Teenage Love Story : ರಾಜ್ಯದಲ್ಲಿ ಹೆಚ್ಚುತ್ತಿದೆ ಟೀನೇಜ್ ಲವ್ ಸ್ಟೋರಿ : ಪೋಷಕರೇ ನಿಮ್ಮ ಮಕ್ಕಳ ಮೇಲೆ ಕಣ್ಣಿಡಿ ಎಂದ ಮಹಿಳಾ ಆಯೋಗ

ಬೆಂಗಳೂರು : ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಸಂಘರ್ಷ ತಾರಕಕ್ಕೇರಿರುವ ಬೆನ್ನಲ್ಲೇ, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರ ಕುರಿತು ಆತಂಕಕಾರಿ ಸಂಗತಿ ಹೊರಬಿದ್ದಿದೆ. ರಾಜ್ಯದಲ್ಲಿ ಹದಿಹರೆಯದ ಪ್ರೇಮ ಪ್ರಕರಣಗಳು (Teenage Love Story) ಹಾಗೂ ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸ ಹೋಗುತ್ತಿರುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿದೆ ಎಂಬ ಆತಂಕಕಾರಿ ಸಂಗತಿಯೊಂದನ್ನು ಮಹಿಳಾ ಆಯೋಗ ಬಹಿರಂಗಗೊಳಿಸಿದೆ.

ಅಲ್ಲದೇ ಪೋಷಕರೇ ನಿಮ್ಮ ಮಕ್ಕಳು ಹದಿವಯಸ್ಸಿನವರಾಗಿದ್ದು, ನಿಧಾನಕ್ಕೆ ಪಠ್ಯಚಟುವಟಿಕೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿದ್ದರೇ ಅವರ ಬಗ್ಗೆ ಹೆಚ್ಚಿನ ನಿಗಾವಹಿಸಿ ಎಂದು ಮಹಿಳಾ ಆಯೋಗ ಮನವಿ ಮಾಡಿದೆ. ಮಹಿಳಾ ಆಯೋಗ ನೀಡುತ್ತಿರುವ ಆಘಾತಕಾರಿ ಅಂಕಿಅಂಶದ ಪ್ರಕಾರ ಹದಿವಯಸ್ಸಿನ ಹೆಣ್ಣುಮಕ್ಕಳು ಇತ್ತೀಚಿಗೆ ಹೆಚ್ಚು ಪ್ರೇಮ ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಒಂದು ವರ್ಷ,ಎರಡು ವರ್ಷದ ಕಾಲ ಪ್ರೀತಿ ಪ್ರೇಮ ಎಂದು ಓಡಾಡುವ ವಿದ್ಯಾರ್ಥಿನಿಯರು ಬಳಿಕ ಯಾವುದೋ ಒಂದು ಕಾರಣದಿಂದ ಪ್ರೇಮಿಯಿಂದ ದೂರವಾಗಿ ಮಾನಸಿಕ ಕಿನ್ನತೆ, ಪ್ರೇಮಿಯಿಂದ ಕಿರುಕುಳ ಅನುಭವಿಸುತ್ತಿದ್ದಾರೆ.

ಇದುವರೆಗೂ ಈ ರೀತಿಯ ಶಾಲಾ ಕಾಲೇಜು ವಿದ್ಯಾರ್ಥಿನಿಯರ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದಲ್ಲಿ ಒಟ್ಟು ೬೭ ಪ್ರಕರಣಗಳು ದಾಖಲಾಗಿವೆ. ಇನ್ನು‌ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ೧೦೦ ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ಮುಖ್ಯವಾಗಿ ಸೋಷಿಯಲ್ ಮೀಡಿಯಾಗಳು ವಿದ್ಯಾರ್ಥಿ,ವಿದ್ಯಾರ್ಥಿನಿಯರ ಮನಸ್ಸು ಹದಗೆಡಿಸಲು ಪ್ರಮುಖ ಅಸ್ತ್ರವಾಗುತ್ತಿದೆ. ಇನ್ ಸ್ಟಾಗ್ರಾಂ, ಫೇಸ್ ಬುಕ್,ಟ್ವೀಟರ್ ಸೇರಿದಂತೆ ಸೋಷಿಯಲ್ ಮೀಡಿಯಾಗಳ ಪ್ರಭಾವದಿಂದ ವಿದ್ಯಾರ್ಥಿನಿಯರು ಬಹುಬೇಗ ಪ್ರೀತಿ,ಪ್ರೇಮದ ಬಲೆಗೆ ಸಿಲುಕುತ್ತಿದ್ದಾರೆ. ಬಳಿಕ ಪ್ರೀತಿ ಪ್ರೇಮ ನಿಭಾಯಿಸಲು ಸಾಧ್ಯವಾಗದೇ ಅಥವಾ ಲವ್ ಫೆಲ್ಯೂರ್ ಆದಾಗ ಖಿನ್ನತೆಗೆ ಜಾರುತ್ತಿದ್ದಾರೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಮಾಹಿತಿ ನೀಡಿದ್ದಾರೆ ‌

ಈ ರೀತಿಯ ಪ್ರಕರಣಗಳು ಹೆಚ್ಚಾಗಿ ವರದಿಯಾಗ್ತಿರೋದರಿಂದ ಕಳವಳ ವ್ಯಕ್ತಪಡಿಸಿರುವ ನಾಯ್ಡು, ಪೋಷಕರು ಮಕ್ಕಳ ಚಟುವಟಿಕೆಗಳ ಬಗ್ಗೆ ಗಮನ ಹರಿಸುವಂತೆ ಹಾಗೂ ವಿದ್ಯಾರ್ಥಿನಿಯರ ಸೋಷಿಯಲ್ ಮೀಡಿಯಾ ಅಕೌಂಟ್ ಗಳ ಬಗ್ಗೆಯೂ ಕಾಳಜಿ ವಹಿಸುವಂತೆ ಪೋಷಕರಿಗೆ ಮನವಿ ಮಾಡಿದ್ದಾರೆ. ಅಲ್ಲದೇ ಈ ರೀತಿಯ ಪ್ರಕರಣಗಳ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯದ ಶಾಲಾ ಕಾಲೇಜುಗಳಲ್ಲಿ ಉಪನ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮ ರೂಪಿಸಲು ಮಹಿಳಾ ಆಯೋಗ ಸಿದ್ಧತೆ ನಡೆಸಿದೆ. ಅಲ್ಲದೇ ಈ ರೀತಿಯ ಪ್ರಕರಣದಲ್ಲಿ ನೊಂದವರಿಗೆ ಸೂಕ್ತ ಕೌನ್ಸಲಿಂಗ್ ಹಾಗೂ ಮಾರ್ಗದರ್ಶನ ನೀಡಲು ಮಹಿಳಾ ಆಯೋಗ ಯೋಜನೆ ರೂಪಿಸುತ್ತಿದೆ.

ಇದನ್ನೂ ಓದಿ : CA Articleship: ಸಿಎ ಆರ್ಟಿಕಲ್‌ಶಿಪ್; ಭಾರತದ ಬಹು ಬೇಡಿಕೆಯ ಕೋರ್ಸ್ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ

ಇದನ್ನೂ ಓದಿ : Degree Exams Postpone : ಪದವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ

(hiked State Teenage Love Story, Karnataka women commission warning)

Comments are closed.