ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಚಿತ್ರ ಜೇಮ್ಸ್ (james movie ott premiere) ಸಾಕಷ್ಟು ಕಾರಣಗಳಿಂದ ಅಭಿಮಾನಿಗಳ ಪಾಲಿಗೆ ವಿಶೇಷ ಎನಿಸಿದೆ. ಇನ್ನು ನಮ್ಮ ನೆಚ್ಚಿನ ನಟನನ್ನು ದೊಡ್ಡ ಪರದೆಯಲ್ಲಿ ನೋಡಲು ಸಾಧ್ಯವಿಲ್ಲ ಎಂಬ ಕೊರಗು ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲಿಯೂ ಇದೆ.
ಈಗಾಗಲೇ ಸಾಕಷ್ಟು ಮಂದಿ ಜೇಮ್ಸ್ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಹೋಗಿ ವೀಕ್ಷಿಸಿದ್ದಾರೆ. ಆರಂಭದಲ್ಲಿ ಹೌಸ್ಫುಲ್ ಪ್ರದರ್ಶನ ಕಂಡ ಈ ಸಿನಿಮಾಗೆ ಬಳಿಕ ಸಾಕಷ್ಟು ಕಾರಣಗಳಿಂದಾಗಿ ಚಿತ್ರಮಂದಿರಗಳಲ್ಲಿ ಹೆಚ್ಚು ಪ್ರದರ್ಶನ ಕಾಣಲು ಅವಕಾಶ ಸಿಗಲಿಲ್ಲ. ಆದರೆ ಅಪ್ಪು ಕೊನೆಯ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಆಗಲಿಲ್ಲ ಎಂಬುವವರಿಗೆ ಚಿತ್ರತಂಡ ಇದೀಗ ಶುಭ ಸುದ್ದಿಯೊಂದನ್ನು ನೀಡಿದೆ.
ಜೇಮ್ಸ್ ಸಿನಿಮಾ ಇದೇ ಬರುವ 14ರಂದು ಒಟಿಟಿ ವೇದಿಕೆಯಲ್ಲಿ ರಿಲೀಸ್ ಆಗಲಿದ್ದು ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಕರ್ನಾಟಕ ರತ್ನನನ್ನು ಕಣ್ತುಂಬಿಕೊಳ್ಳಬಹುದಾಗಿದೆ . ಜೇಮ್ಸ್ ಸಿನಿಮಾದ ಇನ್ನೇನು ಕೆಲವೇ ದಿನಗಳಲ್ಲಿ ಸೋನಿ ಲಿವ್ನಲ್ಲಿ ಪ್ರದರ್ಶನ ಕಾಣಲಿದೆ .
ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಿದ್ದ ಈ ಸಿನಿಮಾಗೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದರು. ಸಿನಿಮಾ ಕೆಲಸ ಇನ್ನೂ 30 ಪ್ರತಿಶತ ಬಾಕಿ ಇರುವಾಗಲೇ ಪುನೀತ್ ಬಾರದ ಲೋಕಕ್ಕೆ ತೆರಳಿದ್ದರು. ಹೀಗಾಗಿ ಸಿನಿಮಾದಲ್ಲಿ ಪುನೀತ್ ನಟ ಶಿವಣ್ಣ ಧ್ವನಿ ನೀಡಿದ್ದರು. ಈ ಸಿನಿಮಾದ ಮೂಲಕ ನಟಿ ಪ್ರಿಯಾ ಆನಂದ್ ಮತ್ತೊಮ್ಮೆ ಅಪ್ಪುಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ಎರಡು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಫೈಟಿಂಗ್ ಹಾಗೂ ಡ್ಯಾನ್ಸ್ ಮೂಲಕ ಅಭಿಮಾನಿಗಳ ಕಣ್ಣಿಗೆ ರಸದೌತಣವನ್ನೇ ಬಡಿಸಿದ್ದಾರೆ.
ಸೋನಿ ಲಿವ್ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ಏಪ್ರಿಲ್ 14ರಿಂದ ಈ ಸಿನಿಮಾವು ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಇದನ್ನು ಓದಿ : KGF 2 Yash : ಸಲ್ಮಾನ್, ಶಾರೂಖ್ ಜೊತೆ ಹೋಲಿಸಬೇಡಿ : ಫ್ಯಾನ್ಸ್ ಗೆ ಯಶ್ ಮನವಿ
ಇದನ್ನೂ ಓದಿ :KGF chapter 2 :ಕೆಜಿಎಫ್ 2 ಸಿನಿಮಾ ವೀಕ್ಷಿಸಲಿರುವ ಪ್ರಭಾಸ್ ಅಭಿಮಾನಿಗಳಿಗೆ ಇಲ್ಲಿದೆ ಗುಡ್ನ್ಯೂಸ್
puneeth rajkumar starrer james movie ott premiere on sony liv from 14th april