Flight turbulence: ಅಡ್ಡಾ ದಿಡ್ಡಿ ಹಾರಿದ ವಿಮಾನ.. ಪ್ರಯಾಣಿಕರ ಪಾಡು ಏನಾಗಿದೆ ನೋಡಿ

ಅರ್ಜೆಂಟೀನಾ: Flight turbulence ಮ್ಯಾಡ್ರಿಡ್‌ನಿಂದ ಬ್ಯೂನಸ್ ಐರಿಸ್‌ಗೆ ಪ್ರಯಾಣಿಸುತ್ತಿದ್ದ ಏರೋಲಿನಾಸ್ ಅರ್ಜೆಂಟೀನಾಸ್ ವಿಮಾನ ಹಾರುವ ವೇಳೆ ಏಕಾಏಕಿ ದಿಕ್ಕನ್ನ ಬದಲಿಸಿದ್ದಕ್ಕೆ, ವಿಮಾನದೊಳಗಿದ್ದ 12 ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಒಬ್ಬರ ಮೂಗು ಮುರಿದಿದೆ. ಕೆಲವರು ವಿಮಾನದ ಫ್ಲೋರ್ ಮೇಲೆ ಬಿದ್ದಿದ್ದಾರೆ. ಹಲವು ಜನರಿಗೆ ತಲೆಗೆ ಗಾಯಗಳಾಗಿವೆ.

ಅಕ್ಟೊಬರ್ 18 ರಂದು ಈ ಘಟನೆ ನಡೆದಿದ್ದು, ಪ್ರಯಾಣಿಕರು ಟ್ವೀಟರ್ ನಲ್ಲಿ ಘಟನೆ ಕುರಿತು ಫೋಟೋಗಳನ್ನ ಪೋಸ್ಟ್ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಅಕ್ಟೋಬರ್ 18 ರಂದು ರಾತ್ರಿ 8 ಗಂಟೆಗೆ ಅರ್ಜೆಂಟೀನಾಸ್ ಫ್ಲೈಟ್ R1133, ಏರ್ಬಸ್ A330-200 ಟ್ವಿನ್-ಜೆಟ್ ಇಂಜಿನ್ಡ್ ವಿಮಾನ ಮ್ಯಾಡ್ರಿಡ್‌ನಿಂದ ಟೇಕಾಫ್ ಆಗಿದೆ. 271 ಪ್ರಯಾಣಿಕರು ಮತ್ತು 13 ಸಿಬ್ಬಂದಿಯನ್ನು ಹೊತ್ತ A330 ದಕ್ಷಿಣ ಅಮೆರಿಕಾವನ್ನು ಸಮೀಪಿಸುತ್ತಿರುವಾಗ ಅಟ್ಲಾಂಟಿಕ್ ಸಾಗರದ ಮೇಲೆ ಪ್ರಕ್ಷುಬ್ಧ ಸ್ಥಿತಿಗೆ ತಲುಪಿದೆ. ಬ್ಯೂನಸ್ ಐರಿಸ್‌ನ ಎಝೀಝಾ ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ ಮಧ್ಯದಲ್ಲಿ ತೊಂದರೆಯಾಗಿದೆ. ಹವಾಮಾನ ವೈಪರಿತ್ಯದ ಕಾರಣದಿಂದಾಗಿ ವಿಮಾನದ ಪೈಲೆಟ್ ಗಳು ಏಕಾ ಏಕಿ ದಿಕ್ಕನ್ನ ಬದಲಿಸಿದ್ದಾರೆ.

ಸಾಮಾನ್ಯವಾಗಿ ವಾಯುಮಾರ್ಗದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುತ್ತವೆ. ಉದಾಹರಣೆಗೆ ಬಸ್ , ಕಾರಿನಲ್ಲಿ ಹೋಗುವಾಗ ಎದುರಾಗುವ ಏಕಾಏಕಿ ತಿರುವುಗಳಲ್ಲಿ ಯಾವ ರೀತಿ ಪ್ರಯಾಣಿಕರು ವಾಲಡುತ್ತಾರೋ ಅದೇ ರೀತಿ ವಿಮಾನದ ವಾಯು ಮಾರ್ಗದಲ್ಲೂ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ಸೀಟ್ ಬೆಲ್ಟ್, ಸೇಫ್ಟಿ ಬೆಲ್ಟ್ ಧರಿಸುವಂತೆ ಸೂಚನೆ ನೀಡುತ್ತಾರೆ. ಆದ್ರೆ ಈ ವಿಮಾನ ಹೀಗೆ ಏಕಾಏಕಿ ದಿಕ್ಕು ಬದಲಿಸಿದಾಗ ವಿಮಾನದ ಸಿಬ್ಬಂದಿ ಸೀಟ್ ಬೆಲ್ಟ್ ಧರಿಸುವಂತೆ ಸೂಚಿಸಿಲ್ಲ ಅಂತಾ ಪ್ರಯಾಣಿಕರು ಆರೋಪಿಸಿದ್ದಾರೆ . ಹೀಗೆ ವಿಮಾನ ಆಕಾಶದಲ್ಲಿ ತಲೆ ಕೆಳಗಾಗಿ ಹಾರಿದಾಗ ಪ್ರಯಾಣಿಕರೆಲ್ಲರೂ ಒಳಗೆ ತೂರಾಡಿ ಬಿದ್ದಿದ್ದಾರೆ. ಇದ್ರಿಂದ ಮಹಿಳೆಯೊಬ್ಬರ ಮೂಗಿನ ಮೂಳೆ ಮುರಿದಿದ್ದು, ಹಲವರಿಗೆ ತಲೆಗೆ ಗಾಯಗಳಾಗಿವೆ. ವಿಮಾನದ ಸಿಬ್ಬಂದಿಯೂ ಸಹ ವಿಮಾನದೊಳಗೆ ಬಿದ್ದಿದ್ದಾರೆ ಅಂತಾ ಟ್ವೀಟ್ ಮಾಡಿ ಪೋಟೋ ಹಂಚಿಕೊಂಡಿರೋ ಪ್ರಯಾಣಿಕರು ತಿಳಿಸಿದ್ದಾರೆ.

ಸಾಂಧರ್ಬಿಕ ಚಿತ್ರ

ಈ ಮಧ್ಯೆ ವಿಮಾನ ಬ್ಯೂನಸ್ ಐರಿಸ್‌ನಲ್ಲಿ ಲ್ಯಾಂಡ್ ಆದ ಬಳಿಕ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ.  ಇತರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದ್ರೆ ಪ್ರಯಾಣಿಕರ ಆರೋಪವನ್ನ ಅಲ್ಲಗಳೆದಿರೋ ವಿಮಾನದ ಆಡಳಿತ ಮಂಡಳಿ, ಸಿಬ್ಬಂದಿ ವಿಮಾನದ ಪ್ರಕ್ಷುಬ್ಧತೆಯ ಬಗ್ಗೆ ಮೊದಲೇ ಮಾಹಿತಿ ನೀಡಿದ್ದಾರೆ. ಅಲ್ದೆ ಸುರಕ್ಷತಾ ಬೆಲ್ಟ್ ದೀಪಗಳು ಸಹ ಆನ್ ಆಗಿವೆ. ಆದ್ರೆ ಪ್ರಯಾಣಿಕರು ಸುರಕ್ಷಾತ ಬೆಲ್ಟ್ ಧರಿಸದೇ ಇದ್ದುದಕ್ಕೆ ಹೀಗಾಗಿದೆ ಎಂದಿದ್ದಾರೆ.

ಇದನ್ನೂ ಓದಿ : 2nd PU EXAM DATE: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಇದನ್ನೂ ಓದಿ : Panchamasali Protest: ಪಂಚಮಸಾಲಿಗಳ ಅಂತಿಮ ಹೋರಾಟಕ್ಕೆ ಯತ್ನಾಳ್ ಕರೆ; ಡಿ.12ಕ್ಕೆ ವಿಧಾನಸೌಧಕ್ಕೆ ಮುತ್ತಿಗೆ

ಇದನ್ನೂ ಓದಿ : Appu Ambulance : ಪುನೀತ್ ರಾಜ್ ಕುಮಾರ್ ನೆನಪು ಅಮರವಾಗಿಸಲು ಮುಂದಾದ ನಟ ಯಶ್ : ರಾಜ್ಯದ ಪ್ರತಿ ಜಿಲ್ಲೆಗೂ ಅಪ್ಪು ಅಂಬುಲೆನ್ಸ್

Flight turbulence on Argentina bound flight 12 people injures

Comments are closed.