ಸಿನಿಮಾಗಳ ಜೊತೆ ಜೊತೆಗೆ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸ್ಯಾಂಡಲ್ ವುಡ್ ನಟಿ ಇದೀಗ ನ್ಯೂಸ್ ರೀಡರ್. ರಚಿತಾ ರಾಮ್ ಸಿನಿಮಾ ಬಿಟ್ಟು ಆಂಕರ್ ಆಗಿರೋದನ್ನು ಕಂಡು ಅಭಿಮಾನಿಗಳು ಅರೆಕ್ಷಣ ಶಾಕ್ ಆಗಿದ್ದಾರೆ. ಇದೇನಪ್ಪಾ ರಚಿತಾ ರಾಮ್ ಗೆ ಸಿನಿಮಾ ಬೇಸರ ಕೊಡ್ತಾ.. ಏಕಾಏಕಿ ವಾರ್ತಾ ನಿರೂಪಕಿ ಆಗಿದ್ದೇಕೆ ಅಂತೆಲ್ಲಾ ಹತ್ತಾರು ಪ್ರಶ್ನೆಗಳು ನಿಮ್ಮ ತಲೆಯಲ್ಲಿ ಮೂಡದೆ ಇರದು. ಆದ್ರೀಗ ರಚಿತಾ ರಾಮ್ ನ್ಯೂಸ್ ರೀಡ್ ಮಾಡಿರೋ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಸ್ ಆಗ್ತಿದೆ.

ಕೊರೊನಾ ಹಿನ್ನೆಲೆಯಲ್ಲಿ ಸ್ಥಗಿತವಾಗಿದ್ದ ಧಾರವಾಹಿಗಳ ಹೊಸ ಕಂತುಗಳು ಜೂನ್ 1ರಿಂದ ಆರಂಭವಾಗುತ್ತಿವೆ. ಅದ್ರಲ್ಲೂ ಕಲರ್ಸ್ ಕನ್ನಡ ವಾಹಿನಿ ಈಗಾಗಲೇ ವಿಭಿನ್ನ ಪ್ರೋಮೋಗಳನ್ನು ಹರಿಬಿಟ್ಟು ಪ್ರೇಕ್ಷಕರಿಗೆ ಕುತೂಹಲ ಮೂಡಿಸುತ್ತಿದೆ.

ಬಣ್ಣ ಬದಲಾಗಿದೆ. ಬಂದ ಬಿಗಿಯಾಗಿದೆ ಅನ್ನೋ ಪ್ರೋಮೋ ಸಖತ್ ಸೌಂಡ್ ಮಾಡ್ತಿದೆ. ಅದರ ನಡುವಲ್ಲೇ ರಚಿತಾ ರಾಮ್ ನ್ಯೂಸ್ ರೀಡಿಂಗ್ ಮೂಲಕ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡೋ ಪ್ರೋಮೋ ಸಖತ್ ಕ್ಯೂಟ್ ಆಗಿದೆ.

ನಟಿ ರಚಿತಾ ರಾಮ್

ನಟಿ ರಚಿತಾ ರಾಮ್