Udupi Hijab Controversy : ಹಿಜಾಬ್ ಹೋರಾಟಕ್ಕೆ ಟ್ವಿಸ್ಟ್ : ದೂರುದಾರ ವಿದ್ಯಾರ್ಥಿನಿ ಸಹೋದರನ ಮೇಲೆ ಹಲ್ಲೆ

ಉಡುಪಿ : ತಮ್ಮ ಮೂಲಭೂತ ಹಕ್ಕು ಹಿಜಾಬ್. ಹೀಗಾಗಿ ಶಾಲಾ ಕಾಲೇಜುಗಳ ಒಳಗೂ ಹಿಜಾಬ್ ಧರಿಸಲು ಅವಕಾಶ ಬೇಕು ಎಂಬ ಅಂಶವನ್ನು ಮುಂದಿಟ್ಟುಕೊಂಡು ಉಡುಪಿಯ ಆರು ವಿದ್ಯಾರ್ಥಿನಿಯರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹೋರಾಟದ ದೇಶದ ಗಡಿ ಮೀರಿ ಬೇರೆ ದೇಶದಲ್ಲೂ ಸದ್ದು ಮಾಡುತ್ತಿದೆ. ಈ ಮಧ್ಯೆ ಹೈಕೋರ್ಟ್‌ (Udupi Hijab Controversy) ಮೊರೆ ಹೋಗಿರುವ ವಿದ್ಯಾರ್ಥಿನಿಯೊಬ್ಬರ ಸಹೋದರನ ಮೇಲೆ ಹಲ್ಲೆ ನಡೆದಿದ್ದು, ಈ ಹಲ್ಲೆ ಹಿಂದೂಪರ ಸಂಘಟನೆಗಳಿಂದ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಹಿಜಾಬ್ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಉಡುಪಿಯ ಆರು ವಿದ್ಯಾರ್ಥಿನಿಯರು ಕಾಲೇಜು ಒಳಭಾಗದಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದ್ದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ಕಳೆದ ಒಂದು ವಾರದಿಂದ ಹೈಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಈ ಮಧ್ಯೆ ಆರು ವಿದ್ಯಾರ್ಥಿನಿಯರ ಪೈಕಿ ಒಬ್ಬಳಾದ ಹಸ್ರಾ ಶಿಫಾ ಸಹೋದರ ಸೈಫ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ ಎನ್ನಲಾಗ್ತಿದೆ. ಈ ವಿಚಾರವನ್ನು ಸ್ವತಃ ಹೋರಾಟದ ಮುಂಚೂಣಿಯಲ್ಲಿರುವ ವಿದ್ಯಾರ್ಥಿನಿ ಹಸ್ರಾ ಶಿಫಾ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ನನ್ನ ಸಹೋದರನ ಮೇಲೆ ಒಂದು ಗುಂಪಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಹಿಜಬ್ ಹೋರಾಟದಲ್ಲಿ ನನ್ನ ಅಣ್ಣ ನನ್ನ ಪರವಾಗಿ ನಿಂತಿದ್ದ. ಇದಕ್ಕಾಗಿಯೇ ಈ ದೌರ್ಜನ್ಯವೇ ? ನಮ್ಮ ಅಪಾರ ಆಸ್ತಿ ಮತ್ತು ಸ್ವತ್ತುಗಳನ್ನು ಧ್ವಂಸ ಮಾಡಲಾಗಿದೆ. ನಾನು ನನ್ನ ಧಾರ್ಮಿಕ ಹಕ್ಕನ್ನು ಕೇಳಬಾರದೆ ? ಹಲ್ಲೆಕೋರರೇ ನಿಮ್ಮ ಮುಂದಿನ ಗುರಿ ಯಾರು ? ಎಂದು ಟ್ವೀಟ್ ನಲ್ಲಿ ಹಸ್ರಾ ಶಿಫಾ ಆಕ್ರೋಶದಿಂದ ಪ್ರಶ್ನೆ ಮಾಡಿದ್ದಾರೆ. ಅಷ್ಟೇ ಅಲ್ಲ ಟ್ವೀಟ್ ನಲ್ಲಿ ಈ ಹಲ್ಲೆಗೆ ಸಂಘಪರಿವಾರದ ಗೂಂಡಾಗಳೇ ಕಾರಣ ಎಂದಿರುವ ಹಸ್ರಾ ಶಿಫಾ ಅವರ ಮೇಲೆ ಕ್ರಮ ಕೈಗೊಳ್ಳಿ ಎಂದು ಉಡುಪಿ ಪೊಲೀಸರು ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಮಾಡಿದ್ದಾರೆ.

udupi-hijab-controversy-assault-on-brother-of-complainant-student 1

ಸಂಘ ಪರಿವಾರದವರು ಎನ್ನಲಾದವರು ಶಿಫಾ ತಂದೆಯ ಹೋಟೆಲ್ ಗೆ ನುಗ್ಗಿ ಹಲ್ಲೆ ಆಕೆಯ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾರಂತೆ. ಮಾತ್ರವಲ್ಲ ಹೋಟೆಲ್ ಗಾಜು ಪುಡಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಹಸ್ರಾ ಶಿಫಾ ಸಹೋದರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಹಸ್ರಾ ಶಿಫಾ ಟ್ವೀಟ್ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದ್ದು ಹಲವರು ವಿದ್ಯಾರ್ಥಿನಿಯ ಬೆಂಬಲಕ್ಕೆ ನಿಂತಿದ್ದಾರೆ.

ಇದನ್ನೂ ಓದಿ : ಇನ್ನುಂದೆ ಬೀದಿ ಬದಿ ವ್ಯಾಪಾರಕ್ಕೂ ಬೇಕು ಸರ್ಟಿಫಿಕೇಟ್ : ನಗರದಲ್ಲಿ ಹೊಸ ನಿಯಮ ಜಾರಿ

ಇದನ್ನೂ ಓದಿ : ಈಶ್ವರಪ್ಪನವರಿಗೇ ಮುಳ್ಳಾಯ್ತಾ ಕೇಸರಿ ಬಾವುಟ : ರಾಜೀನಾಮೆಗೆ ಸೂಚಿಸಿದ ಬಿಜೆಪಿ ಹೈಕಮಾಂಡ್

( Udupi hijab controversy assault on brother of complainant student )

Comments are closed.