ಬೆಂಗಳೂರು : kishore pattikonda hospitalised : ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್ ಸಿನಿಮಾಗೆ ಬಂಡವಾಳವನ್ನು ಹೂಡಿದ್ದ ಸ್ಯಾಂಡಲ್ವುಡ್ನ ಹೆಸರಾಂತ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಶೋರ್ ಪತ್ತಿಕೊಂಡಗೆ ಅಧಿಕ ರಕ್ತದೊತ್ತಡದಿಂದಾಗಿ ಹೃದಯಾಘಾತ ಸಂಭವಿಸರಬಹುದು ಎಂದು ಮೂಲಗಳು ತಿಳಿಸಿವೆ.
ಕಿಶೋರ್ ಪತ್ತಿಕೊಂಡ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದಂತೆಯೇ ಅವರನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪೋಲೋ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಕಿಶೋರ್ಗೆ ಚಿಕಿತ್ಸೆ ಮುಂದುವರಿದಿದೆ. ಕಿಶೋರ್ ಆಪ್ತ ವಲಯಗಳು ನೀಡಿರುವ ಮಾಹಿತಿ ಪ್ರಕಾರ ಅವರು ಕೋಮಾ ತಲುಪಿದ್ದು ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗ್ತಿದೆ.
ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದ ಸಿನಿಮಾ ಜೇಮ್ಸ್ ಅಪ್ಪು ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡ ಕೊನೆಯ ಸಿನಿಮಾವಾಗಿದೆ. ಪುನೀತ್ ರಾಜ್ಕುಮಾರ್ ವಿಧಿವಶರಾಗುವ ಮೂಲಕ 80 ಪ್ರತಿಶತ ಸಿನಿಮಾದ ಕಾರ್ಯಗಳನ್ನು ಮುಗಿಸಿದ್ದರು. ಪುನೀತ್ ಜನ್ಮ ದಿನದಂದು ಅಂದರೆ ಮಾರ್ಚ್ 17ರಂದು ಈ ಸಿನಿಮಾವನ್ನು ತೆರೆಗೆ ತರಬೇಕೆಂದು ನಿರ್ಧರಿಸಿದ್ದ ಚಿತ್ರತಂಡಕ್ಕೆ ಸಾಥ್ ನೀಡಿದ್ದ ನಟ ಶಿವಣ್ಣ ಅಪ್ಪು ಪಾತ್ರಕ್ಕೆ ಕಂಠದಾನ ಮಾಡಿದ್ದರು. ಜೇಮ್ಸ್ ಸಿನಿಮಾ ಚಿತ್ರ ಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಬಳಿಕ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಪುನೀತ್ ರಾಜ್ ಕುಮಾರ್ ಧ್ವನಿಯಲ್ಲಿಯೇ ಈ ಸಿನಿಮಾವನ್ನು ಮತ್ತೊಮ್ಮೆ ರಿ ರಿಲೀಸ್ ಮಾಡಲಾಗಿತ್ತು. ಪುನೀತ್ ರಾಜ್ಕುಮಾರ್ ಮುಖ್ಯ ಭೂಮಿಕೆಯ ಕೊನೆಯ ಚಿತ್ರಕ್ಕೆ ಕಿಶೋರ್ ಪತ್ತಿಕೊಂಡ ಬಂಡವಾಳ ಹೂಡಿದ್ದರು.
ಸಿಗರೇಟ್ ಸೇದಿದಂತೆ ಕಾಳಿ ಮಾತೆಯನ್ನು ಚಿತ್ರಿಸಿದ ನಿರ್ಮಾಪಕಿ : ನೆಟ್ಟಿಗರಿಂದ ವ್ಯಾಪಕ ಆಕ್ರೋಶ
ಲೇಖಕಿ – ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಕಾಳಿ ದೇವಿಯು ಸಿಗರೇಟ್ ಸೇದುತ್ತಿರುವಂತೆ ಚಿತ್ರಿಸುವ ವಿವಾದಾತ್ಮಕ ಪೋಸ್ಟರ್ನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ವ್ಯಾಪಕ ವಿರೋಧವನ್ನು ಎದುರಿಸುತ್ತಿದ್ದಾರೆ. ಇವರ ಹೊಸ ಚಿತ್ರ ‘ಕಾಲಿ’ ಸಿನಿಮಾದ ಪೋಸ್ಟರ್ ಇದಾಗಿದೆ. ಇದನ್ನು ಪರ್ಫಾಮೆನ್ಸ್ ಡಾಕ್ಯೂಮೆಂಟರಿ ಎಂದು ಕರೆಯಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು #ArrestLeenaManimekalai ಎಂಬ ಟ್ರೆಂಡ್ ಆರಂಭಿಸಿದ್ದಾರೆ.
ಜುಲೈ 2ರಂದು ಸಿನಿಮಾ ನಿರ್ಮಾಪಕಿ ಲೀನಾ ಮಣಿಮೇಕಲೈ ಈ ರೀತಿಯ ಪೋಸ್ಟರ್ನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಅಗಾ ಖಾನ್ ಮ್ಯೂಸಿಯಂನಲ್ಲಿ ಇಂದು ನನ್ನ ಇತ್ತೀಚಿನ ಚಲನಚಿತ್ರದ ಬಿಡುಗಡೆಯನ್ನು ಶೇರ್ ಮಾಡಲು ನಾನು ಭಾರೀ ಉತ್ಸುಕಳಾಗಿದ್ದೇನೆ. ಈ ಸಿನಿಮಾದ ಆರು ನಿಮಿಷಗಳ ಆಯ್ದ ಭಾಗವಾದ ಕಾಳಿಯನ್ನು ಇಂದು ತೋರಿಸಲಾಗುವುದು ಎಂದು ಬರೆದುಕೊಂಡಿದ್ದಾರೆ. ಅಗಾ ಖಾನ್ ಮ್ಯೂಸಿಯಂನ ರಿದಮ್ಸ್ ಆಫ್ ಕೆನಡಾದ ಭಾಗವಾಗಿ ಕೆನಡಾ ಸಂಸ್ಕೃತಿಯ ವೈವಿಧ್ಯಮಯ ವಸ್ತ್ರವನ್ನು ಆಚರಿಸುವ ಒಂದು ವಾರದ ಅವಧಿಯ ಉತ್ಸವ. ಉತ್ಸವದ ಸಮಯದಲ್ಲಿ ಈವೆಂಟ್ ಮತ್ತು ಮ್ಯೂಸಿಯಂನ ಶಾಶ್ವತ ಸಂಗ್ರಹಣೆ ಗ್ಯಾಲರಿಗೆ ಪ್ರವೇಶ ಉಚಿತವಾಗಿದೆ.
ಲೀನಾ ಮಣಿಮೇಕಲೈನ ಪೋಸ್ಟರ್ ನೆಟ್ಟಿಗರಿಗೆ ಸುತಾರಾಂ ಇಷ್ಟವಾಗಿಲ್ಲ. ಅನೇಕರು ಈ ಪೋಸ್ಟರ್ನಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ದೂರಿದ್ದಾರೆ. ಈ ಪೋಸ್ಟರ್ನ್ನು ಈ ಕೂಡಲೇ ತೆಗೆಯಬೇಕು ಎಂದು ಒತ್ತಾಯಿಸಿದ್ದಾರೆ. ಈ ಪೋಸ್ಟರ್ನಲ್ಲಿ ಮಾ ಕಾಳಿ ಸಿಗರೇಟ್ ಸೇದುತ್ತಿರುವಂತೆ ತೋರಿಸಲಾಗಿದ್ದು ಇದನ್ನು ನೋಡಿ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗ್ತಿದೆ. ಕಾಳಿ ಮಾತೆಯಂತೆ ವೇಷಭೂಷಣ ಧರಿಸಿರುವ ಕಲಾವಿದೆ ಒಂದು ಕೈಯಲ್ಲಿ ತ್ರಿಶೂಲ ಹಾಗೂ ಮತ್ತೊಂದು ಕೈಯಲ್ಲಿ LGBTQ ಸಮುದಾಯದ ಹೆಮ್ಮೆಯ ಧ್ವಜವನ್ನು ಹಿಡಿದಿದ್ದಾರೆ.
ಕಾಳಿ ಸಾಕ್ಷ್ಯಚಿತ್ರದ ಪೋಸ್ಟರ್ ಕಂಡು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು , ಪ್ರತಿದಿನವೂ ಸಮಾಜದಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ಬರುವಂತಹ ಘಟನೆಗಳು ಜರುಗುತ್ತಿವೆ. ಇವರು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ಸಿಟ್ಟು ಹೊರ ಹಾಕಿದ್ದಾರೆ. ಮಾತ್ರವಲ್ಲದೇ ಈ ಫೋಟೋಗಳಿಗೆ ಅಮಿತ್ ಶಾ ಹಾಗೂ ಪ್ರಧಾನಿ ಕಚೇರಿಯನ್ನು ಟ್ಯಾಗ್ ಮಾಡುವ ಮೂಲಕ ಈ ಫೋಸ್ಟರ್ ಹಾಗೂ ಸಿನಿಮಾದ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದನ್ನು ಓದಿ : Uttar Pradesh : ಹಿಂದೂ ದೇವರ ಫೋಟೋ ಇರುವ ಕಾಗದದ ಮೇಲೆ ಮಾಂಸ ಮಾರಾಟ : ಆರೋಪಿ ಬಂಧನ
ಇದನ್ನೂ ಓದಿ : Bike horn Murder : ಬೈಕ್ ಹಾರ್ನ್ ವಿಚಾರಕ್ಕೆ ಶುರುವಾದ ದ್ವೇಷ ಕೊಲೆಯಲ್ಲಿ ಅಂತ್ಯ : ಆರೋಪಿಗಳ ಬಂಧನ
puneeth rajkumar starrer james movie producer kishore pattikonda hospitalised