Racist Abuse : ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಭಾರತೀಯರಿಗೆ ಇಂಗ್ಲೀಷರಿಂದ ಜನಾಂಗೀಯ ನಿಂದನೆ !

ಬರ್ಮಿಂಗ್’ಹ್ಯಾಮ್ : ಭಾರತ ಹಾಗೂ ಆತಿಥೇಯ ಇಂಗ್ಲೆಂಡ್ ಮಧ್ಯೆ ಎಡ್ಜ್‌ಬಾಸ್ಟನ್ (India vs England Test match) ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯ ರೋಚಕ ಘಟ್ಟ ತಲುಪಿದೆ. ಕ್ರಿಕೆಟ್ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸಿರುವ ಇದೇ ಟೆಸ್ಟ್ ಪಂದ್ಯ ವಿವಾದಾತ್ಮಕ ಘಟನೆಗೂ (Racist Abuse in India Vs England Test match) ಸಾಕ್ಷಿಯಾಗಿದೆ.

4ನೇ ದಿನದಾಟದ ಸಂದರ್ಭದಲ್ಲಿ ಭಾರತೀಯ ಆಟಗಾರರಾದ ಮೊಹಮ್ಮದ್ ಸಿರಾಜ್ (Mohammad Siraj) ಮತ್ತು ಶಾರ್ದೂಲ್ ಠಾಕೂರ್ (Shardul Thakur) ಇಂಗ್ಲೆಂಡ್ ಪ್ರೇಕ್ಷಕರಿಂದ ಜನಾಂಗೀಯ ನಿಂದನೆಗೆ ಗುರಿಯಾಗಿದ್ದಾರೆ. ಎಡ್ಜ್’ಬಾಸ್ಟನ್ ಮೈದಾನದ ಸೌಥ್ ಲೋವರ್ ಸ್ಟ್ಯಾಂಡ್”ನಲ್ಲಿದ್ದ ಇಂಗ್ಲೆಂಡ್ ಪ್ರೇಕ್ಷಕರು ಟೀಮ್ ಇಂಡಿಯಾ ಆಟಗಾರರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂದು ಕ್ರೀಡಾಂಗಣದಲ್ಲಿ ಹಾಜರಿದ್ದ ಪವನ್ ಎಂಬ ಭಾರತೀಯ ಪ್ರೇಕ್ಷಕ ಆರೋಪಿಸಿದ್ದಾರೆ. ಈ ಕುರಿತ ವೀಡಿಯೊವನ್ನು ಟ್ವಿಟರ್”ನಲ್ಲಿ ಪ್ರಕಟಿಸಿದ್ದಾರೆ.

ಟೀಮ್ ಇಂಡಿಯಾ ಆಟಗಾರರನ್ನಷ್ಟೇ ಅಲ್ಲ, ಭಾರತ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಬಂದಿದ್ದ ಭಾರತೀಯ ಮೂಲದ ಪ್ರೇಕ್ಷಕರಿಗೂ ಜನಾಂಗೀಯ ನಿಂದನೆಯ ಬಿಸಿ ತಟ್ಟಿದೆ (Racist Abuse At Indian Fans). ಇಂಗ್ಲೆಂಡ್ ಪ್ರೇಕ್ಷಕರು ಭಾರತೀಯರನ್ನು ಜನಾಂಗೀಯವಾಗಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಧ್ರುವ್ ಪಟೇಲ್ ಎಂಬ ಭಾರತೀಯ ಕ್ರಿಕೆಟ್ ಅಭಿಮಾನಿ ಟ್ವಿಟರ್”ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್, “ಇಂದಿನ ಟೆಸ್ಟ್ ಪಂದ್ಯದಲ್ಲಿ ಜನಾಂಗೀಯ ನಿಂದನೆಯ ವರದಿಗಳನ್ನು ಕೇಳಿ ನಾವು ತುಂಬಾ ಕಳವಳಗೊಂಡಿದ್ದೇವೆ. ನಾವು ಎಡ್ಜ್‌ಬಾಸ್ಟನ್‌ನಲ್ಲಿರುವ ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ, ಅವರು ತನಿಖೆ ನಡೆಸುತ್ತಾರೆ. ಕ್ರಿಕೆಟ್‌ನಲ್ಲಿ ವರ್ಣಭೇದ ನೀತಿಗೆ ಅವಕಾಶವಿಲ್ಲ” ಎಂದು ಟ್ವೀಟ್ ಮಾಡಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಡ್ಜ್”ಬಾಸ್ಟನ್ ಕ್ರಿಕೆಟ್ ಕ್ಲಬ್”ನ ಮುಖ್ಯಸ್ಥ ಸ್ಟುವರ್ಟ್ ಕೇನ್, “ನಡೆದಿರುವ ಘಟನೆಗೆ ವಿಷಾದಿಸುತ್ತೇವೆ ಮತ್ತು ಇಂತಹ ನಡವಳಿಕೆಗಳಿಗೆ ಯಾವುದೇ ರೀತಿಯಲ್ಲಿ ಕ್ಷಮೆ ಇಲ್ಲ. ಆದಷ್ಟು ಶೀಘ್ರವಾಗಿ ನಾವು ಈ ಘಟನೆಯ ತನಿಖೆ ಆರಂಭಿಸುತ್ತೇವೆ” ಎಂದಿದ್ದಾರೆ.

ಎಡ್ಜ್’ಬಾಸ್ಟನ್ ಟೆಸ್ಟ್ ಪಂದ್ಯದ 4ನೇ ದಿನದಾಟದ ಸಂದರ್ಭದಲ್ಲಿ ನಡೆದಿರುವ ಜನಾಂಗೀಯ ನಿಂದನೆಯ ಘಟನೆಯ ಬಗ್ಗೆ ಯಾರ್ಕ್’ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡುವ ಇಂಗ್ಲೀಷ್ ಆಟಗಾರ ಅಜೀಮ್ ರಫೀಕ್ ಧ್ವನಿ ಎತ್ತಿದ್ದಾರೆ. ಘಟನೆಯ ಕುರಿತಾದ ವರದಿಯನ್ನು ಓದಿ ತುಂಬಾ ಬೇಸರವಾಯಿತು ಎಂದು ಅಜೀಮ್ ರಫೀಕ್ ಟ್ಟೀಟ್ ಮಾಡಿದ್ದಾರೆ.

ಕಳೆದ ವರ್ಷವೂ ಭಾರತೀಯ ಆಟಗಾರರು ಇಂಗ್ಲೆಂಡ್’ನಲ್ಲಿ ಟೆಸ್ಟ್ ಪಂದ್ಯವಾಡುತ್ತಿದ್ದ ವೇಳೆ ಜನಾಂಗೀಯ ನಿಂದನೆಗೆ ಗುರಿಯಾಗಿದ್ದರು. ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್”ರನ್ನು ಗುರಿಯಾಗಿಸಿಕೊಂಡು ಜನಾಂಗೀಯ ನಿಂದನೆ ನಡೆದಿತ್ತು.

ಇದನ್ನೂ ಓದಿ : Virat Kohli : ದ್ರಾವಿಡ್, ಸಚಿನ್‌ಗೂ ಸಾಧ್ಯವಾಗದ ದಾಖಲೆ… ಕಿಂಗ್ ಕೊಹ್ಲಿ ಹೊಸ ರೆಕಾರ್ಡ್ !

ಇದನ್ನೂ ಓದಿ : ಕಿಂಗ್ ಕೊಹ್ಲಿ Vs ಸ್ವಿಂಗ್ ಸುಲ್ತಾನ್… ಇದೇ ದಿಗ್ಗಜರ ಕೊನೆಯ ಮುಖಾಮುಖಿ !

Racist Abuse in India Vs England Test match

Comments are closed.