Shashi Tharoor : ಸಂಸತ್ತಿನಲ್ಲಿ ಸುಪ್ರಿಯಾ ಸುಳೆ ಜೊತೆಗಿನ ಸಂಭಾಷಣೆಗೆ ತರೂರ್​ ಸ್ಪಷ್ಟನೆ

Shashi Tharoor : ಸಂಸತ್ತಿನಲ್ಲಿ ಎನ್​ಸಿಪಿ ಸಂಸದೆ ಸುಪ್ರಿಯಾ ಸುಳೆಯೊಂದಿಗೆ ಕಾಂಗ್ರೆಸ್​ ಸಂಸದ ಶಶಿ ತರೂರ್ ಸಂಭಾಷಣೆ ನಡೆಸುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಸುಪ್ರಿಯಾ ಸುಳೆಯ ಸಮೀಪ ಬಂದ ಶಶಿ ತರೂರ್​ ಮುಖದಲ್ಲಿದ್ದ ಭಾವ ಕಂಡು ಟ್ರೋಲಿಗರು ತರೂರ್​ರನ್ನು ಸಿಕ್ಕಾಪಟ್ಟೆ ಕಾಲೆಳೆದಿದ್ದರು.


ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಯನ್ನು ಎದುರಿಸಿದ ಬಳಿಕ ಶಶಿ ತರೂರ್​ ಟ್ವೀಟ್​ ಮೂಲಕ ಈ ಘಟನೆಗೆ ಸ್ಪಷ್ಟನೆ ನೀಡಿದ್ದಾರೆ. ಈ ವಿಡಿಯೋವನ್ನು ನೋಡಿ ಆನಂದಿಸಿದ ಪ್ರತಿಯೊಬ್ಬರಿಗೂ ನಾನು ಈ ಮೂಲಕ ಸ್ಪಷ್ಟನೆ ನೀಡಲು ಇಚ್ಛಿಸುತ್ತೇನೆ. ಲೋಕಸಭೆಯಲ್ಲಿ ಫಾರೂಕ್​ ಅಬ್ದುಲ್ಲಾ ಮಾತನಾಡಿದ ಬಳಿಕ ಸುಪ್ರಿಯಾ ಸುಳೆ ಮಾತನಾಡುವವರಿದ್ದರು. ಹೀಗಾಗಿ ಅವರು ನನ್ನ ಬಳಿ ಪ್ರಶ್ನೆಯೊಂದನ್ನು ಕೇಳಿದ್ದರು. ಫಾರೂಕ್​​ಗೆ ನಮ್ಮ ಸಂಭಾಷಣೆಯಿಂದ ಯಾವುದೇ ತೊಂದರೆಯಾಗಬಾರದೆಂದು ಸುಪ್ರಿಯಾ ಸಣ್ಣದಾಗಿ ಮಾತನಾಡುತ್ತಿದ್ದರು. ಅವರ ಮಾತುಗಳನ್ನು ಕೇಳಿಸಿಕೊಳ್ಳಬೇಕಾದ್ದರಿಂದ ನಾನು ಡೆಸ್ಕ್​ ಮೇಲೆ ಒರಗಬೇಕಾಗಿ ಬಂತು ಎಂದು ಬರೆದುಕೊಂಡಿದ್ದಾರೆ.


ಸಂಸತ್ತಿನಲ್ಲಿ ನ್ಯಾಷನಲ್​​ ಕಾನ್ಫರೆನ್ಸ್​ ಮುಖ್ಯಸ್ಥ ಫಾರೂಕ್​ ಅಬ್ದುಲ್ಲಾ ಮಾತನಾಡುತ್ತಿದ್ದ ವೇಳೆಯಲ್ಲಿ ಅವರ ಪಕ್ಕದಲ್ಲೇ ಕುಳಿತಿದ್ದ ಸುಪ್ರಿಯಾ ಸುಳೆ ಹಿಂದೆ ಇದ್ದ ಶಶಿ ತರೂರ್​ ಜೊತೆ ಸಂಭಾಷಣೆ ನಡೆಸುತ್ತಿದ್ದರು. ಇಬ್ಬರೂ ಮಾತುಕತೆಯಲ್ಲಿ ಮಗ್ನರಾಗಿದ್ದ ವಿಡಿಯೋಗಳು ನಿನ್ನೆ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿತ್ತು.

ಇದನ್ನು ಓದಿ : Andhra Pradesh Cabinet :ಆಂಧ್ರಪ್ರದೇಶದಲ್ಲಿ ಎಲ್ಲಾ 24 ಸಚಿವರಿಂದ ರಾಜೀನಾಮೆ

ಇದನ್ನೂ ಓದಿ : BJ Puttaswamy : ಬಿ.ಜೆ.ಪುಟ್ಟಸ್ವಾಮಿ ಇನ್ನೂ ಗಾಣಿಗರ ಮಹಾಸ್ವಾಮಿ : ಇಳಿವಯಸ್ಸಿನಲ್ಲಿ ಸನ್ಯಾಸದ ಮೊರೆ ಹೋದ ಮಾಜಿ ಸಚಿವ

“Kuch Toh Log Kahenge”: Shashi Tharoor On Video Of Chat With NCP MP

Comments are closed.