ವಿವಾಹ ವಿಚ್ಛೇಧನದ ಜೊತೆ ನಾನು ಸತ್ತೇ ಹೋಗುತ್ತೇನೆ ಎಂದುಕೊಂಡಿದ್ದೇ ಎಂಬ ಎಮೋಶನಲ್ ಡೈಲಾಗ್ ಹೊಡೆದಿದ್ದ ತೆಲುಗಿನ ನಟಿ ಸಮಂತಾ ಫಿನಿಕ್ಸ್ ಪಕ್ಷಿ ಯಂತೆ ಮೇಲೆದ್ದು ಬಂದಿದ್ದಾರೆ. ವಿಚ್ಛೇಧನದ ಬಳಿಕ ಬೋಲ್ಡ್ ಬದುಕು ತಮ್ಮದಾಗಿಸಿಕೊಂಡಿರೋ ಸಮಂತಾ, ಟ್ರೋಲ್, ಗಾಸಿಪ್ ಗಳಿಗೆ ಕಿವಿಗೂಡದೇ ಕೆರಿಯರ್ ನಲ್ಲಿ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ ಈಗ ಅಭಿಮಾನಿಗಳಿಗೆ ತಮ್ಮ ಲೈಫ್ ನ ಲೇಟೆಸ್ಟ್ ಅಪ್ಡೇಟ್ ಕೊಟ್ಟು ಸಪ್ರೈಸ್ (Pushpa Samantha Good News) ಮಾಡಿದ್ದಾರೆ.
ಸಮಂತಾಗೆ ವಿಚ್ಛೇಧನ ಕಹಿ ಬಳಿಕ ಎಲ್ಲವೂ ಸಿಹಿ ಸಿಹಿ ಸುದ್ದಿಗಳೇ ಸಿಗ್ತಿವೆ. ಡಿವೋರ್ಸ್ ಬಳಿಕ ಸಮಂತಾ ಹಾಲಿವುಡ್ ಸಿನಿಮಾಗೆ ಸಹಿಮಾಡಿದ್ದರು. ಕಾದಂಬರಿ ಆಧಾರಿತ ಹಾಲಿವುಡ್ ಸಿನಿಮಾಗೆ ಹಾರಿದ್ದ ಸಮಂತಾಗೆ ಟಾಲಿವುಡ್ ನಲ್ಲೂ ಸಖತ್ ಆಫರ್ ಸಿಕ್ಕಿತ್ತು. ಟಾಲಿವುಡ್ ನ ಐಕಾನ್ ಸ್ಟಾರ್ ಅಲ್ಲೂ ಅರ್ಜುನ್ ನಟನೆಯ ಬಹುನೀರಿಕ್ಷಿತ ಸಿನಿಮಾ ಪುಷ್ಪದಲ್ಲಿ ಸಮಂತಾಗೆ ಐಟಂ ಸಾಂಗ್ ಆಫರ್ ಬಂದಿತ್ತು. ಅದಾಗಲೇ ಮಾದಕಮೈಮಾಟದಿಂದ ಸೆಳೆದಿದ್ದ ಸಮಂತಾ ಈ ಅವಕಾಶವನ್ನು ತಮ್ಮದಾಗಿಸಿಕೊಂಡಿದ್ದು ಊ ಅಂಟಾವಾ ಮಾವಾ ಊಹೂಅಂಟಾವಾ ಮಾವಾ ಎಂದು ಹಾಡಿ ಮೈಬಳುಕಿಸಿ ಕುಣಿದಿದ್ದರು.
ಪುಷ್ಪ ಸಿನಿಮಾ ರಿಲೀಸ್ ಆಗಿರೋ ಒಂದೇ ವಾರಕ್ಕೆ ಭಾರತ ಹಾಗೂ ವಿಶ್ವದಾದ್ಯಂತ ಸೇರಿ ಒಟ್ಟು 299 ಕೋಟಿ ಹಣ ಗಳಿಸಿದೆ. ಮಾತ್ರವಲ್ಲ ಸಮಂತಾ ನೃತ್ಯಕ್ಕೆ ಮನಸೋತ ಪಡ್ಡೆಗಳು ಥಿಯೇಟರ್ ನಲ್ಲೇ ಒನ್ಸ್ ಮೋರ್ ಎಂದು ಕಿರುಚಿದ್ದಾರೆ. ದೇವಿಶ್ರೀ ಪ್ರಸಾದ ಸಂಗೀತವಿರುವ ಈ ಹಾಡು ಸಖತ್ ವೀವ್ಸ್ ಪಡೆದುಕೊಂಡಿದೆ. ಸಿನಿಮಾ ಜೊತೆ ಹಾಡು ಗೆದ್ದಿರೋದು ಸಮಂತಾ ಖುಷಿಗೆ ಕಾರಣವಾಗಿದೆ. ಇದರ ಜೊತೆಗೆ ಆಭಿಮಾನಿಗಳಿಗೆ ಸಮಂತಾ ಮತ್ತೊಂದು ಸಿಹಿಸುದ್ದಿ ಕೊಟ್ಟಿದ್ದಾರೆ.
ಕ್ರಿಸ್ಮಸ್ ಹಬ್ಬದಂದು ಕ್ರಿಸ್ಮಸ್ ಟ್ರೀ ಜೊತೆ ಹಾರ್ಟ್ ಶೇಪ್ ಜೊತೆ ಮೇರಿ ಕ್ರಿಸ್ಮಸ್ ಎಂದು ವಿಶ್ ಮಾಡಿರೋ ಸಮಂತಾ ಬಳಿಕ ತಾವು ಫಿಟನೆಸ್ ಗಾಗಿ ಜಿಮ್ ಗೆ ಜಾಯಿನ್ ಆಗ್ತಿರೋ ಸಂಗತಿಯನ್ನು ರಿವೀಲ್ ಮಾಡಿದ್ದಾರೆ. ಮಾತ್ರವಲ್ಲ ಇನ್ ಸ್ಟಾ ಗ್ರಾಂ ಅಕೌಂಟ್ ನಲ್ಲಿ ತಮ್ಮ ವರ್ಕೌಟ್ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. ಸಮಂತಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೋಬ್ಬರಿ 20.5 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಸಮಂತಾ ಪತಿ ಚೈತನ್ಯ ಅಕ್ಕಿನೇನಿಯಿಂದ ದೂರವಾಗುತ್ತಿದ್ದಂತೆ ಸಾಕಷ್ಟು ಟ್ರೋಲ್ ಎದುರಿಸಿದ್ದು, ಪರಿಹಾರದ ಹಣಕ್ಕಾಗಿ ಡಿವೋರ್ಸ್ ಪಡೆದಿದ್ದಾರೆ ಎಂಬುದು ಸೇರಿದಂತೆ ಹಲವು ಕಮೆಂಟ್ ಗಳನ್ನು ಸಮಂತಾ ಎದುರಿಸಿದ್ದರು. ಆದರೆ ಈಗ ಎಲ್ಲವನ್ನು ಬಿಟ್ಟು ಕೆರಿಯರ್ ಕಡೆ ಪೋಕಸ್ ಮಾಡ್ತಿರೋ ಸಮಂತಾ ಮತ್ತಷ್ಟು ಬೋಲ್ಡ್ ಹಾಗೂ ಬ್ಯೂಟಿಫುಲ್ ಲುಕ್ ಗಾಗಿ ಜಿಮ್ ಮೊರೆ ಹೋಗಿದ್ದಾರೆ.
ಇದನ್ನೂ ಓದಿ : ಆ ಒಂದು ದೃಶ್ಯವೇ ನಟಿ ಜೀವನಕ್ಕೆ ಮುಳುವಾಯ್ತಾ?! ಸಮಂತಾ ಡಿವೋರ್ಸ್, ಅಭಿಮಾನಿಗಳ ಕುತೂಹಲ!
ಇದನ್ನೂ ಓದಿ : Samantha Bold Answer : ಸಮಂತಾ ಬೋಲ್ಡ್ ಲುಕ್ ಗೆ ಸಖತ್ ಟ್ರೋಲ್: ಸೋಷಿಯಲ್ ಮೀಡಿಯಾದಲ್ಲಿ ನಟಿ ಬೋಲ್ಡ್ ಆನ್ಸರ್
( Pushpa Movie success Samantha give Good News)