ಭಾನುವಾರ, ಏಪ್ರಿಲ್ 27, 2025
HomeCinemaRachitha Ram Judge : ಕಿರುತೆರೆ ರಿಯಾಲಿಟಿ ಶೋದಲ್ಲಿ ರಚಿತಾರಾಮ್

Rachitha Ram Judge : ಕಿರುತೆರೆ ರಿಯಾಲಿಟಿ ಶೋದಲ್ಲಿ ರಚಿತಾರಾಮ್

- Advertisement -

ಸ್ಯಾಂಡಲ್ ವುಡ್ ನ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಹಿರಿ ತೆರೆಯಲ್ಲಿ ಮಿಂಚುತ್ತಲೇ ರಚಿತಾರಾಮ್ ಮತ್ತೊಮ್ಮೆ ಕಿರುತೆರೆಗೂ ಲಗ್ಗೆ ಇಟ್ಟಿದ್ದು ಕನ್ನಡದ ಮನೋರಂಜನೆಯ ಹೆಗ್ಗುರುತಿನಂತೆ ಬೆಳೆಯುತ್ತಿರೋ ಝೀ ಕನ್ನಡ (ZEE Kannada) ವಾಹಿನಿಯಲ್ಲಿ ಇನ್ಮುಂದೆ ಪ್ರತಿವಾರ ರಚಿತಾರಾಮ್ (Rachitha Ram Judge) ಕಾಣಿಸಿಕೊಳ್ಳಲಿದ್ದಾರಂತೆ.

ಹೌದು ರಚಿತಾರಾಮ್ ನಟಿ ಸ್ಥಾನದಿಂದ ಈಗ ಪ್ರಮೋಶನ್ ಪಡೆದಿದ್ದು ನಿರ್ಣಾಯಕಿಯಾಗಿ ಶೋವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಝೀ ಕನ್ನಡ ವಾಹಿನಿಯಲ್ಲಿ ಸದ್ಯದಲ್ಲೇ ಶುರುವಾಗಲಿರುವ ಡ್ರಾಮಾ ಜ್ಯೂನಿಯರ್ಸ್ ಸೀಸನ್ ನಾಲ್ಕರಲ್ಲಿ ರಚಿತಾರಾಮ್ ಜಡ್ಜ್ ಸ್ಥಾನ ಅಲಂಕರಿಸಲಿದ್ದಾರಂತೆ‌. ಕಳೆದ ಮೂರು ಡ್ರಾಮಾ ಜ್ಯೂನಿಯರ್ ಸೀಸನ್ ಗಳಲ್ಲೂ ಹಿರಿಯ ನಟಿ ಲಕ್ಷ್ಮೀ, ಮುಖ್ಯಮಂತ್ರಿ ಚಂದ್ರು ಹಾಗೂ ವಿಜಯ್ ರಾಘವೇಂದ್ರ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು. ಆದರೆ ಈ ಸೀಸನ್ ನಲ್ಲಿ ಮೂರು ನಿರ್ಣಾಯಕರು ಹೊಸಮುಖ ಗಳಿರಲಿದ್ದಾರೆ ಎಂದು ಝೀ ವಾಹಿನಿ ಹೇಳಿಕೊಂಡಿದೆ. ಈ ಪೈಕಿ ಹಿರಿಯ ನಟ ರವಿಚಂದ್ರನ್ ಈ ಸೀಸನ್ ಗೆ ಜಡ್ಜ್ ಆಗಿ ಬರಲಿದ್ದು, ಇವರೊಂದಿಗೆ ನಟಿ ರಚಿತಾರಾಮ್ ಕೂಡ ಜಡ್ಜ್ ಸ್ಥಾನದಲ್ಲಿ ಕೂರಲಿದ್ದಾರೆ.

ಡ್ರಾಮಾ ಜ್ಯೂನಿಯರ್ ಸೀಸನ್ ೪ ಕ್ಕೆ ದಿನಗಣನೆ ನಡೆಸಿದ್ದು ಇದಕ್ಕಾಗಿ ಈಗಾಗಲೇ ಪ್ರೋಮೋಗಳನ್ನು ಸಿದ್ಧಪಡಿಸಲಾಗುತ್ತಿದೆ. ಹಿರಿಯ ನಟ ರವಿಚಂದ್ರನ್ ಅವರನ್ನು ಒಳಗೊಂಡ ಪ್ರೋಮೋ ಸಿದ್ಧಗೊಂಡಿದ್ದು ಪುಟ್ಟ ಮಕ್ಕಳು ರವಿಚಂದ್ರನ್ ಅವರನ್ನು ಕಿಡ್ನಾಪ್‌ಮಾಡಿದಂತೆ ಪ್ರೋಮೋ ಸಿದ್ಧವಾಗಿದೆಯಂತೆ. ಇನ್ನು ರಚಿತಾರಾಮ್ ಗಾಗಿ ಕೂಡ ಸ್ಪೆಶಲ್ ಪ್ರೋಮೋ ಬರಲಿದ್ದು, ಹೈದ್ರಾಬಾದ್ ವಿಮಾನ ನಿಲ್ದಾಣ, ರಾಮೋಜೀರಾವ್ ಫಿಲ್ಮ್ ಸಿಟಿ ಯಲ್ಲಿ ಪ್ರೋಮೋ ಶೂಟಿಂಗ್ ನಡೆದಿದೆ. ರೋಮೋ ಚಿತ್ರ ಖ್ಯಾತಿಯ ನಾಗಶೇಖರ್ ರಚಿತಾರಾಮ್ ಪ್ರೋಮೋ ನಿರ್ದೇಶಿಸಿದ್ದಾರಂತೆ. ಇನ್ನು ನಟಿ ರಚಿತಾರಾಮ್ ಝೀಯೊಂದಿಗೆ ತಮ್ಮ ಕೆರಿಯರ್ ನ್ನು ಎರಡನೇ ಸಲ ಆರಂಭಿಸುತ್ತಿದ್ದಾರೆ ಎನ್ನಬಹುದು. ಯಾಕೆಂದರೇ ರಚಿತಾರಾಮ್ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಮೊದಲ ಸಿನಿಮಾ ಅರಸಿ ಕೂಡ ಝೀ ಕನ್ನಡದಲ್ಲೇ ಮೂಡಿ ಬಂದಿತ್ತು.

ಈಗ‌ ಮತ್ತೊಮ್ಮೆ ಝೀ ಜೊತೆ ರಚಿತಾರಾಮ್ ಕೈಜೋಡಿಸಿದ್ದಾರೆ. ಸದ್ಯ ರಚಿತಾರಾಮ್ ನಟನೆಯ ಏಕ್ ಲವ್ ಯಾ ಸಿನಿಮಾರಿಲೀಸ್ ಗೆ ಸಿದ್ಧವಾಗಿದ್ದು ಈ ಸಿನಿಮಾದಲ್ಲಿ ರಚಿತಾರಾಮ್ ಸಖತ್ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಸದ್ಯ ದರ್ಶನ್ ನಟನೆಯ 55 ನೇ ಸಿನಿಮಾ ಕ್ರಾಂತಿಯಲ್ಲಿ ರಚಿತಾರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇದನ್ನೂ ಓದಿ : ವಿಜಯ್ ದೇವರಗೊಂಡ – ರಶ್ಮಿಕಾ ಮಂದಣ್ಣ ಪರಿಣಯ: ವರ್ಷಾಂತ್ಯದಲ್ಲಿ ಒಂದಾಗುತ್ತಾ ಟಾಲಿವುಡ್ ಜೋಡಿ

ಇದನ್ನೂ ಓದಿ :  ಹೃದಯಾಘಾತದಿಂದ ಆರ್‌ ಜೆ ರಚನಾ ಸಾವು : ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು

( Rachitha Ram Judge : enter the Kannada television industry as a reality show judge)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular