Ahmedabad IPL 2022 : ಗ್ಯಾರಿ ಕ್ರಿಸ್ಟನ್, ಆಶಿಶ್ ನೆಹ್ರಾ, ವಿಕ್ರಮ್ ಸೋಲಂಕಿ ಸೆಳೆಯಲು ಮುಂದಾದ ಅಹಮದಾಬಾದ್‌

ಅಹಮದಾಬಾದ್‌ : ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಹೊಸ ತಂಡದ ಅಹಮದಾಬಾದ್ ಫ್ರಾಂಚೈಸಿ (Ahmedabad IPL 2022) ಐಪಿಎಲ್ 2022ಕ್ಕೆ ಸಿದ್ದತೆ ನಡೆಸುತ್ತಿದೆ. ಮೆಗಾ ಹರಾಜಿಗೂ ಮೊದಲು ಕೋಚಿಂಗ್‌ ಸ್ಟಾಫ್‌ ನೇಮಕಕ್ಕೆ ಮುಂದಾಗಿದೆ. ಈಗಾಗಲೇ ಲಕ್ನೋ ತಂಡ ಕೋಚಿಂಗ್‌ ಸ್ಟಾಫ್‌ ಘೋಷಣೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಅಹಮದಾಬಾದ್‌ ತಂಡ ಟೀಂ ಇಂಡಿಯಾದ ಮಾಜಿ ಕೋಚ್‌ ಗ್ಯಾರಿ ಕರ್ಸ್ಟನ್‌, ವೇಗದ ಬೌಲರ್‌ ಆಶೀಶ್‌ ನೆಹ್ರಾ, ಹಾಗೂ ವಿಕ್ರಂ ಸೋಲಂಕಿ ಅವರನ್ನು ಸೆಳೆಯಲು ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಾಂಚೈಸಿ ಮಾತುಕತೆ ನಡೆಸುತ್ತಿದೆ.

ಭಾರತದ ಮಾಜಿ ವೇಗದ ಬೌಲರ್ ಮತ್ತು RCB ಆಟಗಾರ ಆಶಿಶ್ ನೆಹ್ರಾ ಹಾಗೂ ಟೀಂ ಇಂಡಿಯಾದ ಮಾಜಿ ಕೋಚ್‌ ಗ್ಯಾರಿ ಕರ್ಸ್ಟನ್ ಇಬ್ಬರೂ ಕೂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಭಾಗವಾಗಿದ್ದಾರೆ. 28 ವರ್ಷಗಳ ನಂತರ (2011 ರಲ್ಲಿ) ಭಾರತ ಏಕದಿನ ವಿಶ್ವಕಪ್ ಎತ್ತಿಹಿಡಿದಾಗ ಕರ್ಸ್ಟನ್ ಟೀಂ ಇಂಡಿಯಾದ ಕೋಚ್‌ ಆಗಿದ್ದರು. ಅಲ್ಲದೇ ಆಶಿಶ್‌ ನೆಹ್ರಾ ಅವರು ಟೀಂ ಇಂಡಿಯಾದ ಸದಸ್ಯರಾಗಿದ್ದರು.

ವಿಶ್ವಶ್ರೇಷ್ಟ ಆಟಗಾರ ಎನಿಸಿಕೊಂಡಿರುವ ಗ್ಯಾರಿ ಕ್ರರ್ಸ್ಟನ್‌ ಕೋಚ್‌ ಆಗಿದ್ದ ಅವಧಿಯಲ್ಲಿ ಟೀಂ ಇಂಡಿಯಾ ಅತ್ಯುತ್ತಮ ಸಾಧನೆಯನ್ನು ಮಾಡಿತ್ತು. 2011 ರ ವಿಶ್ವಕಪ್ ವಿಜೇತ ತಂಡದ ಚುಕ್ಕಾಣಿ ಹಿಡಿದಿದ್ದ ಕರ್ಸ್ಟನ್ ವಿಶ್ವಕಪ್‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೀಂ ಇಂಡಿಯಾದ ಕೋಚ್‌ ಹುದ್ದೆ ತೊರೆದ ನಂತರದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಕಾರಣದಿಂದಲೇ ಅಹಮದಾಬಾದ್‌ ತಂಡ ಇದೀಗ ಗ್ಯಾರಿ ಕ್ರರ್ಸ್ಟನ್‌ ಅವರನ್ನು ಸೆಳೆಯಲು ಮುಂದಾಗಿದೆ.

ಬೌಲಿಂಗ್‌ ವಿಭಾಗದ ಕೋಚ್‌ ಆಗಿ ಆಶಿಶ್‌ ನೆಹ್ರಾ ಅವರನ್ನು ಸೆಳೆಯುವ ಸಾಧ್ಯತೆಯಿದೆ. ಬಹು ವರ್ಷಗಳ ಕಾಲ ಟೀಂ ಇಂಡಿಯಾವನ್ನು ಪ್ರತಿನಿಧಿಸಿದ್ದ ಆಶಿಶ್‌ ನೆಹ್ರಾ ವಿಶ್ವದ ಅತ್ಯುತಮ ಬೌಲರ್‌ ಆಗಿ ಹೆಸರು ಮಾಡಿದ್ದರು. ಆರ್‌ಸಿಬಿ ತಂಡದಲ್ಲಿಯೂ ತಮ್ಮ ತಾಕತ್ತು ಪ್ರದರ್ಶಿಸಿದ್ದಾರೆ. ಜೊತೆಗೆ ವಿಕ್ರಂ ಸೋಲಂಕಿ ಅವರನ್ನು ತಂಡಕ್ಕೆ ಸೆಳೆಯುವ ಸಾಧ್ಯತೆ ಇದೆ. ಆದರೆ ಸಿವಿಸಿ ಕ್ಯಾಪಿಟಲ್ಸ್‌ ತಂಡ ಎಲ್ಲಾ ಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದೆ. ಆದರೆ ಬಿಸಿಸಿಐ ಮಾತ್ರ ಇನ್ನೂ ತಂಡದ ಮಾಲೀಕರಿಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿಲ್ಲ.

ಇದನ್ನೂ ಓದಿ : ಲಕ್ನೋ ತಂಡದಲ್ಲಿ ರಾಹುಲ್, ರಶೀದ್ ಖಾನ್, ಸ್ಟೀವ್ ಸ್ಮಿತ್ ಮತ್ತು ಸುರೇಶ್ ರೈನಾ

ಇದನ್ನೂ ಓದಿ : ಅಹಮದಾಬಾದ್ ಸೇರ್ತಾರೆ ಶ್ರೇಯಸ್ ಅಯ್ಯರ್, ಡೇವಿಡ್ ವಾರ್ನರ್, ಹಾರ್ದಿಕ್‌ ಪಾಂಡ್ಯ

(Ahmedabad Select Gary Kristen, Ashish Nehra, Vikram Solanki for IPL 2022)

Comments are closed.