puneeth rajkumar : ನಟ ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ ಹಲವು ತಿಂಗಳುಗಳೇ ಸರಿದರೂ ಸರ ಸ್ಯಾಂಡಲ್ವುಡ್ ಅಪ್ಪು ಅಭಿಮಾನಿಗಳ ಎದೆಯಲ್ಲಿ ಚಿರಾಯು ಎನಿಸಿದ್ದಾರೆ. ಪುನೀತ್ ನಿಧನದ ಸಮಯದಲ್ಲಿ ಅವರು ಜೇಮ್ಸ್ ಸಿನಿಮಾಗೆ ಶೂಟಿಂಗ್ ಮುಗಿಸಿದ್ದರು. ಆದರೆ ಸಿನಿಮಾದ ಡಬ್ಬಿಂಗ್ ಕಾರ್ಯ ಮಾತ್ರ ಬಾಕಿ ಉಳಿದಿತ್ತು. ಬಳಿಕ ಚಿತ್ರ ತಂಡದ ಜೊತೆ ಸೇರಿದ ಶಿವಣ್ಣ ತಮ್ಮನ ಅಗಲಿಕೆಯ ನೋವಿನ ನಡುವೆಯೂ ತಮ್ಮನ ಪಾತ್ರಕ್ಕೆ ಧ್ವನಿ ನೀಡಿದ್ದರು.
ಅಭಿಮಾನಿಗಳ ಆಶಯದಂತೆ ಅಪ್ಪುವಿನ ಕೊನೆಯ ಸಿನಿಮಾವನ್ನು ಅವರ ಜನ್ಮದಿನದಂದೇ ತೆರೆಗೆ ತರಲಾಗಿತ್ತು. ಪುನೀತ್ರನ್ನು ಈ ರೀತಿಯಾಗಿ ಕಣ್ತುಂಬಿಕೊಂಡೆವಲ್ಲ ಎಂಬ ಸಂತಸ ಒಂದೆಡೆಯಾದರೆ ಅಪ್ಪು ಧ್ವನಿಯೇ ಸಿನಿಮಾಗಿಲ್ಲ ಎಂಬ ಕೊರತೆಯಂತೂ ಅಭಿಮಾನಿಗಳಿಗೆ ಕಂಡಿತ್ತು. ಆದರೆ ಇದೀಗ ಸಿನಿಮಾ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಅಪ್ಪುವಿನ ಧ್ವನಿಯಲ್ಲಿಯೇ ಸಿನಿಮಾವನ್ನು ರಿಲೀಸ್ ಮಾಡಲಾಗಿದೆ.
ಬೆಂಗಳೂರಿನ ಅನುಪಮಾ ಚಿತ್ರಮಂದಿರದಲ್ಲಿ ಅಪ್ಪು ಧ್ವನಿಯಲ್ಲಿ ಸಿನಿಮಾದ ಮೊದಲ ಪ್ರದರ್ಶನ ಕಂಡಿದೆ. ಅಲ್ಲದೇ ಇನ್ನೂ ಹಲವೆಡೆಗಳಲ್ಲಿ ಫ್ಯಾನ್ಸ್ ಶೋ ಕೂಡ ಆಯೋಜಿಸಲಾಗಿತ್ತು. ಸಿನಿಮಾ ನೋಡಿದ ಅಭಿಮಾನಿಗಳು ಅಪ್ಪುವಿನ ಧ್ವನಿ ಕೇಳಿ ಭಾವುಕರಾದರು.
ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಈ ರೀತಿಯ ಒಂದು ಸಾಧನೆ ಮಾಡಿರುವುದು ಪ್ರಪಂಚದಲ್ಲಿಯೇ ಇದೇ ಮೊದಲು ಎನ್ನಲಾಗುತ್ತಿದೆ. ಸಿನಿಮಾ ರಿಲೀಸ್ಗೂ ಮುನ್ನವೇ ಚಿತ್ರತಂಡ ಇಂತಹದ್ದೊಂದು ಪ್ಲಾನ್ ಮಾಡಿತ್ತು. ಆದರೆ ಆದಿ ಪುರುಷ್ ಸಿನಿಮಾದ ಚಿತ್ರೀಕರಣ ಕೂಡ ಇದ್ದಿದ್ದರಿಂದ ಸಮಯ ಸಾಲುತ್ತಿರಲಿಲ್ಲ. ಆದರೆ ಸಿನಿಮಾ 50 ದಿನ ಪೂರೈಸಿರುವ ಬೆನ್ನಲ್ಲೇ ಅಪ್ಪು ಸಿನಿಮಾ ಅಪ್ಪುವಿನ ಧ್ವನಿಯಲ್ಲಿಯೇ ಮೂಡಿ ಬಂದಿರುವುದು ಸಖತ್ ಖುಷಿ ತಂದಿದೆ.
ಇದನ್ನು ಓದಿ : basanagowda patil yatnal : ಗೃಹ ಸಚಿವ ಜ್ಞಾನೇಂದ್ರ ವಿರುದ್ಧ ಅಸಮಾಧಾನ ಹೊರ ಹಾಕಿದ ಶಾಸಕ ಯತ್ನಾಳ್
ಇದನ್ನೂ ಓದಿ : Yash : ಅಭಿಮಾನಿಗಳಿಗೆ ರಾಕಿಂಗ್ ಸ್ಟಾರ್ ಕೃತಜ್ಞತೆ : ಪುಟ್ಟ ಕತೆ ಜೊತೆ ಥ್ಯಾಂಕ್ಸ್ ಎಂದ ಯಶ್
puneeth rajkumar starrer james movie re released today fans get emotional