾರ್ ಸ್ಟೈಲಿಶ್ (Puneeth Rajkumar army officer) ಆಗಿ ಕಾಣಿಸಿಕೊಂಡಿದ್ದು, ಸಲಾಂ‌ ಸೋಲ್ಜ್ಡರ್ ದೇಶಕ್ಕೆ ನೀನೆ ಪವರ್ ಎಂಬ ಸ್ಲೋಗ‌ನ್ ಅಡಿಯಲ್ಲಿ ಪೋಸ್ಟರ್ ರಿಲೀಸ್ ಆಗಿದೆ.

ಜೇಮ್ಸ್ ಸಿನಿಮಾದ ಈ ವಿಶೇಷ ಪೋಸ್ಟರ್ ನ್ನು ಪುನೀತ್ ಸಮಾಧಿ ಬಳಿಯೇ ರಿಲೀಸ್ ಮಾಡಲಾಗಿದೆ. ಈ ವೇಳೆ ಚಿತ್ರತಂಡ ಹಾಗೂ ಅಭಿಮಾನಿಗಳು ಪಾಲ್ಗೊಂಡಿದ್ದರು. ಪುನೀತ್ ಜೇಮ್ಸ್ ಸಿನಿಮಾದ ಪೋಸ್ಟರ್ ನ್ನು ಅಶ್ವಿನಿ ಪುನೀತ್ ರಾಜಕುಮಾರ್ ಕೂಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಈ ಪೋಸ್ಟರ್ ನೋಡಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಜೇಮ್ಸ್‌ ಸಿನಿಮಾ ಕನ್ನಡ,ಹಿಂದಿ,ಮಲೆಯಾಳಂ,ತಮಿಳು,ತೆಲುಗು ಭಾಷೆಗಳಲ್ಲಿ ತೆರೆ ಕಾಣಲಿದೆ.ಪುನೀತ್ ಖಡಕ್ ಆರ್ಮಿ ಆಫೀಸರ್ ಪಾತ್ರದಲ್ಲಿ ಗನ್ ಹಿಡಿದುಕೊಂಡು ಪೋಸ್ ಕೊಟ್ಟಿದ್ದು ಇದೇ ಮೊದಲ ಬಾರಿಗೆ ಇಂತಹದೊಂದು ವಿಭಿನ್ನ ಪಾತ್ರದಲ್ಲಿ ಪುನೀತ್ ಮಿಂಚಿದ್ದಾರೆ. ಜೇಮ್ಸ್ ಚಿತ್ರದ ನಿರ್ದೇಶಕ ಈ ಹಿಂದೆಯೇ ಗಣರಾಜ್ಯೋತ್ಸವದಂದು ವಿಶೇಷ ಪೋಸ್ಟರ್ ರಿಲೀಸ್ ಮಾಡೋದಾಗಿ ಹೇಳಿಕೊಂಡಿದ್ದರು. ಹೇಳಿದಂತೆ ಚಿತ್ರತಂಡ ಹೊಸ ಪೋಸ್ಟರ್ ರೀಲಿಸ್ ಮಾಡಿದೆ.

ಶಿವರಾಜ್ ಕುಮಾರ್, ರಾಘವೇಂದ್ರ್ ರಾಜಕುಮಾರ್ ಸೇರಿದಂತೆ ಹಲವು ತಂತ್ರಜ್ಞರು, ಸೆಲೆಬ್ರೆಟಿಗಳು ಈ ಪೋಸ್ಟರ್ ನ್ನು ಶೇರ್ ಮಾಡಿಕೊಂಡಿದ್ದಾರೆ. ಜೇಮ್ಸ್ ಸಿನಿಮಾದ ಇನ್ನೊಂದು ವಿಶೇಷತೆಯೆಂದರೇ ಅಪ್ಪು ಹಾಗೂ ದೊಡ್ಮನೆ ಆಸೆಯಂತೆ ಶಿವಣ್ಣ ಹಾಗೂ ರಾಘಣ್ಣ ಈ ಸಿನಿಮಾದಲ್ಲಿ ಪುನೀತ್ ಜೊತೆ ನಟಿಸಿದ್ದಾರೆ. ಅಣ್ಣಾವ್ರ ಮಕ್ಕಳನ್ನು ಒಂದೇ ಸ್ಕ್ರಿನ್ ನಲ್ಲಿ‌ನೋಡುವ ಅಭಿಮಾನಿಗಳ ಆಸೆ ಈ ಸಿನಿಮಾದಿಂದ ಈಡೇರಲಿದೆ. ಈ ಸಿನಿಮಾವನ್ನು ಅಪ್ಪು ಹುಟ್ಟುಹಬ್ಬವಾದ ಮಾರ್ಚ್ 17 ರಂದು ರಿಲೀಸ್ ಮಾಡೋ ಪ್ಲ್ಯಾನ್ ನಲ್ಲಿದೆ ಚಿತ್ರತಂಡ.

ಚೇತನ್ ಕುಮಾರ್ ನಿರ್ದೇಶನದ ಈ ಸಿನಿಮಾದಲ್ಲಿ ಪುನೀತ್ ಗೆ ನಾಯಕಿಯಾಗಿ ನಟಿ ಪ್ರಿಯಾ ಅನಂದ್ ಕಾಣಿಸಿಕೊಂಡಿದ್ದು, ವಿಲನ್ ರೋಲ್ ನಲ್ಲಿ ಶರತ್ ಕುಮಾರ್ ನಟಿಸಿದ್ದಾರೆ. ಕಿಶೋರ್ ಪತ್ತಿಕೊಂಡ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಶ್ರೀಕಾಂತ್, ಆದಿತ್ಯ ಮೆನನ್,ಅನುಪ್ರಭಾಕರ್ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾ ಕ್ಕೆ ಪುನೀತ್ ಶೂಟಿಂಗ್ ವೇಳೆ ಮಾತನಾಡಿದ ಆಡಿಯೋ ಬಳಸಿಕೊಳ್ಳುವ ಪ್ರಸ್ತಾಪವಿದ್ದು ಒಂದೊಮ್ಮೆ ಇದು ಸಾಧ್ಯವಾಗದೇ ಇದ್ದರೇ ಶಿವರಾಜ್ ಕುಮಾರ್ ಕೈಯಲ್ಲಿ ಡಬ್ಬಿಂಗ್ ಮಾಡಿಸೋ ಪ್ಲ್ಯಾನ್ ನಲ್ಲಿದೆ ಚಿತ್ರತಂಡ.

ಇದನ್ನೂ ಓದಿ : ಒಂಟಿಯಾಗಿ ಹನಿಮೂನ್ ಗೆ ಹಾರಿದ್ರಾ ಕತ್ರಿನಾ ! ವೈರಲ್ ಪೋಟೋ ಹೇಳ್ತಿರೋದೇನು ?

ಇದನ್ನೂ ಓದಿ : ಶಿವಣ್ಣ ಅಭಿಮಾನಿಗಳಿಗೆ ಸಿಹಿಸುದ್ದಿ: ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಡಾ.ಶಿವರಾಜ್ ಕುಮಾರ್

( Puneeth Rajkumar army officer look in last film James, release poster)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular