Rajeshwari Tejaswi : ನಿರುತ್ತರದ ರಾಜೇಶ್ವರಿ ತೇಜಸ್ವಿ ನಿಧನ : ಸಾಹಿತಿ ಕೆಪಿ ಪೂರ್ಣಚಂದ್ರ ತೇಜಸ್ವಿ ಪತ್ನಿ

ಖ್ಯಾತ ಸಾಹಿತಿ ದಿವಂಗತ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ( KP Poornachandra Tejaswi ) ಅವರ ಪತ್ನಿ ರಾಜೇಶ್ವರಿ (Rajeshwari Tejaswi ಅವರು ಮಂಗಳವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮಗಳು ಸುಸ್ಮಿತಾ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಸಂಜೆ 5.30ರವರೆಗೂ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರಿನಲ್ಲಿ 1937ರಲ್ಲಿ ಜನಿಸಿದ್ದ ರಾಜೇಶ್ವರಿ ಅವರು 1966ರಲ್ಲಿ ಖ್ಯಾತ ಕವಿ ಕುವೆಂಪು ಅವರ ಪುತ್ರ ಪೂರ್ಣಚಂದ್ರ ತೇಜಸ್ವಿ ಅವರನ್ನು ಮದುವೆಯಾಗಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಆನರ್ಸ್‌ ಮತ್ತು ಎಂಎ ಓದುತ್ತಿದ್ದಾಗ ತೇಜಸ್ವಿ ಅವರ ಪರಿಚಯವಾಗಿತ್ತು. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.

ಹೊಲಿಗೆ, ಅಂಚೆಚೀಟಿ ಸಂಗ್ರಹ, ಕ್ರೋಶ ಹಾಕುವುದು ರಾಜೇಶ್ವರಿ ಅವರ ನೆಚ್ಚಿನ ಹವ್ಯಾಸವಾಗಿತ್ತು. ರಾಜೇಶ್ವರಿ ಅವರು ಬರೆದಿರುವ ‘ನನ್ನ ತೇಜಸ್ವಿ’ ಪುಸ್ತಕ ಈವರೆಗೆ ಐದು ಮುದ್ರಣಗಳನ್ನು ಕಂಡಿದೆ. ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಎನ್ನುವ ಅವರ ಮತ್ತೊಂದು ಪುಸ್ತಕವೂ ಜನಪ್ರಿಯವಾಗಿದೆ.

ಮೂಡಿಗೆರೆ ತಾಲ್ಲೂಕಿನ ಕಾಫಿತೋಟ ಮತ್ತು ಮನೆ ‘ನಿರುತ್ತರ’ದಲ್ಲಿ ತೇಜಸ್ವಿ ಅವರೊಂದಿಗೆ ವಾಸವಿದ್ದರು. ತೇಜಸ್ವಿ ನಿಧನದ ನಂತರವೂ ಅಲ್ಲಿಯೇ ವಾಸವಿದ್ದ ರಾಜೇಶ್ವರಿ ಅವರು ತೇಜಸ್ವಿ ಅವರ ಕೃಷಿ, ಸಾಹಿತ್ಯ ಹಾಗೂ ಹತ್ತಾರು ಹವ್ಯಾಸಗಳಿಗೆ ಹೆಗಲೆಣೆಯಾಗಿದ್ದವರು. ತೇಜಸ್ವಿ ಅವರ ಕೃಷಿ, ಸಾಹಿತ್ಯ ಹಾಗೂ ಹತ್ತಾರು ಹವ್ಯಾಸಗಳಿಗೆ ಹೆಗಲೆಣೆಯಾಗಿದ್ದವರು ರಾಜೇಶ್ವರಿ.

ಇದನ್ನೂ ಓದಿ : Karnataka Digital Media Forum : ಮಾಧ್ಯಮ ಲೋಕದಲ್ಲಿ ಕ್ರಾಂತಿಕಾರಿ ಬದಲಾವಣೆ, ಅಸ್ಥಿತ್ವಕ್ಕೆ ಬಂತು ಕರ್ನಾಟಕ ಡಿಜಿಟಲ್ ಮೀಡಿಯಾ ಫೋರಂ

ಇದನ್ನೂ ಓದಿ : Karnataka New CM : ರಾಜ್ಯಕ್ಕೆ ಮತ್ತೆ ಹೊಸ ಸಿಎಂ : ಬೊಮ್ಮಾಯಿ ಹುದ್ದೆಗೆ ಕಂಟಕವಾಯ್ತು ಮಂಡಿನೋವು

ಇದನ್ನೂ ಓದಿ : Omicron variant fear : ಹೆಚ್ಚುತ್ತಿದೆ ಓಮಿಕ್ರಾನ್ ಆತಂಕ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಬಿಡುಗಡೆ

Rajeshwari Tejaswi wife of KP Poornachandra Tejaswi Died in Bengaluru

Comments are closed.