ಸೋಮವಾರ, ಜೂನ್ 16, 2025
HomeCinemapuneeth rajkumars twitter account : ಕನ್ನಡಿಗರಿಗೆ ಗುಡ್​ ನ್ಯೂಸ್​ : ಪುನೀತ್​​ ಟ್ವಿಟರ್​...

puneeth rajkumars twitter account : ಕನ್ನಡಿಗರಿಗೆ ಗುಡ್​ ನ್ಯೂಸ್​ : ಪುನೀತ್​​ ಟ್ವಿಟರ್​ ಖಾತೆಗೆ ಮರಳಿತು ಬ್ಲೂ ಟಿಕ್​​

- Advertisement -

puneeth rajkumars twitter account : ಕರ್ನಾಟಕ ರತ್ನ ಡಾ. ಪುನೀತ್​ ರಾಜ್​ಕುಮಾರ್​ ನಮ್ಮನ್ನೆಲ್ಲ ಬಿಟ್ಟು ಹೋಗಿ 9 ತಿಂಗಳುಗಳೇ ಕಳೆಯುತ್ತಾ ಬಂದಿದೆ. ಅಪ್ಪು ದೈಹಿಕವಾಗಿ ಎಲ್ಲರನ್ನೂ ತೊರೆದಿದ್ದಾರೆ ಆದರೂ ಸಹ ಅವರ ನಟನೆ ಹಾಗೂ ಸಾಮಾಜಿಕ ಕಾರ್ಯಗಳ ಮೂಲಕ ಇಂದಿಗೂ ಕರುನಾಡಿನಲ್ಲಿ ಜೀವಂತವಾಗಿ ಇದ್ದಾರೆ. ಸೋಶಿಯಲ್​ ಮೀಡಿಯಾಗಳಲ್ಲಿ ಇಂದಿಗೂ ಕೂಡ ಅವರಿಗೆ ಫಾಲೋವರ್ಸ್​ ಸಂಖ್ಯೆ ಹೆಚ್ಚುತ್ತಲೇ ಇದೆ.

ಈ ನಡುವೆ ಕೆಲವು ದಿನಗಳ ಹಿಂದೆಯಷ್ಟೇ ಟ್ವಿಟರ್​ನಲ್ಲಿ ಪುನೀತ್​ ರಾಜ್​ಕುಮಾರ್​ಗೆ ನೀಡಲಾಗಿದ್ದ ಬ್ಲೂ ಟಿಕ್​ನ್ನು ಅಳಿಸಿ ಹಾಕಲಾಗಿತ್ತು. ಟ್ವಿಟರ್​ನ ನಿಯಮದ ಪ್ರಕಾರ ಆರು ತಿಂಗಳುಗಳ ಕಾಲ ನಿಷ್ಕ್ರಿಯವಾಗಿರುವ ಖಾತೆಗಳಲ್ಲಿನ ಬ್ಲೂ ಮಾರ್ಕ್​ನ್ನು ಅಳಿಸಿ ಹಾಕಲಾಗುತ್ತದೆ. ಆದರೆ ಇದು ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿತ್ತು. ಅಪ್ಪು ಬಾಸ್​ ಟ್ವಿಟರ್​ ಖಾತೆಯಿಂದ ಬ್ಲೂ ಟಿಕ್​ ಅಳಿಸಿ ಹೋಗುವುದನ್ನು ನಾವು ಸಹಿಸೋದಿಲ್ಲ ಎಂದು ಕನ್ನಡಿಗರು ಟ್ವಿಟರ್​ನಲ್ಲಿ ಅಭಿಯಾನವನ್ನೇ ನಡೆಸಿದ್ದರು.

ಪುನೀತ್​ ರಾಜ್​ಕುಮಾರ್​ ಟ್ವಿಟರ್​ ಖಾತೆಯಿಂದ ವೆರಿಫೈಡ್​ ಬ್ಯಾಡ್ಜ್​ ತೆಗೆಯದಂತೆ ಮನವಿ ಮಾಡಿದ್ದ ಕನ್ನಡಿಗರು #ReverifyPuneethRajkumarTwitter ಎಂಬ ಹ್ಯಾಶ್​ಟಾಗ್​ನ ಅಡಿಯಲ್ಲಿ ಟ್ವೀಟ್​ ಮಾಡಿದ್ದರು. ಪುನೀತ್​ ರಾಜ್​ಕುಮಾರ್​ರ ಸಾಧನೆ ಹಾಗೂ ಸಾಮಾಜಿ ಕಾರ್ಯಗಳನ್ನು ಈ ಹ್ಯಾಶ್​ಟಾಗ್​ನ ಅಡಿಯಲ್ಲಿ ಹಾಕಲಾಗಿತ್ತು. ಕನ್ನಡಿಗರ ಅವಿರತ ಹೋರಾಟಕ್ಕೆ ಸ್ಪಂದಿಸಿದ ಟ್ವಿಟರ್​ ಇದೀಗ ಪುನೀತ್​ ರಾಜ್​ಕುಮಾರ್​ ಟ್ವಿಟರ್​ ಖಾತೆಯ ಬ್ಲೂ ಟಿಕ್​ನ್ನು ವಾಪಸ್​ ನೀಡಿದೆ. ಈ ಮೂಲಕ ಕನ್ನಡಿಗರ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.


ಕಳೆದ ಅಕ್ಟೋಬರ್ 29ರಂದು ಪುನೀತ್​ ರಾಜ್​​ಕುಮಾರ್​​ ಎದೆನೋವಿನ ಕಾರಣಕ್ಕೆ ಆಸ್ಪತ್ರೆಗೆ ದಾಖಲಾಗಿದ್ದರು. ಜಿಮ್​ ಮುಗಿಸಿದ ಬಳಿಕ ಅವರ ಎದೆಯಲ್ಲಿ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಹೃದಯಸ್ತಂಭನದಿಂದ ಪುನೀತ್​ ರಾಜ್​ಕುಮಾರ್​ ಕೊನೆಯುಸಿರೆಳೆದಿದ್ದರು.

ಇದನ್ನು ಓದಿ : remove bra for NEET exam : ‘ಒಳ ಉಡುಪು ಕಳಚಿಟ್ಟು ಪರೀಕ್ಷೆ ಬರೆಯಿರಿ’ : ನೀಟ್​ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ವಿಚಿತ್ರ ಸೂಚನೆ

ಇದನ್ನೂ ಓದಿ : Ranbir Kapoor-Alia Bhatt : ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರಾ ಆಲಿಯಾ ಭಟ್​:ಕುತೂಹಲ ಮೂಡಿಸಿದ ರಣಬೀರ್ ಹೇಳಿಕೆ

puneeth rajkumars twitter account got a verified badge again

RELATED ARTICLES

Most Popular