TVS Apache RTR 165 RP: ಬೈಕ್ ಪ್ರಿಯರಿಗೆ ಸಿಹಿ ಸುದ್ದಿ: ಟಿವಿಎಸ್ ಹೊಸ ಬೈಕ್ ಅಪಾಚೆ 165 ನಲ್ಲಿ ಏನುಂಟು, ಏನಿಲ್ಲ?

ಟಿವಿಎಸ್ ಕಂಪೆನಿ ತನ್ನ ಅಪಾಚೆ ಬೈಕಿನ ಸರಣಿಯಲ್ಲಿ (TVS Apache) ರೇಸ್ ಪರ್ಫಾರ್ಮೆನ್ಸ್ ಅಪಾಚೆ ಆರ್ ಟಿಆರ್ 165 ಆರ್ ಪಿ (RTR 165 RP) ಎನ್ನುವ ಹೊಸಬೈಕನ್ನು ಬಿಡುಗಡೆ ಮಾಡಿದೆ. ಇದು ಲಿಮಿಟೆಡ್ ಎಡಿಷನ್ ಸೀರಿಸ್ ಅಂತ ಕಂಪೆನಿ ಘೋಷಣೆ ಮಾಡಿಕೊಂಡಿದೆ. ಈ ಬೈಕ್ 165 ಸಿಸಿ ಹಾಗೂ ಕೂಲ್ ಎಂಜಿನ್ ತಂತ್ರಜ್ಞಾನ ಹೊಂದಿರುವ ಈ ಹೊಸ ಅಪಾಚೆಯ ಬೆಲೆ ಹೆಚ್ಚೇನಿಲ್ಲ, ಪ್ರಸ್ತುತ ಇದರ ಬೆಲೆ 1.45 ಲಕ್ಷ (ಎಕ್ಸ್ ಶೋರೂಮ್ ಬೆಲೆ) ರೂ. ಮಾತ್ರ.

ಕಡಿಮೆ ಬಜೆಟ್ ನಲ್ಲಿ ಉತ್ತಮ ದ್ವಿಚಕ್ರವಾಹನಗಳನ್ನು ಉತ್ಪಾದಿಸುವ ಟಿವಿಎಸ್ ಕಂಪೆನಿ ಮಧ್ಯಮವರ್ಗ ಸ್ನೇಹಿ ಎನಿಸಿದೆ. ಅಪಾಚೆ ಸೀರೀಸ್ ನಲ್ಲಿ ಬಂದ ಆರ್ ಆರ್ 310 ಬೈಕು ಇದಕ್ಕೆ ಉದಾಹರಣೆ. ಕಡಿಮೆ ಬಜೆಟ್ ನಲ್ಲಿಯೇ ರೇಸ್ ಬೈಕಿನ ಸೌಲಭ್ಯ ಕೊಡಬೇಕು ಅಂತ ಅಪಾಚೆ ರೇಂಜಿನ ದ್ವಿಚಕ್ರವಾಹನದಲ್ಲಿ ರೇಸ್ ಬೈಕಿನ ತಂತ್ರಜ್ಞಾನ ಹಾಗೂ ಎಂಜಿನಿಯರಿಂಗ್ ಅನ್ನು ಬಳಸಿ ಈ ಅಪಾಚೆ ಆರ್ ಟಿಆರ್ 165 ಆರ್ ಪಿ. ಬೈಕ್ ಅನ್ನು ರೂಪಿಸಲಾಗಿದೆ. ಇದು  ಭಾರತೀಯ ದ್ವಿಚಕ್ರ ವಾಹನ ರಂಗದಲ್ಲಿ ಮೈಲಿಗಲ್ಲಾಗಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಹಾಗಾದರೆ, ಈ ವಾಹನದಲ್ಲಿ ಏನೇನೆಲ್ಲಾ ಇದೆ ನೋಡೋಣ ಬನ್ನಿ

ಡಿಸೈನ್
ಅಪಾಚೆ ಆರ್ ಟಿಆರ್ 160 4ವಿಯಲ್ಲಿ ಬಳಸಿದ್ದ ಫೀಚರ್, ತಂತ್ರಜ್ಞಾವನ್ನು ಆಧಾರದವಾಗಿಟ್ಟು ಕೊಂಡೇ ಅಪಾಚೆ ಆರ್ ಟಿಆರ್ 165 ಆರ್ ಪಿ ಬೈಕನ್ನು ರೂಪಿಸಿರುವುದು. ಇದರಲ್ಲಿರುವ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಕ್ಲಚ್, ಬ್ರೇಕ್ ಲಿವರ್ ಹಾಗೂ ಕೆಂಪು ಲೋಹದ ಚಕ್ರಗಳು, ಇದಕ್ಕೆ ಮ್ಯಾಚಿಂಗ್ ಆಗುವ ಸೀಟುಗಳು, ಕೆಂಪು ಹ್ಯಾಂಡ್ಲು, ಕಸ್ಟಮೈಸ್ಡ್ ಸ್ಟಿಕರ್, ಲಗ್ಸುರಿಯಾಗಿ ಕಾಣುವ ಟ್ಯಾಂಕ್ ಎಲ್ಲವೂ ಅಪಾಚೆ 165 ಬೈಕಿಗೆ ಹೊಸ ‘ರೇಸೀ’ ಲುಕ್ ನೀಡಿದೆ. ಟ್ಯಾಂಕ್ ಮೇಲೆ ಕಂಪೆನಿಯ 15ನೇ ವಾರ್ಷಿಕೋತ್ಸವದ ಲೋಗೋ ಇರುವುದು ಬೈಕಿಗೆ ವಿಶೇಷ ಕಳೆ ತಂದುಕೊಟ್ಟಿದೆ.

ಫೀಚರ್ಸ್
ಅಪಾಚೆ 165 ಬೈಕು ಡಿಜಿಟಲೈಸ್ಡ್ ತಂತ್ರಜ್ಞಾನದ ಕೂಸು. ಸೊನ್ನೆಯಿಂದ 60 ತನಕ ಟೈಮರ್ ಹೊಂದಿದೆ. ಟಾಪ್ ಸ್ಪೀಡ್ ರೆಕಾರ್ಡ್ ರ್ ಕೂಡ ಇದರಲ್ಲಿದೆ. ಸ್ಕಿಡ್ ಆಗದಂತ ಕ್ಲಚ್ ಇದೆ. ಅಲ್ಲದೆ ಅಪಾಚೆ ಆರ್ ಟಿ ಆರ್ 160 4 ವಿಯಲ್ಲಿರುವ ಎಲ್ಲ ಸೌಲಭ್ಯಗಳು ಇದರಲ್ಲಿರುವುದರಿಂದ ಸುಖಪ್ರಯಾಣ ಸುಲಭ.

ಎಂಜಿನ್ , ಗೇರ್ ಬಾಕ್ಸ್
ಅಪಾಚೆ 165,  164.9 ಸಿಸಿ ಬೈಕು. ಒಂದೇ ಸಿಲಿಂಡರ್, ನಾಲ್ಕು ವ್ಯಾಲ್ವ್ ಎಂಜಿನ್ ಇರೋದರಿಂದ 19 ಬಿಎಚ್ ಪಿ ಇದೆ. ಎಂಜಿನ್ ನ ಇನ್ ಟೇಕ್ ಸಾಮರ್ಥ್ಯವನ್ನು ಶೇ.35ರಷ್ಟು ಹೆಚ್ಚಿಸಿದ್ದಾರೆ. ಈ ಬೈಕಿನ ಚಕ್ರಗಳಿಗೆ ಒಂದು ನಿಮಿಷಕ್ಕೆ 10ಸಾವಿರ ಸಲ ತಿರುಗುವ ಸಾಮರ್ಥ್ಯ ಹೊಂದಿವೆ. ಈ ಬೈಕಿನ ಒಟ್ಟು ಗೇರುಗಳ ಸಂಖ್ಯೆ ಐದು.  ಹೀಗಾಗಿ, ಸುಖವಾಗಿ, ವೇಗವಾಗಿ ಪ್ರಯಾಣ ಮಾಡಬಹುದು.

ಶಾಕಬ್ಸರ್ ಇತ್ಯಾದಿ
ವಿಶೇಷ ಅಂದರೆ, ಬೈಕಿನಲ್ಲಿ ಹಿಂದೆ ಒಂದು, ಮುಂದೆ ಎರಡು ಶಕ್ತಿಶಾಲಿ ಶಾಕಬ್ಸರ್ ಗಳಿವೆ. ಇವುಗಳನ್ನು ಟೆಲಿಸ್ಕೋಪಿಂಗ್ ಶಾಕಬ್ಸರ್ ಅಂತಾರೆ. ಬೈಕಿನ ಹಿಂದೆ ಒಂದು, ಮುಂದಿ ಭಾಗದಲ್ಲಿ ಎರಡು ಶಾಕಬ್ಸರ್ ಗಳು ಇವೆ. ಇದರಲ್ಲಿರುವ ವ್ಯಾಲ್ವ್ ಗಳು ಹಿಂದಿನ ಸೀರೀಸ್ ಬೈಕಿಗಿಂತ ಶೇ.15ರಷ್ಟು ದಪ್ಪನಾಗಿರುವುದರಿಂದ ಬೈಕನ್ನು ಹಳ್ಳದಲ್ಲಿ ಇಳಿಸಿದರೂ, ದಿಣ್ಣೆಮೇಲೆ ಹತ್ತಿಸಿದರೂ ಸಮಸ್ಯೆ ಇಲ್ಲ.

ಇದನ್ನೂ ಓದಿ: Good News: ಸಯಾಮಿ ಅವಳಿಗಳಿಗೆ ಸಿಕ್ಕಿತು ಸರ್ಕಾರಿ ಕೆಲಸ; ಜೀವನವನ್ನು ಧನಾತ್ಮಕವಾಗಿ ನೋಡಲು ಇವರೇ ಮಾದರಿ


(TVS Apache RTR 165 RP launched things you must know)

Comments are closed.