Presidential Polls 2022 : ರಾಷ್ಟ್ರಪತಿ ಚುನಾವಣೆಗೆ 99.18 ಪ್ರತಿಶತ ಮತದಾನ : ಜುಲೈ 21ರಂದು ಫಲಿತಾಂಶ

ದೆಹಲಿ : Presidential Polls 2022 : ದೇಶದ 15ನೇ ರಾಷ್ಟ್ರಪತಿ ಆಯ್ಕೆಗೆ ಇಂದು ನಡೆಸಲಾದ ಮತದಾನವು ಸಂಜೆ ಐದು ಗಂಟೆ ವೇಳೆಗೆ ಮುಕ್ತಾಯಗೊಂಡಿದೆ. ದೇಶದ ಎಲ್ಲಾ ಸಂಸದರು, ಶಾಸಕರು ವಿಪಕ್ಷಗಳ ಅಭ್ಯರ್ಥಿ ಯಶವಂತ್​ ಸಿನ್ಹಾ ಹಾಗೂ ಎನ್​ಡಿಎ ಅಭ್ಯರ್ಥಿ ದ್ರೌಪದಿ ಮರ್ಮು ಇಬ್ಬರಲ್ಲಿ ಒಬ್ಬರಿಗೆ ಮತ ಹಾಕಿದ್ದಾರೆ. ಈ ಚುನಾವಣೆಯಲ್ಲಿ ದ್ರೌಪದಿ ಮರ್ಮು ಗೆಲುವು ಬಹುತೇಕ ಪಕ್ಕಾ ಎನ್ನಲಾಗುತ್ತಿದ್ದು ಒಂದು ವೇಳೆ ಈ ಮಾತು ನಿಜವಾದಲ್ಲಿ ದೇಶದಲ್ಲಿ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಜನಾಂಗದ ನಾಯಕಿ ಹಾಗೂ ದೇಶದ ಎರಡನೇ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಲಿದ್ದಾರೆ.


ರಾಷ್ಟ್ರಪತಿ ಚುನಾವಣೆಯು ದೇಶಾದ್ಯಂತ ಅತ್ಯಂತ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ನಡೆದಿದೆ ಎಂದು ಮುಖ್ಯ ಚುನಾವಣಾಧಿಕಾರಿ ಪಿ.ಸಿ ಮೋದಿ ತಿಳಿಸಿದ್ದಾರೆ. ಕೆಲ ಕಾಂಗ್ರೆಸ್​ ಹಾಗೂ ಸಮಾಜವಾದಿ ಪಕ್ಷದ ಶಾಸಕರು ದ್ರೌಪದಿ ಮರ್ಮು ಪರವಾಗಿ ಮತ ಚಲಾಯಿಸುವ ಮೂಲಕ ಅಡ್ಡ ಮತದಾನ ಮಾಡಿದ್ದಾರೆ ಎಂದು ಹೇಳಲಾಗ್ತಿದೆ.


ರಾಷ್ಟ್ರಪತಿ ಚುನಾವಣೆಗೆ ಶೇಕಡಾ 99.18 ಪ್ರತಿಶತದಷ್ಟು ಮತದಾನವಾಗಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಚುನಾವಣಾ ಆಯೋಗ ಅನುಮತಿ ನೀಡಿದ 736 ಮತದಾರರಲ್ಲಿ( 727 ಸಂಸದರು ಹಾಗೂ 9 ಶಾಸಕರು) 730 (721 ಸಂಸದರು, 9 ಶಾಸಕರು) ಮತಚಲಾವಣೆ ಮಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ.


ಸುಮಾರು 4,800 ಚುನಾಯಿತ ಸಂಸದರು ಮತ್ತು ಶಾಸಕರು ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದರು. ಜುಲೈ 21 ರಂದು ಮತ ಎಣಿಕೆ ನಡೆಯಲಿದ್ದು ಅದೇ ದಿನ ರಾತ್ರಿ ಫಲಿತಾಂಶ ಹೊರ ಬೀಳಲಿದೆ, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.


ಕಳೆದ ತಿಂಗಳು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಹರಿಯಾಣ ಕಾಂಗ್ರೆಸ್ ಶಾಸಕ ಕುಲದೀಪ್ ಬಿಷ್ಣೋಯ್, ರಾಜ್ಯಸಭೆಯಂತೆಯೇ ಈ ಚುನಾವಣೆಯಲ್ಲೂ ನನ್ನ ಆತ್ಮಸಾಕ್ಷಿಯಂತೆ ಮತ ಚಲಾಯಿಸಿದ್ದೇನೆ ಎಂದು ಸುದ್ದಿಗಾರರಿಗೆ ತಿಳಿಸಿದರು.


ಪಕ್ಷದ ನಿಲುವನ್ನು ಧಿಕ್ಕರಿಸಿ ದ್ರೌಪದಿ ಮರ್ಮು ಅವರಿಗೆ ಮತ ಹಾಕಿದ್ದೇನೆ ಎಂದು ಸಮಾಜವಾದಿ ಹಿರಿಯ ಶಾಸಕ ಶಿವಪಾಲ್ ಯಾದವ್ ಹೇಳಿದ್ದಾರೆ . ಯಶವಂತ್ ಸಿನ್ಹಾ ಅವರು ಮುಲಾಯಂ ಸಿಂಗ್ ಯಾದವ್​​ರನ್ನು ಐಎಸ್‌ಐ ಏಜೆಂಟ್ ಎಂದು ಕರೆದಿದ್ದರು ಮತ್ತು ನಾವು ಅವರನ್ನು ಎಂದಿಗೂ ಬೆಂಬಲಿಸಲು ಸಾಧ್ಯವಿಲ್ಲ. ಹಾರ್ಡ್‌ಕೋರ್ ಎಸ್‌ಪಿ ನಾಯಕರು, ಮುಲಾಯಂ ಸಿಂಗ್ ಅವರ ತತ್ವಗಳನ್ನು ಅನುಸರಿಸುವವರು ಅಂತಹ ಆರೋಪಗಳನ್ನು ಮಾಡಿದ ಅಭ್ಯರ್ಥಿಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಯಾದವ್ ಸುದ್ದಿಗಾರರಿಗೆ ತಿಳಿಸಿದರು.


ಮತ್ತೊಬ್ಬ ಎಸ್‌ಪಿ ಶಾಸಕ, ಬರೇಲಿಯ ಸಮಾಜವಾದಿ ಪಕ್ಷದ ಶಾಸಕ ಶಹಜೀಲ್ ಇಸ್ಲಾಂ ಕೂಡ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದಾರೆ ಎಂದು ವರದಿಯಾಗಿದೆ.


ಇದಕ್ಕೂ ಮುನ್ನ, ಸಂಸದರು ಮತ್ತು ಶಾಸಕರು ತಮ್ಮ “ಒಳಗಿನ ಧ್ವನಿ”ಗೆ ಕಿವಿಗೊಟ್ಟು ಬೆಂಬಲಿಸುವಂತೆ ಯಶವಂತ್ ಸಿನ್ಹಾ ಮನವಿ ಮಾಡಿದರು. “ಈ ಚುನಾವಣೆಯು ಬಹಳ ಮಹತ್ವದ್ದಾಗಿದೆ ಏಕೆಂದರೆ ಇದು ಭಾರತದಲ್ಲಿ ಪ್ರಜಾಪ್ರಭುತ್ವ ಉಳಿಯುತ್ತದೆಯೇ ಅಥವಾ ನಿಧಾನವಾಗಿ ಕೊನೆಗೊಳ್ಳುತ್ತದೆಯೇ ಎಂಬ ದಿಕ್ಕನ್ನು ನಿರ್ಧರಿಸುತ್ತದೆ. ನಮಗೆ ಸಿಗುತ್ತಿರುವ ಸೂಚನೆಗಳು ನಾವು ಅದರ ಅಂತ್ಯದತ್ತ ಸಾಗುತ್ತಿದ್ದೇವೆ” ಎಂದು ಸಿನ್ಹಾ ಹೇಳಿದ್ದರು.

ಇದನ್ನು ಓದಿ : Ranbir Kapoor-Alia Bhatt : ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರಾ ಆಲಿಯಾ ಭಟ್​:ಕುತೂಹಲ ಮೂಡಿಸಿದ ರಣಬೀರ್ ಹೇಳಿಕೆ

ಇದನ್ನೂ ಓದಿ : Sourav Ganguly congratulated Hardik Pandya : ಇಂಗ್ಲೆಂಡ್ ನೆಲದಲ್ಲಿ ಸರಣಿ ಗೆಲ್ಲಿಸಿಕೊಟ್ಟ ‘’ಪಾಂಡು’’ಗೆ ವಿಶೇಷ ಅಭಿನಂದನೆ ತಿಳಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Presidential Polls 2022: Over 99% Turnout In Parliament, All Eyes Now On July 21 

Comments are closed.