ಮಂಗಳವಾರ, ಏಪ್ರಿಲ್ 29, 2025
HomeCinemaLaka Laka Lamborghini : ಲ್ಯಾಂಬೋರ್ಗಿನಿಯಲ್ಲಿ ಗುಳಿಕೆನ್ನೆ ಬೆಡಗಿ: ರ್ಯಾಪರ್ ಗೆ ಜೊತೆಯಾದ ರಚಿತಾರಾಮ್

Laka Laka Lamborghini : ಲ್ಯಾಂಬೋರ್ಗಿನಿಯಲ್ಲಿ ಗುಳಿಕೆನ್ನೆ ಬೆಡಗಿ: ರ್ಯಾಪರ್ ಗೆ ಜೊತೆಯಾದ ರಚಿತಾರಾಮ್

- Advertisement -

ಸಾಲು ಸಾಲು ಸಿನಿಮಾದಲ್ಲಿ ನಟಿಸಿ ಗೆದ್ದ ಕನ್ನಡದ ಗುಳಿಕೆನ್ನೆ ಚೆಲುವೆ ರಚಿತಾರಾಮ್ ಬಿಡುವಿಲ್ಲದ ಸಿನಿಮಾಗಳ ಮಧ್ಯೆಯೂ ಅಭಿಮಾನಿಗಳಿಗೆ ಹೊಸತೊಂದು (Laka Laka Lamborghini ) ಗಿಫ್ಟ್ ನೀಡಿದ್ದಾರೆ. ಹೊಸ ವರ್ಷದ ಹೊಸ್ತಿಲಲ್ಲಿ ರಚಿತಾ ರಾಮ್ ಚಂದನ್‌ ಶೆಟ್ಟಿ ಜೊತೆ ( Chandan Shetty ) ಸಖತ್ ಬೋಲ್ಡ್ ಸ್ಟೆಪ್ ತಗೊಂಡಿದ್ದು, ಹೊಸ ಅವತಾರ ತಾಳಿದ ರಚಿತಾರಾಮ್ ( Rachita Ram) ನೋಡಿ ಅಭಿಮಾನಿಗಳು ಹುಬ್ಬೇರಿಸುತ್ತಿದ್ದಾರೆ.

ಹೌದು, ಕನ್ನಡದ ಲಕ್ಕಿ ಹಿರೋಯಿನ್ ಎಂಬ ಖ್ಯಾತಿ ಗುಳಿಕೆನ್ನೆಯ ಬೆಡಗಿ ರಚಿತಾರಾಮ್ ಗಿದೆ. ಕಾರಣ ಏನೆಂದರೇ ಇದುವರೆಗೂ ರಚಿತಾರಾಮ್ ನಾಯಕಿಯಾಗಿ ನಟಿಸಿದ ಬಹುತೇಕ ಸಿನಿಮಾಗಳು ಬಾಕ್ಸಾಫೀಸ್ ನಲ್ಲಿ ಗೆದ್ದಿವೆ. ಇದೇ ಕಾರಣಕ್ಕೆ ರಚಿತಾರಾಮ್ ಗೆ ಸಿನಿಮಾಗಳಲ್ಲಿ ಬೇಡಿಕೆ ವಿಪರೀತ ಹೆಚ್ಚಿದೆ. ಸದ್ಯ ಚಾಲೆಂಜಿಂಗ್ ಸ್ಟಾರ್ ಕ್ರಾಂತಿ ಸಿನಿಮಾಕ್ಕೆ ನಾಯಕಿ ಯಾಗಿರೋ ರಚಿತಾ ರಾಮ್ ಬ್ಯುಸಿ ಸಿನಿಮಾ ಶೆಡ್ಯೂಲ್ ಮಧ್ಯೆಯೂ ಲ್ಯಾಂಬೋರ್ಗಿನಿ ಏರಿದ್ದಾರೆ.

ರಚಿತಾರಾಮ್ ಲ್ಯಾಂಬೋರ್ಗಿನಿ ಕಾರ್ ಏರಿ ಎಲ್ಲಿಗೆ ಹೊರಟರು ಅಂತ ನೀವು ಯೋಚ್ನೆ ಮಾಡ್ತಿದ್ದಿರಾ ? ರಚಿತಾ ರಾಮ್ ಲ್ಯಾಂಬೋರ್ಗಿನಿ ಕಾರ್ ಏರಿಲ್ಲ.‌ ಬದಲಾಗಿ ಕನ್ನಡದ ಪ್ರತಿಭಾನ್ವಿತ ರ್ಯಾಪರ್ ಚಂದನ್ ಶೆಟ್ಟಿ ಜೊತೆ ರ್ಯಾಪ್ ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ರ್ಯಾಪರ್, ಸಂಗೀತ ನಿರ್ದೇಶಕ,ಗಾಯಕ ಚಂದನ್ ಶೆಟ್ಟಿ ಜೊತೆ ಮ್ಯೂಸಿಕ್ ವಿಡಿಯೋವೊಂದಕ್ಕೆ ಸೊಂಟ ಬಳುಕಿಸಿದ್ದಾರೆ.

ಅಲೆ ಅಲೆಲೇ ಇವ್ಳು ಚೆಂದಾಗವ್ಳೆ, ಒಳ್ಳೆ ರೆಡ್ ಕಲರ್ ಲ್ಯಾಂಬೋರ್ಗಿನಿ ಹಂಗೇ ಅವ್ಳೇ ಎಂದು ಚಂದನ್ ಹಾಡಿದ್ದಾರೆ. ಈ ಹಾಡಿನ ವಿಡಿಯೋಗೆ ರಚಿತಾರಾಮ್ ಡ್ಯಾನ್ಸ್ ಮಾಡಿದ್ದಾರೆ. ಈ ವಿಚಾರವನ್ನು ಸ್ವತಃ ಚಂದನ್ ಶೆಟ್ಟಿ ಖಚಿತಪಡಿಸಿದ್ದು, ತಮ್ಮ ಇನ್ ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಡಿನ ಪೋಸ್ಟರ್ ನ್ನು ಚಂದನ್ ಶೆಟ್ಟಿ ಶೇರ್ ಮಾಡಿದ್ದಾರೆ. ಈ ಮ್ಯೂಸಿಕ್ ವಿಡಿಯೋಗೆ ಚಂದನ್ ಸಾಹಿತ್ಯ ಬರೆದಿದ್ದು ತಾವೇ ಸಂಗೀತ ನಿರ್ದೇಶನ ಮಾಡಿ ಹಾಡಿದ್ದಾರೆ. ನಂದಕಿಶೋರ್ ಹಾಡನ್ನು ನಿರ್ದೇಶಿಸಿದ್ದಾರೆ. ನಂದಕಿಶೋರ್ ಜೊತೆ ಚಂದನ್ ಪೊಗರು ಸಿನಿಮಾದಲ್ಲಿ ಕೆಲಸ ಮಾಡಿದ್ದು, ಪೊಗರು ಸಿನಿಮಾದ ಖರಾಬು ಹಾಡನ್ನು ಬರೆದು ಹಾಡಿದ್ದರು.

ಹೊಸ ವರ್ಷದ ವೇಳೆ ಪಾರ್ಟಿಗಳ ರಂಗೇರಿಸಲು ಈ ಹಾಡು ತೆರೆಗೆ ಬರಲಿದೆ. ಇದಕ್ಕೂ ಮೊದಲು ಚಂದನ್ ಶೆಟ್ಟಿ 3ಪೆಗ್, ಚಾಕೋಲೇಟ್ ಗರ್ಲ್, ಪಾರ್ಟಿ ಫ್ರಿಕ್, ಟಕಿಲ್ ಹಾಡು ಬಿಡುಗಡೆ ಮಾಡಿದ್ದು ಸಖತ್ ಹಿಟ್ ಆಗಿವೆ. ಮೊನ್ನೆಮೊನ್ನೆ ಏಕ್ ಲವ್ ಯಾ ಸಿನಿಮಾದಲ್ಲಿ ಹೆಣ್ಣೆಗೂ ಎಣ್ಣೆ ಗೂ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ ಎಂದು ಹಾಡಿ ಕುಣಿದಿದ್ದ ರಚಿತಾ ರಾಮ್ ಮತ್ತೊಂದು ಹಾಟ್ ಹಾಟ್ ಹಾಡಿಗೆ ಮೈಬಳುಕಿಸಿದ್ದು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದ್ದಾರೆ.

ಇದನ್ನೂ ಓದಿ : Pushpa :The Rise : ಪುಷ್ಪಾ ಸಿನಿಮಾಗೆ ಹೊಸ ಸಂಕಷ್ಟ: ಸಮಂತಾ ಹೆಜ್ಜೆ ಹಾಕಿದ್ದ ನೃತ್ಯದ ವಿರುದ್ಧ ದಾಖಲಾಯ್ತು ಕೇಸ್​

ಇದನ್ನೂ ಓದಿ : Darshan Thoogudeepa : ಕೊಲ್ಲೂರಿನಲ್ಲಿ ನವಚಂಡಿಕಾಯಾಗ ನೆರವೇರಿಸಿದ ನಟ ದರ್ಶನ್‌

( Rachita Ram with Chandan Shetty Laka Laka Lamborghini Increased Craze By Poster)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular