Indian fishermen : ಶ್ರೀಲಂಕಾ ಜೈಲುಗಳಲಿದ್ದ ಎಲ್ಲಾ ಭಾರತೀಯ ಮೀನುಗಾರರಿಗೆ ಬಿಡುಗಡೆ ಭಾಗ್ಯ

Indian fishermen :ದ್ವೀಪ ರಾಷ್ಟ್ರದ ಪ್ರಾದೇಶಿಕ ನೀರಿನಲ್ಲಿ ಮೀನುಗಾರಿಕೆ ನಡೆಸಿದ ಆರೋಪದ ಮೇಲೆ ಬಂಧಿತರಾಗಿದ್ದ 56 ಭಾರತೀಯ ಮೀನುಗಾರರು ಬಿಡುಗಡೆ ಮಾಡುವಂತೆ ಶ್ರೀಲಂಕಾದ ನ್ಯಾಯಾಲಯ ಆದೇಶವನ್ನು ನೀಡಿದೆ. ಈ ತೀರ್ಪಿನ ಬಳಿಕ ಶ್ರೀಲಂಕಾದ ಜೈಲುಗಳಲ್ಲಿ ಇದ್ದ ಎಲ್ಲಾ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದೆ.


ಉತ್ತರ ಜಾಫ್ನಾ ಪರ್ಯಾಯ ದ್ವೀಪದ ನ್ಯಾಯಾಲಯವು ಡಿಸೆಂಬರ್​ ಮಧ್ಯಭಾಗದಲ್ಲಿ ಮನ್ನಾರ್​ ದಕ್ಷಿಣ ಸಮುದ್ರದಲ್ಲಿ ಶ್ರೀಲಂಕಾ ನೌಕಾಪಡೆಯಿಂದ ಬಂಧನಕ್ಕೊಳಗಾಗಿದ್ದ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದೆ.


56 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ನ್ಯಾಯಾಲಯ ಅನುಮತಿ ನೀಡಿದೆ ಎಂದು ತಿಳಿದು ಸಂತೋಷವಾಗಿದೆ ಎಂದು ಕೊಲೊಂಬೋದಲ್ಲಿರುವ ಹೈ ಕಮಿಷನ್​ ಟ್ವಿಟರ್​ನಲ್ಲಿ ಮಾಹಿತಿ ನೀಡಿದೆ.
ಭಾರತೀಯ ಮೀನುಗಾರರ ಬಿಡುಗಡೆಯಲ್ಲಿ ಮಹತ್ವದ ಪಾತ್ರ ವಹಿಸಿದ ಹೈಕಮಿಷನರ್​ ಗೋಪಾಲ್​ ಬಾಗ್ಲೆ ಹಾಗೂ ಅವರ ತಂಡದ ಕಾರ್ಯವನ್ನು ಶ್ಲಾಘಿಸುತ್ತಿದ್ದೇವೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​ ಜೈಶಂಕರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.


ಶ್ರೀಲಂಕಾದ ಅಧಿಕಾರಿಗಳು ಹಾಗೂ ಭಾರತೀಯ ರಾಜತಾಂತ್ರಿಕ ಮೂಲಗಳು ಭಾರತೀಯ ಮೀನುಗಾರರ ಬಿಡುಗಡೆಯನ್ನು ಖಚಿತಪಡಿಸಿವೆ. ಮಂಗಳವಾರದಂದು ಶ್ರೀಲಂಕಾದಲ್ಲಿನ 56 ಮೀನುಗಾರರು ಬಿಡುಗಡೆಯಾದ ಬಳಿಕ ದ್ವೀಪ ರಾಷ್ಟ್ರದಲ್ಲಿ ದೇಶದ ಯಾವುದೇ ಮೀನುಗಾರರು ಬಾಕಿ ಉಳಿದಿಲ್ಲ ಎಂದು ತಿಳಿದುಬಂದಿದೆ.

ಭಾರತ ಹಾಗೂ ಶ್ರೀಲಂಕಾದ ಸಂಬಂಧದ ವಿಚಾರದಲ್ಲಿ ಮೀನುಗಾರರ ಬಂಧನವು ಸದಾ ಒಂದು ವಿವಾದಾತ್ಮಕ ವಿಚಾರವಾಗಿಯೇ ಉಳಿದಿದೆ. ಶ್ರೀಲಂಕಾದ ನೌಕಾಪಡೆಯ ಸಿಬ್ಬಂದಿ ಪಾಕ್​ ಜಲಸಂಧಿಯಲ್ಲಿ ಭಾರತೀಯ ಮೀನುಗಾರರ ಮೇಲೆ ಫೈರಿಂಗ್​ ನಡೆಸಿದ್ದು ಮಾತ್ರವಲ್ಲದೇ ಅವರ ದೋಣಿಗಳನ್ನೂ ವಶಪಡಿಸಿಕೊಂಡಿದ್ದರು.

ಪಾಕ್​ ಜಲಸಂಧಿಯು ಶ್ರೀಲಂಕಾದಿಂದ ತಮಿಳುನಾಡನ್ನು ಬೇರ್ಪಡಿಸುವ ಒಂದು ಕಿರಿದಾದ ಪಟ್ಟಿಯಾಗಿದ್ದು ಇದುಎರಡೂ ರಾಷ್ಟ್ರಗಳ ಪಾಲಿಗೆ ಮೀನುಗಾರಿಕೆಯ ವಿಚಾರದಲ್ಲಿ ಅತ್ಯಂತ ಶ್ರೀಮಂತ ಸ್ಥಳವಾಗಿದೆ.

ಭಾರತೀಯ ಮೀನುಗಾರರಿಂದ ವಶಪಡಿಸಿಕೊಂಡ ದೋಣಿಗಳನ್ನು ಹರಾಜು ಹಾಕುವ ದ್ವೀಪ ರಾಷ್ಟ್ರದ ನಿರ್ಧಾರದ ಬಗ್ಗೆ ತನ್ನ ಅಸಮ್ಮತಿಯನ್ನು ದಾಖಲಿಸಲು ಮತ್ತು ಶ್ರೀಲಂಕಾ ಸರ್ಕಾರದೊಂದಿಗೆ ಸಮಸ್ಯೆಯನ್ನು ಕಠಿಣ ರೀತಿಯಲ್ಲಿ ತೆಗೆದುಕೊಳ್ಳುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೇಂದ್ರವನ್ನು ಒತ್ತಾಯಿಸಿದ ದಿನವೇ ಮೀನುಗಾರರ ಬಿಡುಗಡೆಯಾಗಿದೆ. .

No more Indian fishermen in Sri Lankan jails after court orders release of last 56

ಇದನ್ನು ಓದಿ : Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು

ಇದನ್ನೂ ಓದಿ : relaxation in Karnataka : ಮೂರನೇ ಅಲೆಯಲ್ಲಿ ಜನರಿಗೆ ಕೊಂಚ ರಿಲ್ಯಾಕ್ಸ್: ಮುಂದಿನ ವಾರದಿಂದ ರದ್ದಾಗಲಿದ್ಯಾ ಟಫ್ ರೂಲ್ಸ್ ?

Comments are closed.