Radhe Shyam: ರಾಧಾ ಕೃಷ್ಣ ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುನಿರೀಕ್ಷಿತ ಸಿನಿಮಾ ರಾಧೆ ಶ್ಯಾಮ್ ಟ್ರೇಲ್ರ್ ಗುರುವಾರ ರಿಲೀಸ್ ಆಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದೆ. ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವು ಜನವರಿ 14ರಂದು ರಿಲೀಸ್ ಆಗಲಿದೆ.
ಈ ಸಿನಿಮಾದಲ್ಲಿ ನಟ ಪ್ರಭಾಸ್ ಈ ಪ್ರೀತಿ -ಪ್ರೇಮ ಹಾಗೂ ಮದುವೆಗಳಲ್ಲಿ ನಂಬಿಕೆ ಹೊಂದಿರದ ವ್ಯಕ್ತಿಯಾಗಿ ನಟಿಸಿದ್ದಾರೆ. ಸ್ವಲ್ಪ ಕಾಲದವರೆಗೆ ಪ್ರಭಾಸ್ ಒಬ್ಬ ವಿದೇಶಿ ಯುವತಿಯೊಂದಿಗೆ ಫ್ಲರ್ಟ್ ಮಾಡುತ್ತಿರುತ್ತಾರೆ. ಆದರೆ ಆಕೆ ಯಾವಾಗ ಐ ಲವ್ ಯೂ ಎಂದು ಹೇಳುತ್ತಾಳೋ ಆಗ ಶ್ಯಾಮ್ ನನಗೆ ಫ್ಲರ್ಟ್ ಮಾಡಲು ಮಾತ್ರ ಎಂದು ಹೇಳುತ್ತಾನೆ.
ಆದರೆ ಪೂಜಾ ಹೆಗ್ಡೆ ಎಂಟ್ರಿ ಬಳಿಕ ಪ್ರಭಾಸ್ ಆಕೆಯೊಂದಿಗೆ ಪ್ರೇಮದಲ್ಲಿ ಬೀಳುತ್ತಾರೆ. ಆದರೆ ಟ್ರೇಲರ್ನಲ್ಲೊಂದು ಟ್ವಿಸ್ಟ್ ಇಡಲಾಗಿದ್ದು ಈತ ಒಬ್ಬ ಸಾಮಾನ್ಯ ಮನುಷ್ಯ ಮಾತ್ರವಲ್ಲ ಬದಲಾಗಿ ಪ್ರಖ್ಯಾತ ಹಸ್ತ ಸಾಮುದ್ರಿಕ ಮಹಾನ್ ವಿಕ್ರಮಾದಿತ್ಯ ಎಂದು ತಿಳಿದು ಬರುತ್ತದೆ.
ಇದಾದ ಬಳಿಕ ಟೈಟಾನಿಕ್ ಹಡಗು ಮುಳುಗಿದಂತೆ, ಪ್ರಭಾಸ್ ಬೆಂಕಿಯ ಚೆಂಡಿನೊಂದಿಗೆ ತೇಲುವುದು. ರಕ್ತಸಿಕ್ತಳಾಗಿದ್ದ ಪೂಜಾ ಬಾತ್ ಟಬ್ನಲ್ಲಿ ಮುಳುಗುವುದು ಹಾಗೂ ಸ್ಪೋಟ ಹೀಗೆ ವಿಚಿತ್ರವಾದ ದೃಶ್ಯಗಳು ಸಹ ಟ್ರೇಲರ್ನಲ್ಲಿದ್ದ ಸಿನಿಮಾದ ಬಗ್ಗೆ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ಯುಟ್ಯೂಬ್ನಲ್ಲಿ ಟ್ರೇಲರ್ ವೀಕ್ಷಿಸಿದ ಅಭಿಮಾನಿಗಳು ಕಮೆಂಟ್ ಬಾಕ್ಸಿನಲ್ಲಿ ಟ್ರೇಲರ್ ಬಗ್ಗೆ ಪ್ರಶಂಸೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಭೂಷಣ್ ಕುಮಾರ್, ವಂಶಿ ಹಾಗೂ ಪ್ರಮೋದ್ ನಿರ್ಮಿಸಿರುವ ರಾಧೆ ಶ್ಯಾಮ್ ಹಿಂದಿ, ಕನ್ನಡ, ತಮಿಳು ತೆಲಗು, ಮಲಯಾಳಂನಲ್ಲಿ ಮೂಡಿ ಬಂದಿದೆ. ಭಾಗ್ಯಶ್ರೀ, ಮುರುಳಿ ಶರ್ಮಾ, ಸಚಿನ್ ಖೇಡೇಕರ್, ಪ್ರಿಯದರ್ಶಿ, ಸಶಾ ಚೆಟ್ರಿ, ಕುನಾಲ್ ರಾಯ್ ಕಪೂರ್ ಹಾಗೂ ಸತ್ಯನ್ ಸೇರಿದಂತೆ ಅಪಾರ ತಾರಾ ಬಳಗವನ್ನು ಹೊಂದಿರುವ ಈ ಸಿನಿಮಾವು ಈ ವರ್ಷದ ಜುಲೈನಲ್ಲಿ ರಿಲೀಸ್ ಆಗಬೇಕಿತ್ತು . ಆದರೆ ಕೋವಿಡ್ 19 ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.
Radhe Shyam trailer: Prabhas wants a ‘flirtationship’ but Pooja Hegde wins his heart with 97 kisses. Watch
ಇದನ್ನು ಓದಿ :Kiccha Sudeep Nammane Maduve : ಸಾಮೂಹಿಕ ವಿವಾಹ ಮಾಡಿಸೋಕೆ ಮುಂದಾದ ನಟ ಕಿಚ್ಚ ಸುದೀಪ್
ಇದನ್ನೂ ಓದಿ :KV Raju No More: ಖ್ಯಾತ ನಿರ್ದೇಶಕ ಕೆ.ವಿ ರಾಜು ಇನ್ನಿಲ್ಲ : ಸ್ಯಾಂಡಲ್ವುಡ್ನಲ್ಲಿ ಮಡುಗಟ್ಟಿದ ಶೋಕ