ಸ್ಯಾಂಡಲ್‌ವುಡ್ ನಲ್ಲಿ ಅತ್ಯಂತ ಬ್ಯುಸಿಯಾಗಿರೋ ನಟಿಮಣಿ ಅಂದ್ರೇ ರಚಿತಾ ರಾಮ್. ಅಜಯ್ ರಾವ್ ರಿಂದ ಆರಂಭಿಸಿ ದರ್ಶನ್ ತನಕ ಎಲ್ಲ ಸ್ಟಾರ್ ಗಳ ಜೊತೆ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚ್ತಿರೋ ಗುಳಿಕೆನ್ನೆಯ ಬೆಡಗಿ, ಈ ವರ್ಷ ಸಖತ್ ಹಾಟ್ ಹಾಡುಗಳಲ್ಲೂ ಕಾಣಿಸಿಕೊಳ್ಳೋ ಮೂಲಕ ಮತ್ತಷ್ಟು ಬೇಡಿಕೆ ಹೆಚ್ಚಿಸಿ ಕೊಂಡಿದ್ದಾರೆ. ಹೀಗೆ ಸಿನಿಮಾ, ಡ್ಯಾನ್ಸ್, ಪ್ರಮೋಶನ್ ಅಂತೆಲ್ಲ ಬ್ಯುಸಿಯಾಗಿರೋ ರಚಿತಾ ರಾಮ್ ಇವತ್ತು ಏಕಾಏಕಿ ಪೊಲೀಸ್ ಠಾಣೆ (Rachitha Ram in Police Station) ಮೆಟ್ಟಿಲೇರಿದ್ದಾರೆ.
ಅಷ್ಟಕ್ಕೂ ಸದ್ಯ ಸ್ಯಾಂಡಲ್ ವುಡ್ ಕ್ವೀನ್ ತರಾ ಮೆರಿತಿರೋ ರಚಿತಾ ರಾಮ್ ಗೆ ಪೊಲೀಸ್ ಠಾಣೆ ಮೆಟ್ಟಿಲೇರೋವಂತದ್ದು ಏನಾಯ್ತು ಅಂತ ಯೋಚಿಸ್ತಿದ್ದೀರಾ ? ರಚಿತಾ ರಾಮ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಸೌಹಾರ್ದಯುತ ಭೇಟಿಗೆ. ಹೌದು ಮಂಗಳೂರಿಗೆ ವೈಯಕ್ತಿಕ ಕಾರ್ಯಕ್ರಮದ ಹಿನ್ನೆಲೆಯಲ್ಲಿ ರಚಿತಾ ರಾಮ್ ತೆರಳಿದ್ದರು. ಈ ವೇಳೆ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ಆಹ್ವಾನದ ಮೇರೆಗೆ ರಚಿತಾರಾಮ್ ಪೊಲೀಸ್ ಕಮೀಷನರ್ ಕಚೇರಿಗೆ ತೆರಳಿದ್ದಾರೆ.
ಅಲ್ಲಿ ಪೊಲೀಸರ್ ಜೊತೆ ಸಂವಾದದಲ್ಲಿ ರಚಿತಾ ರಾಮ್ ಪಾಲ್ಗೊಂಡಿದ್ದು, ಪೊಲೀಸ್ ಸಿಬ್ಬಂದಿಯ ಜೊತೆಗೆ ಸೆಲ್ಪಿಗೂ ಪೋಸ್ ಕೊಟ್ರು. ಸದಾಕಾಲ ಕರ್ತವ್ಯದಲ್ಲಿ ಬ್ಯುಸಿಯಾಗಿರೋ ಪೊಲೀಸ್ ಸಿಬ್ಬಂದಿಯೂ ಕೂಡ ಸಿನಿಮಾ ನಟಿ ರಚಿತಾ ರಾಮ್ ಜೊತೆ ಮಾತನಾಡಿ ಸಮಯ ಕಳೆದು ತಮ್ಮ ಪ್ರಶ್ನೆಗಳನ್ನು ಕೇಳಿ ಪೋಟೋ ತೆಗೆಸಿಕೊಂಡು ಸಂಭ್ರಮಿಸಿದರು. ರಚಿತಾ ರಾಮ್ ಕೂಡ ಪೊಲೀಸರ ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದ್ದಲ್ಲದೇ, ಕೊರೋನಾ ಸಂದರ್ಭದಲ್ಲೂ ಪ್ರಾಣದ ಹಂಗು ತೊರೆದು ದುಡಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದರು. ರಚಿತಾರಾಮ್ ಪಾಲಿಗೆ ಇಂದು ಮಹತ್ವದ ದಿನವಾಗಿದ್ದು ಅವರ ನಟನೆಯ ಏಕ್ ಲವ್ ಯಾ ಸಿನಿಮಾದ ಮೀಟ್ ಮಾಡನಾ ಇಲ್ಲ ಡೇಟ್ ಮಾಡನಾ ಹಾಡಿನ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ.
ಶಿವಮೊಗ್ಗದಲ್ಲಿ ಹಾಡು ರಿಲೀಸ್ ಆಗಿದ್ದು ಯೂಟ್ಯೂಬ್ ನಲ್ಲಿ ಸಖತ್ ವೀವ್ಸ್ ಪಡೆಯುತ್ತಿದೆ. ಏಕ್ ಲವ್ ನಟಿ ರಕ್ಷಿತಾ ತಮ್ಮ ಸಹೋದರ ರಾಣಾಗಾಗಿ ನಿರ್ಮಿಸುತ್ತಿರುವ ಈ ಸಿನಿಮಾ ವನ್ನು ಪತಿ ಜೋಗಿ ಪ್ರೇಮ್ ನಿರ್ದೇಶಿಸಿದ್ದಾರೆ. ಈಗಾಗಲೇ ಈ ಸಿನಿಮಾದಲ್ಲಿ ಮಂಗ್ಲಿ ಧ್ವನಿಯಲ್ಲಿ ಮೂಡಿಬಂದ ಹೆಣ್ಣೆಗೂ ಎಣ್ಣೆಗೂ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ ಹಾಡು ಸಖತ್ ಹಿಟ್ ಆಗಿದ್ದು , ಇದೇ ಮೊದಲ ಬಾರಿಗೆ ರಚಿತಾರಾಮ್ ಎಣ್ಣೆ ಬಾಟಲಿ ಹಿಡಿದು ಸಖತ್ ಹಾಟ್ ಸ್ಟೆಪ್ ನಲ್ಲಿ ಕುಣಿದಿದ್ದಾರೆ.
ಇದನ್ನೂ ಓದಿ : Kiccha Sudeep Nammane Maduve : ಸಾಮೂಹಿಕ ವಿವಾಹ ಮಾಡಿಸೋಕೆ ಮುಂದಾದ ನಟ ಕಿಚ್ಚ ಸುದೀಪ್
ಇದನ್ನೂ ಓದಿ : Radhe Shyam : ಯುಟ್ಯೂಬ್ನಲ್ಲಿ ಧೂಳೆಬ್ಬಿಸಿದ ರಾಧೆ ಶ್ಯಾಮ್ ಸಿನಿಮಾ ಟ್ರೇಲರ್..!
( Rachitha Ram in Police Station, who walked up to the police station before the film release)