ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಸರ್ಜಾ ಮುದ್ದಿನ ಮಗ ರಾಯನ್ ಸರ್ಜಾ ಹುಟ್ಟುಹಬ್ಬ ಅದ್ದೂರಿಯಾಗಿಯೇ ನಡೆದಿದೆ. ಸಿಂಬ ಕಲ್ಪನೆಯಲ್ಲಿ ನಡೆದ ಹುಟ್ಟು ಹಬ್ಬಕ್ಕೆ ಅತ್ಯಾಪ್ತರನ್ನು ಮಾತ್ರವೇ ಆಹ್ವಾನಿಸಲಾಗಿತ್ತು.
ಚಿರು ಮೇಘನಾ ಕನಸಿನ ಕೂಸು ರಾಯನ್ ರಾಜ್ ಸರ್ಜಾ ಮೊದಲ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲಾಗಿತ್ತು. ರಾಯನ್ ರಾಜ್ ಸರ್ಜಾ ಅವರನ್ನು ಎಲ್ಲರೂ ಸಿಂಬ ಅಂತಾನೆ ಕರೆಯುತ್ತಾರೆ ಅದೇ ಕಾರಣಕ್ಕೆ ಮೊದಲ ಹುಟ್ಟುಹಬ್ಬದ ದಿನದಂದು ಸಿಂಬ ಕಲ್ಪನೆಯಲ್ಲಿಯೇ ಅಲಂಕರಿಸಲಾಗಿತ್ತು.
ರಾಯನ್ ಸರ್ಜಾ ಹುಟ್ಟುಹಬ್ಬವನ್ನು ಮೇಘನಾ ತಮ್ಮಿಷ್ಟದಂತೆ ಅದ್ದೂರಿಯಾಗಿಯೇ ಆಚರಿಸಿದ್ದಾರೆ. ಚಿರು ಸ್ನೇಹಿತರಾರ ಪ್ರಜ್ವಲ್ ದೇವರಾಜ್, ರಾಗಿಣಿ ಪ್ರಜ್ವಲ್, ಪನ್ನಾಗಭರಣ ಹಾಗೂ ನಟಿ ಸುಧಾರಾಣಿ ಸೇರಿದಂತೆ ಮೇಘನಾ ರಾಜ್ ಸ್ನೇಹಿತರ ಭಾಗಿಯಾಗಿದ್ದರು.
ಅಜ್ಜಿ ಪ್ರಮೀಳಾ ಜೋಷಾಯ್ ಹಾಗೂ ಅಜ್ಜ ಸುಂದರ್ ರಾಜ್ ಮೊಮ್ಮಗನಿಗೆ ವಿಶಿಷ್ಟ ಗಿಫ್ಟ್ ಆಗಿ ಹುಟ್ಟು ಹಬ್ಬವನ್ನು ಆಚರಿಸಲಾಗಿದೆ. ದೊಡ್ಡವನಾದ ಮೇಲೆ ರಾಯನ್ ತನ್ನು ಮೊದಲ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಿಲ್ಲ ಅಂತಾ ಅಂದುಕೊಳ್ಳಬಾರದು. ಅದಕ್ಕಾಗಿ ಅದ್ದೂರಿಯಾಗಿಯೇ ಆಚರಿಸಿದ್ದೇವೆ ಎಂದು ಮೇಘನಾ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
The idea was to be royal as it was Meghana’s son Rayaan Raj Sarja birthday