ಬೆಂಗಳೂರು : ವರನಟ ದಿ.ಡಾ.ರಾಜ್ ಕುಮಾರ್ ಕುಟುಂಬ ಎಲ್ಲರಿಗೂ ಮಾದರಿ. ಎಲ್ಲದರಲ್ಲೂ ಒಂದು ಹೆಜ್ಜೆ ಮುಂದೆ ಅನ್ನುವಂತೆ ಪವರ್ ಸ್ಟಾರ್ ಪುನೀತ್ ರಾಜ್ ಇದೀಗ ಕೊರೊನಾ ಪೀಡಿತರಿಗೆ ಆಸರೆಯಾಗಿದ್ದಾರೆ. ಈ ಮೂಲಕ ದೊಡ್ಮನೆ ಕುಟುಂಬದ ದೊಡ್ಡತನ ಮೆರೆದಿದ್ದಾರೆ. ಕುಟುಂಬ ಮನ ಮೀಡಿದಿದೆ. ಸಿಎಂ ಬಿಎಎಸ್ ಯಡಿಯೂರಪ್ಪ ಭೇಟಿ ಮಾಡಿದ ನಟ ಪುನೀತ್ ರಾಜ್ ಕುಮಾರ್ ಸಿಎಂ ಪರಿಹಾರ ನಿಧಿಗೆ 50 ಲಕ್ಷದ ದೇಣಿಗೆಯ ಚೆಕ್ ನೀಡಿದ್ದಾರೆ.
ಕೊರೊನಾ ಸೋಂಕಿನಿಂದಾ ದೇಶವೇ ಸ್ತಬ್ಧವಾಗಿದೆ. ಕೋರೊನಾ ಪೀಡಿತರಿಗೆ ಹಲವು ಮಂದಿ ಸಹಾಯ ಹಸ್ತ ಚಾಚುತ್ತಿದ್ದಾರೆ. ಇದರಲ್ಲಿ ಡಾ.ರಾಜ್ ಕುಮಾರ್ ಕುಟುಂಬ ಕೂಡ ಹಿಂದೆ ಬಿದ್ದಿಲ್ಲ. ರಾಜ್ಯದಲ್ಲಿ ರಾಜ್ ಕುಮಾರ್ ಕುಟುಂಬ ದೊಡ್ಡಮನೆ ಅಂತಲೇ ಹೆಸರು ವಾಸಿಯಾಗಿದೆ. ಎಲ್ಲದರಲ್ಲೂ ಮುಂದಿರೋ ಕುಟುಂಬ ಬಡವರು, ಪೀಡಿತರ, ಸಂತ್ರಸ್ತರಿಗೆ ಸಹಾಯ ಮಾಡುತ್ತಲೇ ಬಂದಿದೆ. ಹಲವು ವರ್ಷಗಳಿಂದ ಬಡವರ ಪರ ನಿಲ್ಲುತ್ತಾ ಬಂದಿದೆ. ಈಗಲ್ಲೂ ಕೂಡ ಅದರ ಪರಂಪರೆ ಮುಂದುವರಿದಿದೆ. ರಾಜ್ ಕುಮಾರ್, ಪಾರ್ವತಮ್ಮ ನಂತರ ಪುತ್ರ ನಟ ಪುನೀತ್ ರಾಜ್ ಕುಮಾರ್ ಹೃದಯ ಮೀಡಿದಿದೆ. ಕೊರೊನಾ ಪೀಡಿತರ ಚಿಕಿತ್ಸೆಗಾಗಿ 50 ಲಕ್ಷ ದೇಣಿಗೆಯ ಚೆಕ್ ಅನ್ನ ಇಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನೀಡಿದ್ದಾರೆ. ಕೊರೊನಾ ಸೋಂಕಿತರಿಗಾಗಿ ನಿಜವಾಗಲ್ಲೂ ದೊಡ್ಡಮನೆ ಕುಟುಂಬದ ಹೃದಯ ಮಿಡಿಯುತ್ತದೇ ಎಂಬುದಕ್ಕೆ ಇದೇ ಸಾಕ್ಷಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹಾಯ ಹಸ್ತ ಹಲವರಿಗೆ ಪ್ರೇರಣೆಯಾಗಲಿ ಅನ್ನೋದೆ ನಮ್ಮ ಆಶಯ.
ದೊಡ್ಮನೆ ದೊಡ್ಡತನ : ಕೊರೊನಾ ಪೀಡಿತರ ನಿಧಿಗೆ 50 ಲಕ್ಷ ದೇಣಿಗೆ ಕೊಟ್ಟ ಪವರ್ ಸ್ಟಾರ್
- Advertisement -