Job Alert in Flipkart Bengaluru: ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗಾವಕಾಶ; ಜವಾಬ್ದಾರಿಯು ಹುದ್ದೆ, ಓರ್ವ ಅಭ್ಯರ್ಥಿಗೆ ಮಾತ್ರ ಅವಕಾಶ

ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್ (E-Commerce Job Alert in Flipkart) ತನ್ನ ಬೆಂಗಳೂರಿನ ಕಚೇರಿಯಲ್ಲಿ (Bengaluru Office) ಸಹಾಯಕ ವ್ಯವಸ್ಥಾಪಕರ ಕೆಲಸಕ್ಕೆ ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಬೆಂಗಳೂರಿನ ಸಿಟಿ ಲಾಜಿಸ್ಟಿಕ್ಸ್ ತಂಡದಲ್ಲಿ ಕೆಲಸ ಮಾಡಬೇಕಿರುವ ಸಹಾಯಕ ವ್ಯವಸ್ಥಾಪಕ ಹುದ್ದೆ ಇದಾಗಿದ್ದು ಷರತ್ತುಬದ್ಧ ನಷ್ಟಗಳು ಮತ್ತು ವಂಚನೆ ತಡೆಗಟ್ಟುವ ಚಾರ್ಟರ್ ಅನ್ನು ನಿರ್ವಹಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ. ಅಂದಹಾಗೆ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅಗತ್ಯವಿರುವುದು ಓರ್ವ ಅಭ್ಯರ್ಥಿ ಮಾತ್ರ, ಈ ಕಾರಣಕ್ಕೆ ನಿಮಗೆ ಆಸಕ್ತಿ ಮತ್ತು ಅರ್ಹತೆಯಿದ್ದಲ್ಲಿ ನೀವು ಆನ್‌ಲೈನ್‌ನಲ್ಲಿ ಈಕೂಡಲೇ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಿಟಿ ಲಾಜಿಸ್ಟಿಕ್ಸ್ ತಂಡವು ಗ್ರಾಹಕ, ಮಾರಾಟಗಾರ ಅಥವಾ ಉದ್ಯೋಗಿ, ಈ ಮೂರೂ ಹಂತಗಳಲ್ಲಿಯೂ ಉತ್ತಮ ಅನುಭವ ಒದಗಿಸುವ ಜವಾಬ್ದಾರಿಗಳನ್ನು ಹೊಂದಿರುತ್ತದೆ., ವಿಭಿನ್ನ ಸೇವೆಗಳ ಮೂಲಕ ಕಂಪನಿಯ ಒಟ್ಟಾರೆ ಬೆಳವಣಿಗೆಯನ್ನು ಹೆಚ್ಚಿಸುವ ಕೆಲಸವನ್ನು ಈ ತಂಡ ನಿಭಾತಿಸುತ್ತದಲ್ಲದೇ, ಸರಕು ಸಾಗಣೆ ಮಾಡುವಾಗ ಆಗಬಹುದಾದ ಸಂಭಾವ್ಯ ನಷ್ಟವನ್ನು ಕಡಿಮೆಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತದೆ. ಈಮೂಲಕ ಕಂಪನಿಗೆ ಆಗಬಹುದಾದ ನಷ್ಟವನ್ನು ಕಡಿಮೆಗೊಳಿಸುವುದು ಅಥವಾ ನಷ್ಟವೇ ಆಗದಂತೆ ತಡೆಯುವುದು ಸಿಟಿ ಲಾಜಿಸ್ಟಿಕ್‌ಸ್ ತಂಡದ ಮುಖ್ಯ ಕೆಲಸವಾಗಿದೆ. ಜವಾಬ್ದಾರಿಯುತ ಕೆಲಸ ಇದಾಗಿದ್ದು ಕೇವಲ ಓರ್ವ ಅರ್ಹ ಅಭ್ಯರ್ಥಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಸಹಾಯಕ ವ್ಯವಸ್ಥಾಪಕರಾಗಲು ಅಗತ್ಯವಿರುವ ಅರ್ಹತೆಗಳೇನು?
ಅಭ್ಯರ್ಥಿಗಳು ಪದವಿ ವ್ಯಾಸಂಗ ಪೂರ್ಣಗೊಳಿಸಿರಬೇಕು. ಜೊತೆಗೆ ಲಾಜಿಸ್ಟಿಕ್ಸ್ ಅಥವಾ ಇ-ಕಾಮರ್ಸ್ ಉದ್ಯಮದಲ್ಲಿ ಸಪ್ಲೈ ಚೈನ್ ಪ್ರಕ್ರಿಯೆಯ ನಿರ್ವಹಣೆಯಲ್ಲಿ ಮೂರಕ್ಕೂ ಹೆಚ್ಚು ವರ್ಷಗಳ ಅನುಭವ ಹೊಂದಿರಬೇಕು.

  • ಅತ್ಯುತ್ತಮ ವಿಶ್ಲೇಷಣಾ ಕೌಶಲ, ಸ್ಟೇಕ್‌ಹೋಲ್ಡರ್‌ಗಳ ನಿರ್ವಹಣಾ ಸಾಮರ್ಥ್ಯ ಹೊಂದಿರಬೇಕು. 
  • R, Python, SQL ಮುಂತಾದವುಗಳಲ್ಲಿ ಪರಿಣತಿ ಹೊಂದಿದ್ದರೆ ಇನ್ನೂ ಚೆನ್ನ.
  • ಮೂರರಿಂದ ಎಂಟು ವರ್ಷಗಳ ಅನುಭವ ಹೊಂದಿದ್ದರೆ ಬಹಳ ಉತ್ತಮ
  • ಸಮಸ್ಯೆಗಳನ್ನು ಪರಿಹರಿಸುವ ಗುಣ, ತಂಡ ನಿರ್ವಹಣೆ, ದತ್ತಾಂಶಗಳ ನಿರ್ವಹಣೆ, ಎಕ್ಸೆಲ್ ಪರಿಣತಿ ಹೊಂದಿರಬೇಕು.

ಹೇಗೆ ಅಪ್ಲೈ ಮಾಡಬಹುದು?
ಫ್ಲಿಪ್‌ಕಾರ್ಟ್‌ನ ಉದ್ಯೋಗ ಮಾಹಿತಿಗಾಗಿಯೇ ಮೀಸಲಿರುವ ವೆಬ್‌ಸೈಟ್‌ www.flipkartcareers.com ನ ಮೂಲಕ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಥವಾ ಈ ಲಿಂಕ್ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ. ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸುವಿರಾದಲ್ಲಿ ನಿಮ್ಮ ರೆಸ್ಯೂಮ್, ಪ್ರಸ್ತುತ ಸಿಟಿಸಿ, ನೊಟೀಸ್ ಅವಧಿ ಮುಂತಾದ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.

ಇದನ್ನೂ ಓದಿ: Google Search Tricks : ಗೂಗಲ್‌ ಸರ್ಚ್‌ನಲ್ಲಿ ನಮಗೆ ಬೇಕಾದ ಮಾಹಿತಿಯನ್ನೇ ಪಡೆಯುವುದು ಹೇಗೆ? ಸರಳವಾದ 5 ವಿಧಾನಗಳು

ಇದನ್ನೂ ಓದಿ: Good News: ಸಯಾಮಿ ಅವಳಿಗಳಿಗೆ ಸಿಕ್ಕಿತು ಸರ್ಕಾರಿ ಕೆಲಸ; ಜೀವನವನ್ನು ಧನಾತ್ಮಕವಾಗಿ ನೋಡಲು ಇವರೇ ಮಾದರಿ

(Bengaluru Flipkart Job Alert Check job details in Kannada and apply online)

Comments are closed.