ಭಾನುವಾರ, ಏಪ್ರಿಲ್ 27, 2025
HomeCinemaAppu Ambulance : ಪುನೀತ್ ರಾಜ್ ಕುಮಾರ್ ನೆನಪು ಅಮರವಾಗಿಸಲು ಮುಂದಾದ ನಟ ಯಶ್ :...

Appu Ambulance : ಪುನೀತ್ ರಾಜ್ ಕುಮಾರ್ ನೆನಪು ಅಮರವಾಗಿಸಲು ಮುಂದಾದ ನಟ ಯಶ್ : ರಾಜ್ಯದ ಪ್ರತಿ ಜಿಲ್ಲೆಗೂ ಅಪ್ಪು ಅಂಬುಲೆನ್ಸ್

- Advertisement -

Appu Ambulance Yash: ಕರುನಾಡಿನ ರಾಜಕುಮಾರ್ ಪುನೀತ್ (Puneeth Rajkumar) ಅಭಿನಯದ ಕೊನೆಯ ಸಾಕ್ಷ್ಯ ಚಿತ್ರ ಗಂಧದಗುಡಿ ರಿಲೀಸ್ ಗೆ ದಿನಗಣನೆ ನಡೆದಿದೆ‌. ಈ ಮಧ್ಯೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ದೂರಿಯಾಗಿ ಗಂಧದಗುಡಿ ಫ್ರೀ ರಿಲೀಸ್ ಇವೆಂಟ್ ನಡೆದಿದೆ. ಈ ವೇದಿಕೆ ಹಾಗೂ ಕಾರ್ಯಕ್ರಮ ಅಪ್ಪು ನೆನಪನ್ನು ಚಿರಸ್ಥಾಯಿಯಾಗಿಸುವ ಪ್ರಯತ್ನ ನಡೆದಿದ್ದು, ಅಪ್ಪು ಅಭಿಮಾನಿ ನಟರ ಪ್ರೀತಿಯ ಫಲವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇನ್ಮುಂದೇ ಅಪ್ಪು ಅಂಬುಲೆನ್ಸ್ ಸಂಚರಿಸಲಿದೆ.

ಹೌದು ಪುನೀತ್ ರಾಜ್ ಕುಮಾರ್ ಜೊತೆ ಹಲವು ಚಿತ್ರದಲ್ಲಿ ನಟಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್ ಪುನೀತ್ ನೆನಪನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಅಂಬುಲೆನ್ಸ್ ಕೊಡುಗೆಯಾಗಿ ನೀಡೋ‌ ನಿರ್ಧಾರ ಮಾಡಿದ್ದರು.‌ ಮಾತ್ರವಲ್ಲ ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಅಪ್ಪು ಹೆಸರಿನಲ್ಲಿ ಅಂಬುಲೆನ್ಸ್ ಸಂಚರಿಸಲಾರಂಭಿಸಿದೆ. ಇದನ್ನು ರಾಜ್ಯದ 30 ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಿಸುವ ಕನಸು ಪ್ರಕಾಶ್ ರಾಜ್ ಗೆ ಇತ್ತಂತೆ.

ಈ ವಿಚಾರವನ್ನು ನಟ ಪ್ರಕಾಶ್ ರಾಜ್ ನಗರದಲ್ಲಿ ನಡೆದ ಪುನೀತ್ ಪರ್ವ ಫ್ರೀ ರಿಲೀಸ್ ಇವೆಂಟ್ ವೇದಿಕೆಯಲ್ಲಿ ಹಂಚಿಕೊಂಡರು. ನನಗೆ ಪುನೀತ್ ಹೆಸರನ್ನು ಶಾಶ್ವತವಾಗಿ ಉಳಿಸುವಂತ ನಿಟ್ಟಿನಲ್ಲಿ ಈ ಕೆಲಸ ಸೂಕ್ತ ಎನ್ನಿಸಿತು. ಅದಕ್ಕೆ ಪ್ರಯತ್ನ ಆರಂಭಿಸಿದ್ದೇನೆ. ಆದರೆ ನಾನೊಬ್ಬನೇ ಈ ಕೆಲಸ ಹೇಗೆ ಮಾಡುತ್ತೇನೆ ಎಂಬ ಆತಂಕವಿತ್ತು. ಇದಕ್ಕೆ ನಟ ಸೂರ್ಯ ಕೈ ಜೋಡಿಸಿ ತಮ್ಮ ಫೌಂಡೆಶನ್ ವತಿಯಿಂದ ಒಂದು ಅಂಬುಲೆನ್ಸ್ ಕೊಡುಗೆ ನೀಡಿದರು. ಅಲ್ಲದೇ ವಿಷಯ ತಿಳಿದ ಶಿವಣ್ಣ ದಂಪತಿಯೂ ಒಂದು ಅಂಬುಲೆನ್ಸ್ ಕೊಡಿತ್ತೇನೆ ಎಂದಿದ್ದಾರೆ. ಅಲ್ಲದೇ ಈ ವಿಷ್ಯ ತಿಳಿದ ನಟ ಕಮಲ ಹಾಸನ್ ಕೂಡ ಒಂದು ಅಂಬುಲೆನ್ಸ್ ನೀಡೋದಾಗಿ ಹೇಳಿದ್ದಾರೆ. ಇನ್ನುಳಿದ ಅಂಬುಲೆನ್ಸ್ ನ್ನು ನೀಡಲೇಬೇಕೆಂದು ನಾನು ತೀರ್ಮಾನಿಸಿದ್ದೇನೆ. ಎರಡು ವರ್ಷ ದುಡಿದಾದರೂ ಇದನ್ನು ಮಾಡುತ್ತೇನೆ ಎಂದು ಭಾವುಕರಾಗಿ‌ ಮಾತನಾಡಿದರು.

ಇದೇ ಸಮಾರಂಭದ ಕೊನೆಯಲ್ಲಿ ಮಾತನಾಡಿದ ನಟ ಯಶ್ ಅಪ್ಪು ಒಡನಾಟವನ್ನು ಸ್ಮರಿಸಿದರು. ಅಲ್ಲದೇ ಅಪ್ಪು ಕನಸುಗಳನ್ನು ನನಸು ಮಾಡುವಂತೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಳಿ ಮನವಿ ಮಾಡಿದರು. ಅಲ್ಲದೇ ಎಲ್ಲ ಸಂದರ್ಭದಲ್ಲೂ ನಮ್ಮೆಲ್ಲರ ಸಹಕಾರವಿದೆ ಎಂದರು. ಅಲ್ಲದೇ ಮಾತಿನ ಕೊನೆಯಲ್ಲಿ ಪ್ರಕಾಶ್ ರಾಜ್ ಅಂಬುಲೆನ್ಸ್ ಕೊಡುಗೆ ವಿಚಾರವನ್ನು ಪ್ರಸ್ತಾಪಿಸಿದ ರಾಕಿಂಗ್ ಸ್ಟಾರ್ ಯಶ್ ತಮ್ಮ ಯಶೋಮಾರ್ಗ ಫೌಂಡೇಶನ್ ಹಾಗೂ ತಮ್ಮ ಸ್ನೇಹಿತರ ಕೆವಿನ್ ಪ್ರೊಡಕ್ಷನ್ ಒಟ್ಟಾಗಿ ಪ್ರಕಾಶ್ ರಾಜ್ ಕನಸನ್ನು ನನಸು ಮಾಡುವುದಾಗಿ ಘೋಷಿಸಿದರು.

ಇನ್ನೆಷ್ಟು 25 ಅಂಬುಲೆನ್ಸ್ ಬೇಕಾದರೂ ನಾವು ನಿಂತು ವ್ಯವಸ್ಥೆ ಮಾಡುತ್ತೇವೆ ಎನ್ನುವ ಮೂಲಕ ಅಪ್ಪುವಿನ ಮೇಲೆ ನಟಗಿರುವ ಅಭಿಮಾನ ಎಂತದ್ದು ಎಂಬುದನ್ನು ಸಾಬೀತು ಮಾಡಿದರು. ಹೀಗಾಗಿ ಸಧ್ಯದಲ್ಲೇ ಕರುನಾಡಿನ ಮನೆಮಗನಂತಿದ್ದ ಅಪ್ಪು ಹೆಸರಿನಲ್ಲಿ ಜೀವರಕ್ಷಕ ಆಂಬುಲೆನ್ಸ್ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜನರ ಜೀವ ರಕ್ಷಣೆಗೆ ದುಡಿಯಲಿದೆ.

ಇದನ್ನೂ ಓದಿ : Ramya Come Back : ರಮ್ಯ ಕಮ್ ಬ್ಯಾಕ್ ಡೌಟ್ : ಇನ್ ಸ್ಟಾಗ್ರಾಂ ನಲ್ಲಿ ಹೊರಬಿತ್ತು ಕಹಿಸತ್ಯ

ಇದನ್ನೂ ಓದಿ : Rishab Shetty : “ಗೀತಾ ಆರ್ಟ್ಸ್” ಬ್ಯಾನರ್ ನಲ್ಲಿ ರಿಷಬ್ ಶೆಟ್ಟಿ ಸಿನಿಮಾ

Puneeth Rajkumar Dreams fulfill actor Yash, Appu Ambulance for every district of the state

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular