ಭಾನುವಾರ, ಜೂನ್ 15, 2025
HomeCinemaPushpa Srivalli Sarees : ಮಾರುಕಟ್ಟೆಗೆ ಲಗ್ಗೆ ಇಟ್ಟ ಪುಪ್ಫಾ ಶ್ರೀವಲ್ಲಿ ಸೀರೆ ; ಉತ್ತರ...

Pushpa Srivalli Sarees : ಮಾರುಕಟ್ಟೆಗೆ ಲಗ್ಗೆ ಇಟ್ಟ ಪುಪ್ಫಾ ಶ್ರೀವಲ್ಲಿ ಸೀರೆ ; ಉತ್ತರ ಭಾರತದಲ್ಲೂ ಅಲ್ಲೂ ಅರ್ಜುನ್ ಹವಾ

- Advertisement -

ಅಲ್ಲು ಅರ್ಜುನ್ ಅಭಿನಯದ ಪುಷ್ಪ ಚಿತ್ರ ಈಗಾಗಲೇ ವಿಶ್ವದಾದ್ಯಂತ ಕ್ರೇಜ್ ಹುಟ್ಟಿಸಿರೋದು ಗೊತ್ತಿರೋ ವಿಚಾರ . ಅದರ ಹಾಡುಗಳಂತು ಸೋಶಿಯಲ್ ಮೀಡಿಯಾ ದಲ್ಲಿ ಧೂಳೆಬ್ಬಿಸಿದೆ. ಚಿತ್ರ ಕೂಡಾ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಮಾಡ್ತಿದೆ. ಇದೀಗ ಇದರ ಕ್ರೇಸ್ ಬಟ್ಟೆ ಉದ್ಯಮದಲ್ಲೂ (Pushpa Srivalli Sarees) ಸದ್ದು ಮಾಡ್ತಿದೆ.

ಪುಷ್ಪ ಚಿತ್ರದ ಪೋಸ್ಟರ್ ಹೊಂದಿರುವ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದಕ್ಕೆ ಉತ್ತಮ ರೆಸ್ಪಾನ್ಸ್ ಕೂಡಾ ಸಿಕ್ಕಿದೆ. ಪುಷ್ಪ ಸೀರೆಗಳನ್ನು ಕೊಳ್ಳುವರು ಕೂಡಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಾರೆ. ಸೀರೆಯಲ್ಲಿ ಪುಷ್ಟ ಚಿತ್ರದ ಪೋಟೋಗಳನ ಪ್ರಿಂಟ್ ಮಾಡಿ ಸೀರೆಗಳನ್ನು ತಯಾರಿಸಲಾಗಿದೆ. ಅಲ್ಲೂ ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣಾ ಚಿತ್ರ ಇರುವ ಸೀರೆಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ . ಗುಜರಾತ್ ನ ಸೂರತ್ ನ ಬಟ್ಟೆ ಉದ್ಯಮಿ , ಚರಣ್ ಜೀತ್ ಕ್ರಿಯೇಷನ್ ಮಾಲಿಕ ಚರಣ್ ಪಾಲ್ ಈ ಸೀರೆಯನ್ನು ವಿನ್ಯಾಸ ಮಾಡಿದ್ದಾರೆ.

ಸೂರತ್ ನ ಬಟ್ಟೆ ವ್ಯಾಪಾರದಲ್ಲಿ ಚರಣ್ ಜೀತ್ ಕ್ರೀಯೇಷನ್ ಒಳ್ಳೆ ಮಾರುಕಟ್ಟೆಯನ್ನು ಹೊಂದಿದೆ. ಹೀಗಾಗಿ ಉತ್ತರ ಭಾರತದಲ್ಲೂ ಸೀರೆಗಳಿಗೆ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಇನ್ನು ಈ ರೀತಿಯ ಸೀರೆ ತಯಾರಿಕೆಗೆ ಕಾರಣ ಚರಣ್ ಪಾಲ್. ಪುಷ್ಪಾ ಚಿತ್ರ ನೋಡಿದ್ದ ಚರಣ್ ಪಾಲ್ ಸಿಂಗ್ ಗೆ ಚಿತ್ರ ಬಹಳ ಮೆಚ್ಚುಗೆ ಆಯಿತು. ಹೀಗಾಗಿ ಅವರು ಚಿತ್ರದ ಪೋಸ್ಟರ್ ಬಳಸಿ ಸೀರೆ ತಯಾರಿಸಲು ಬಯಸಿದ್ರು. ಅವರು ಹೇಳುವ ಪ್ರಕಾರ ಉತ್ತರ ಪ್ರದೇಶ , ಛತ್ತೀಸ್ ಘಡ, ಮಹಾರಾಷ್ಟ್ರ , ರಾಜಸ್ಥಾನ್ ಸೇರಿದಂತೆ ದೇಶಾದ್ಯಂತ ಈ ಸೀರೆಗೆ ಭಾರಿ ಬೇಡಿಕೆ ಇದೆ. ಇನ್ನು ಸಾಮಾಜಿಕ ಜಾಲ ತಾಣದಿಂದಾಗಿ ಇದರ ಬೇಡಿಕೆ ಇನಷ್ಟು ಹೆಚ್ಚಿದೆ.

ಇನ್ನು ಈ ರೀತಿ ಸೀರೆಗಳಲ್ಲಿ ಚಿತ್ರಗಳನ್ನು ಬಳಸಿರೋದು ಇದೇ ಮೊದಲಲ್ಲ. ಈ ಮೊದಲು ಮೋದಿ, ಯೋಗಿ ಆದಿತ್ಯ ನಾಥ್ ಮುಂತಾದವರ 3ಡಿ ಚಿತ್ರಗಳನ್ನು ಹೊಂದಿರೋ ಸೀರೆ ಗಳನ್ನು ಮಾರುಕಟ್ಟೆಗೆ ಬಿಡಲಾಗಿತ್ತು. ಅದಕ್ಕೂ ಉತ್ತಮ ಬೇಡಿಕೆ ಇತ್ತು ಸದ್ಯ ಸೂರತ್ ಬಟ್ಟೆ ಮಾರುಕಟ್ಟೆಯಲ್ಲಿ ಪುಷ್ಪಾ ಹವಾ ಜೋರಾಗಿದ್ದು, ದೇಶಾದ್ಯಂತ ಬಟ್ಟೆ ವ್ಯಾಪಾರಿಗಳಿಂದ ಈ ಸೀರೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಇದನ್ನೂ ಓದಿ : ಮೊದಲ ಸಿನಿಮಾದಲ್ಲೇ ಮುತ್ತಿನ ಮಳೆ : ಧಿರೇನ್- ಮಾನ್ವಿತಾ ಹಾಟ್ ಅವತಾರ ರಿಲೀಸ್

ಇದನ್ನೂ ಓದಿ : Ajay Devgn : ಮತ್ತೆ ತೆರೆಗೆ ಬರುತ್ತಾ ಸಿಂಗಂ : ಅಜಯ್ ದೇವಗನ್ ಕೊಟ್ಟ ಸಿಹಿಸುದ್ದಿ ಏನು ಗೊತ್ತಾ?!

(Pushpa and Srivalli Sarees Came in the market Women Gave such A Reaction When They saw)

Vandana kommunje | ವಂದನಾ ಕೊಮ್ಮುಂಜೆ
Vandana Kommunje Senior Content Writer. Working in more than 10 Years in Kannada Famous News Channesl. Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular